ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ(National Championship) ಕಂಚು(Bronze Medal) ಗೆದ್ದ ರೇವಾದ(Reva) ಸಚಿನ್ ಸಾಹು(Sachin Sahu) ಇಂದು ಐಸ್ ಕ್ರೀಮ್ ಮಾರಾಟ ಮಾಡಲು ಒತ್ತಾಯಿಸಿದ್ದು, ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಹೌದು, ಪ್ಯಾರಾ ಅಥ್ಲೀಟ್ ಆಟಗಾರ ಸಚಿನ್ ಸಾಹು ಮಧ್ಯಪ್ರದೇಶದ(Madhyapradesh) ರೇವಾದಲ್ಲಿ ಬೀದಿಗಳಲ್ಲಿ ಐಸ್ ಕ್ರೀಮ್ ಮಾರಾಟ ಮಾಡಲು ಒತ್ತಾಯಿಸಲಾಗಿದೆ ಎಂಬುದು ತಿಳಿದುಬಂದಿದೆ. 20ನೇ ರಾಷ್ಟ್ರೀಯ ಅಥ್ಲೆಟಿಕ್ಸ್(Athletics) ಚಾಂಪಿಯನ್‌ಶಿಪ್‌ನಲ್ಲಿ ಸಚಿನ್ ಕಂಚಿನ ಪದಕ ಗೆದ್ದಿದ್ದಾರೆ. ಆಟಗಾರರನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ಅನೇಕ ಯೋಜನೆಗಳು ನಡೆಯುತ್ತಿವೆ, ಅಂತಹ ಅನೇಕ ಆಟಗಾರರು ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶಕ್ಕೆ ಕೀರ್ತಿಯನ್ನು ಕೂಡ ತಂದಿದ್ದಾರೆ. ಆದರೆ ಅವರಿಗೆ ತಮ್ಮ ದೇಶದಲ್ಲಿ ಸಿಗಬೇಕಾದ ಗೌರವ ಮತ್ತು ಸೌಲಭ್ಯಗಳು ಸಿಗಲಿಲ್ಲ, ಸಿಗುತ್ತಿಲ್ಲ.
ಮಧ್ಯಪ್ರದೇಶದ ರೇವಾದಲ್ಲೂ ಕೂಡ ಒಬ್ಬ ಪ್ಯಾರಾ ಅಥ್ಲೀಟ್ ಈಗ ಅದೇ ರೀತಿ ಬಡತನದಿಂದ ಹೋರಾಡುತ್ತಿದ್ದಾರೆ. ಮನೆಯಲ್ಲಿ ಆರ್ಥಿಕ ಬಿಕ್ಕಟು ಎದುರಾಗಿದ್ದು, ಈ ಪರಿಸ್ಥಿತಿಯಿಂದ ರಸ್ತೆಯಲ್ಲಿ ಐಸ್ ಕ್ರೀಂ ಮಾರುವಂತ ಪರಿಸ್ಥಿತಿ ಎದುರಾಗಿದೆ. ಪ್ಯಾರಾ ಅಥ್ಲೀಟ್ ಸಚಿನ್ ಸಾಹು ಇಂದು ಐಸ್ ಕ್ರೀಂ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ರೇವಾದ ಸಚಿನ್ ಸಾಹು ಅವರು 20ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ವಾಸ್ತವವಾಗಿ, ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ 4000 ಮೀಟರ್ ಓಟವನ್ನು 1.17 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಸಚಿನ್ ಕಂಚಿನ ಪದಕ ಗೆದ್ದರು.

ಸಚಿನ್ ಸಾಹು ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಅವರ ತಂದೆ ರಾಮ್ ನರೇಶ್ ಸಾಹು ಮತ್ತು ಹಿರಿಯ ಸಹೋದರ ಕೂಡ ಕುಲ್ಫಿ ಗಾಡಿಗಳನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ 10ನೇ ತರಗತಿಯವರೆಗೆ ಓದಿರುವ ಸಚಿನ್ ಸಾಹು ಅನ್ನು ಕೂಡ ಕುಟುಂಬಕ್ಕೆ ಸಹಾಯ ಮಾಡಲು ಐಸ್ ಕ್ರೀಮ್ ಕಾರ್ಟ್ ನಡೆಸಲು ಮನೆಯಿಂದ ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ. ಸಚಿನ್ ಸಾಹು ಅವರು ತಮ್ಮ ವೃತ್ತಿಜೀವನವನ್ನು ಕ್ರೀಡೆಯಲ್ಲಿ ಕಳೆಯಲು ದೊಡ್ಡ ಮಹತ್ವದ ಆಸೆಯನ್ನು ಹೊಂದಿದ್ದಾರೆ.
ಆದರೆ, ಸಚಿನ್ ಬಳಿ ಕ್ರೀಡಾಭ್ಯಾಸ ನಡೆಸಲು ಬೂಟುಗಳಾಗಲಿ ಅಥವಾ ಇನ್ನಾವುದೇ ಸೌಲಭ್ಯವಾಗಲಿ ಇಲ್ಲ! ಈ ಬಗ್ಗೆ ಸ್ವತಃ ಸಚಿನ್ ಮಾತನಾಡಿದ್ದು, “ಸೌಲಭ್ಯಗಳ ಕೊರತೆಯ ನಡುವೆಯೂ ನಾನು 20ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದೇನೆ. ನಾನು ಮತ್ತಷ್ಟು ಆಡಲು ತುಂಬಾ ಆಶಯವನ್ನು ಇಟ್ಟುಕೊಂಡಿದ್ದೇನೆ, ನನಗೆ ಸರ್ಕಾರ ಬೆಂಬಲಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ಸಚಿನ್ ಮನವಿ ಮಾಡಿಕೊಂಡಿದ್ದಾರೆ. ಈಗ ಬಡ ಯುವ ಉತ್ಸಾಹ ಆಟಗಾರನಿಗೆ ಬೇಕಿರುವುದು ಸರ್ಕಾರದಿಂದ ಸಹಾಯವಷ್ಟೇ!

ಆದ್ರೆ, ಸಚಿನ್ ಸಾಹು ಮಾಡಿಕೊಂಡಿರುವ ಮನವಿ ಕುರಿತು ಸರ್ಕಾರ ಯಾವ ರೀತಿಯ ಪ್ರತಿಕ್ರಿಯೇ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಧಿಕಾರಿಗಳು, ರಾಜಕಾರಣಿಗಳು, ಜನಸಾಮಾನ್ಯರ ಹಣವನ್ನು ಭ್ರಷ್ಟತೆ ನಡೆಸುವಲ್ಲಿ ನಿರತರಾಗಿರುವ ಇಂತ ಸಮಯದಲ್ಲಿ ಇಂಥ ನಿಷ್ಠೆ, ಪ್ರಾಮಾಣಿಕತೆ, ಶ್ರಮವಹಿಸುವ ಬಡ ಕುಟುಂಬ ಕ್ರೀಡಾಪಟುವಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರಕ್ಕೆ ಕೊಡುಗೆ ತರುವಂತೆ ಮಾಡುವುದರಲ್ಲಿ ಯಾವುದೇ ತೊಂದರೆಯಿಲ್ಲ ಮತ್ತು ಇದರ ಬಗ್ಗೆ ಸರ್ಕಾರ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತ ಅಗತ್ಯವಿಲ್ಲ ಎಂಬುದು ನಮ್ಮ ಅಭಿಪ್ರಾಯ.
- ಮೋಹನ್ ಶೆಟ್ಟಿ