ಕಾಸರಗೋಡು: ಹಣ, ಆಸ್ತಿ, ಅಧಿಕಾರ ಐಶಾರಾಮೀ ಜೀವನಕ್ಕಾಗಿ ಇಂದು ಹಲವಾರು ಅಪರಾಧಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ ಕೇರಳದ 22 ವರ್ಷದ ಯುವಕನೊಬ್ಬ ಆಸ್ತಿಗಾಗಿ ತನ್ನ ಮನೆಯರನ್ನೆ ಕೊಲ್ಲಲು ಮುಂದಾದ ಘಟನೆ ವರದಿಯಾಗದೆ.
ಕಾಸರಗೋಡಿನ ಬಲಾಲ್ ಗ್ರಾಮದ ಅರಿನಕಲ್ಲು ಗ್ರಾಮದ ನಿವಾಸಿಯಾಗಿರುವ 22 ವರ್ಷದ ಆಲ್ಬಿನ್ ಐಸ್‌ಕ್ರೀಂನಲ್ಲಿ ವಿಷ ಬೆರೆಸಿ ತನ್ನ ತಂಗಿಯನ್ನು ಕೊಂದಿದ್ದಾನೆ. ಅಲ್ಲದೇ ಈ ಐಸ್‌ಕ್ರೀಂ ತಿಂದಿದ್ದ ಈತನ ಅಪ್ಪ ಅಮ್ಮ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಜು.31ರಂದು ಆಲ್ವಿನ್ ತನ್ನ ತಾಯಿ ಬಳಿ ಐಸ್‌ಕ್ರೀಂ ಫ್ರಿಡ್ಜ್‌ನಲ್ಲಿ ಐಸ್‌ಕ್ರೀಂ ಇರಿಸುವಂತೆ ಕೇಳಿಕೊಂಡಿದ್ದಾನೆ. ಈತನ ಒತ್ತಾಯದ ಮೇರೆಗೆ ತಾಯಿ ಐಸ್‌ಕ್ರೀಂ ಫ್ರಿಜ್‌ನಲ್ಲಿ ಇಟ್ಟಿದ್ದಾರೆ. ಆದರೆ ಈ ಐಸ್‌ಕ್ರೀಂಗೆ ಅಲ್ವಿನ್ ಇಲಿ ಕೊಲ್ಲಲು ಬಳಸುವ ವಿಷವನ್ನು ಬೆರೆಸಿದ್ದಾನೆ. ಈ ವಿಚಾರ ಅರಿಯವ ಮನೆಯವರು ಅದೇ ದಿನ ರಾತ್ರಿ ಎಲ್ಲರೂ ತಿನ್ನುತ್ತಾರೆ. ಮರು ದಿನ ಬೆಳಗ್ಗೆ ತಂಗಿ ಮೇರಿಗೆ ವಾಂತಿ ಶುರುವಾಗಿದೆ. ಈ ವೇಳೆ ಮೇರಿಯನ್ನ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮೇರಿಯ ಲೀವರ್ ಸಂಪೂರ್ಣವಾಗಿ ಘಾಸಿಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಘಟನೆ ನಡೆದ ಮರುದಿನ ಈತನ ತಂದೆಗೂ ಈ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಆರೋಪಿ ತಂದೆಗೆ ಲಿವರ್ ಸಮಸ್ಯೆ ಎದುರಾಗಿದೆ. ಇದರಿಂದ ಸಂಶಯಗೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮುಂದಾಗಿದ್ದಾನೆ. ಘಟನೆಯಲ್ಲಿ ಆರೋಪಿ ಅಲ್ವಿನ್ ಮಾತ್ರಾ ಐಸ್‌ಕ್ರೀಂ ತಿನ್ನದೇ ಇದ್ದ ಪರಿಣಾಮ ಆತ ಬದುಕುಳಿದ್ದಾನೆ. ಅಲ್ಲದೇ ಐಸ್‌ಕ್ರೀಂ ರುಚಿಸಲಿಲ್ಲ ಎಂದು ಆತನ ತಾಯಿ ಕೂಡಾ ತಿಂದಿರಲಿಲ್ಲ. ಹೀಗಾಗಿ ಅವರೂ ಬದುಕುಳಿದಿದ್ದಾರೆ.
ಮಾಹಿತಿ ಸಂಗ್ರಹಿಸಿದ ಪೊಲೀಸರು ಮೊದಲು ಅನುಮಾನ ಪಟ್ಟಿದ್ದು ಅಲ್ವಿನ್ ವಿರುದ್ಧವೇ. ಏಕೆಂದರೆ ಆತನ ಶೋಕಿ ಜೀವನವೇ ಪೊಲೀಸರಿಗೆ ಅನುಮಾನ ಮೂಡುವಂತೆ ಮಾಡಿತ್ತು, ಐಶಾರಾಮಿ ಜೀವನಕ್ಕೆ ಮುಂದಾಗಿದ್ದ ಅಲ್ವಿನ್ ಈ ಹಿಂದೆ ಆಸ್ತಿ ವಿಚಾರಕ್ಕೆ ಗಲಾಟ ಮಾಡಿಕೊಂಡಿದ್ದನಂತೆ. ಈ ಬಾರಿ ಆಸ್ತಿ ಪಡೆಯಲು ಸಮಚು ರೂಪಿಸಿದ ಆರೋಪಿ ಕುಟುಂಬದವರಿಗೆ ವಿಷ ನೀಡಲು ಮುಂದಾಗಿದ್ದಾನೆ. ಆದರೆ ಈ ಬಾರಿ ಕೊಲೆ ನಡೆಸಲು ಮುಂದಾದ ಅಲ್ವಿನ್ ಯೂಟ್ಯೂಬ್ ವಿಡಿಯೋ ಅನುಸರಿಸಿದ್ದನಂತೆ. ಇಲಿ ಪ್ರಾಶನದಿಂದ ಆಗಬಹುದಾದ ತೊಂದರೆ, ಐಸ್‌ಕ್ರೀಂ ನಿಂದ ಆಗಬಹುದಾದ ಉಪಯೋಗಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದಾನೆ. ಈ ಮೂಲಕ ಕೊಲೆ ಮಾಡಲು ಪ್ಲಾನ್ ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.