Visit Channel

ಬ್ರದರ್ಸ್ ಡೇ ಸ್ಪೆಷಲ್: ಸಹೋದರನ ಮಹತ್ವ ಸಾರುವ ಈ ದಿನದ ಸಂಪೂರ್ಣ ಮಾಹಿತಿ

national-brothers-day-640x514

ಇಂದು ನ್ಯಾಷನಲ್ ಬ್ರದರ್ಸ್ ಡೇ ಅಂದರೆ ರಾಷ್ಟ್ರೀಯ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ,ಪರಿಶ್ರಮವನ್ನು ಗೌರವಿಸುವ ದಿನವೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ, ತಂಗಿಗೆ, ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ, ಅದೇ ಈ ಸಹೋದರರ ದಿನಾಚರಣೆ ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ? ಈ ಆಚರಣೆಯ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ನ್ಯಾಷನಲ್ ಬ್ರದರ್ಸ್ ಡೇ 2021;
ಅಮೆರಿಕಾ ಸೇರಿದಂತೆ ಜಗತ್ತಿನ ನಾನಾ ಬಾಗಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ತಂದೆ-ತಾಯಿಗೆ ಗೌರವ ಸಲ್ಲಿಸಲು ಫಾದರ್ಸ್ ಡೇ, ಮದರ್ಸ್ ಡೇ ಇರುವಂತೆ, ಇದು ಸಹೋದರರಿಗೆ ಗೌರವ ಸಲ್ಲಿಸಲು ಮೀಸಲಿರುವ ದಿನವಾಗಿದೆ. ಪ್ರತಿವರ್ಷ ಮೇ 24 ರಂದು ಆಚರಣೆ ಮಾಡುವ ಈ ದಿನದಂದು ಸಹೋದರಿಗೆ ವಿಶೇಷ ಸ್ಥಾನಮಾನ.

ರಾಷ್ಟ್ರೀಯ ಸಹೋದರರ ದಿನದ ಇತಿಹಾಸ:
2005 ರಿಂದ, ಪ್ರತಿವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಲಬಾಮಾ ಮೂಲದ ಸೆರಾಮಿಕ್ ಕಲಾವಿದ, ಶಿಲ್ಪಿ ಮತ್ತು ಲೇಖಕ ಸಿ. ಡೇನಿಯಲ್ ರೋಡ್ಸ್ ಅವರು ವಿಶೇಷ ಸಂದರ್ಭ ಮತ್ತು ಅದರ ನಡಾವಳಿಗಳನ್ನು ಮೊದಲು ಆಯೋಜಿಸಿದರು. ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ನ್ಯಾಷನಲ್ ಸಿಬ್ಲಿಂಗ್ಸ್ ಡೇ ಹಾಗೂ ಬ್ರದರ್ಸ್ ಡೇ ಎರಡೂ ವಿಭಿನ್ನ.

ರಾಷ್ಟ್ರೀಯ ಸಹೋದರರ ದಿನಾಚರಣೆಯನ್ನು ಹೆಚ್ಚಾಗಿ ಅಮೆರಿಕಾದಲ್ಲಿ ಆಚರಿಸಲಾಗುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತದ ಅನೇಕ ದೇಶಗಳು ಈ ದಿನವನ್ನು ಆಚರಿಸುತ್ತಿವೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಈ ದಿನವನ್ನು ಮೇ 24 ರಂದು ಆಚರಿಸುತ್ತವೆ.

ಈ ದಿನದ ಮಹತ್ವ ಹೀಗಿದೆ:
ಪುರುಷರಲ್ಲಿ ಸಹೋದರತ್ವದ ಪ್ರಜ್ಞೆ ಅತ್ಯಂತ ಪ್ರಬಲವಾಗಿದೆ. ಇದು ರಕ್ತ ಸಂಬಂಧವಾಗಿರಲಿ ಅಥವಾ ಇಲ್ಲದಿರಲಿ, ಹುಡುಗರು ʼಬ್ರದರ್ʼ ಅನ್ನೋ ಪದವನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅದಕ್ಕೆ ತಕ್ಕಂತ ವರ್ತಿಸುತ್ತಾರೆ. ಆದ್ದರಿಂದ ಅಂತಹ ಅಣ್ಣ-ತಮ್ಮನ ಕೊಡುಗೆಯನ್ನು ನೆನಸಿಕೊಳ್ಳಲು ಹಾಗೂ ಶ್ಲಾಘಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಆಚರಣೆ ಹೀಗಿರುತ್ತೆ:
ಸಾಮಾನ್ಯವಾಗಿ, ಈ ದಿನದಂದು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಹೋದರನ ಜೊತೆ ಶುಭಾಶಯ ಹಂಚಿಕೊಳ್ಳುತ್ತಾರೆ. ಜೊತೆಗೆ ತಮ್ಮ ನೆಚ್ಚಿನ ಸಹೋದರನಿಗೆ ಉಡುಗೊರೆ ನೀಡುತ್ತಾರೆ. ಸದ್ಯ ಕೊರೋನಾದಿಂದ ಮನೆಯಲ್ಲಿಯೇ ಇರುವುದರಿಂದ ನಿಮ್ಮ ಬ್ರದರ್ ಗೆ ಇಷ್ಟವಾದ ತಿನಿಸುಗಳನ್ನು ಮಾಡಿ ಕೊಡಬಹುದು. ಇದು ಅವರಿಗೆ ಸಂತೋನೀಡುವುದಲ್ಲದೇ ಸ್ಪೆಷಲ್ ಭಾವನೆ ಮೂಡುವಂತೆ ಮಾಡುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.