ಶಿಕಾರಿಪುರ : ಅದ್ದೂರಿಯಾಗಿ ನೆರವೇರಿದ ಹುಚ್ಚರಾಯಸ್ವಾಮಿಯ ಬ್ರಹ್ಮರಥೋತ್ಸವ! ಶಿಕಾರಿಪುರ ಪಟ್ಟಣದ ಆರಾಧ್ಯ ದೇವ ಶ್ರೀ ಹುಚ್ಚರಾಯ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು. ಮುಜರಾಯಿ ಅಧಿಕಾರಿ ತಹಶಿಲ್ದಾರ ಎಂ.ಪಿ ಕವಿರಾಜ್ ಅವರಿಂದ ರಥಕ್ಕೆ ಪೂಜೆಯನ್ನು ಸಲ್ಲಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗೋವಿಂದ ಗೋವಿಂದ ಜೈಕಾರ ಮೊಳಗಿಸುತ್ತ ಸಾವಿರಾರು ಸಂಖ್ಯೆಯಲ್ಲಿ ಯುವಕರು ರಥವನ್ನು ಎಳೆಯಲು ಮುಗಿಬಿದಿದ್ದರು. ಹುಚ್ಚರಾಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕುಟುಂಬ ಸಮೇತರಾಗಿ ಬಿ.ಎಸ್ ವೈ ಪೂಜೆ ಸಲ್ಲಿಸಿದರು. ಶಿಕಾರಿಪುರ ಪಟ್ಟಣದ ಆರಾಧ್ಯದೈವ ಶ್ರೀ ಹುಚ್ಚರಾಯ ಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು.

ನಂತರ ಹುಚ್ಚರಾಯಸ್ವಾಮಿ ಯ ಬ್ರಹ್ಮರಥೋತ್ಸವ ದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪುತ್ರರಾದ ಸಂಸದ ಬಿವೈ ರಾಘವೇಂದ್ರ ಬಿವೈ ವಿಜಯೇಂದ್ರ ಪುತ್ರಿಯರಾದ ಅರುಣಾದೇವಿ ಸೇರಿದಂತೆ ಸೊಸೆಯರು ಮೊಮ್ಮಕ್ಕಳು ಉಪಸ್ಥಿತರಿದ್ದರು.
- Source : ನವೀನ್ ಶಿವಮೊಗ್ಗ