Bengaluru : ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರರಂಗದಿಂದ ಹೊರಹೊಮ್ಮುತ್ತಿರುವ ವಿಭಿನ್ನ ಕಥಾಹಂದರದ ಸಿನಿಮಾದಲ್ಲಿ ರಾಜಕಾರಣಿಗಳಾದ ಬಿ.ಎಸ್ ಯಡಿಯೂರಪ್ಪ(BS yediyurappa) ಮತ್ತು ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ್(BSY Dr Sudhakar acted movie) ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ!
ತನುಜಾ(Thanuja) ಎಂಬ ಶೀರ್ಷಿಕೆಯ ಅಡಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಬಿ.ಎಸ್ ಯಡಿಯೂರಪ್ಪ ಮತ್ತು ಡಾ.ಕೆ ಸುಧಾಕರ್ ಅವರು ಪ್ರಥಮ ಬಾರಿಗೆ ನಟನೆ ಮಾಡಿದ್ದಾರೆ.
ಈ ಮುಖೇನ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ! ಈ ಹಿಂದೆ ರಾಜ್ಯ ಪ್ರಶಸ್ತಿ ಪಡೆದುಕೊಂಡ ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ತನುಜಾ ಚಿತ್ರ,
ಸದ್ಯ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಿದೆ.

ಕೋವಿಡ್ ವೈರಸ್(Covid virus) ಪ್ರಾರಂಭದಲ್ಲಿ ನಡೆದ ಒಂದು ನೈಜ ಘಟನೆ ಆಧರಿತ ಚಿತ್ರ ಇದಾಗಿದ್ದು,
ಸಸ್ಪೆನ್ಸ್, ಥ್ರಿಲರ್, ಹಾರರ್, ಮಾಸ್ ಕಥಾಹಂದರಗಳ(BSY Dr Sudhakar acted movie) ನಡುವೆ ಒಂದು ನೈಜ ಘಟನೆಯನ್ನು ಆಧರಿಸಿ ಮಾಡುವ ಚಿತ್ರ
ಸ್ಪೂರ್ತಿದಾಯಕವಾಗಿ ಗೆಲುವು ಕಾಣಲಿದೆ ಎಂಬ ಬಲವಾದ ಭರವಸೆಯೊಂದಿಗೆ ಈ ಚಿತ್ರವನ್ನು ಚಿತ್ರತಂಡ ರೂಪಿಸಿದೆ.
ಈ ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಕ್ಕಿಂತ ಹೆಚ್ಚಾಗಿ ಖ್ಯಾತ ರಾಜಕಾರಣಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾದ ಡಾ.ಕೆ ಸುಧಾಕರ್ ಅವರ ಪಾತ್ರವೇನು ಎಂಬುದು ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಈ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಗೊಂಡರು, ಚಿತ್ರತಂಡ ಇಲ್ಲಿಯವರೆಗೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ!
ಇದನ್ನೂ ಓದಿ: https://vijayatimes.com/careful-before-eating-soya/
ಇನ್ನು ಇದಕ್ಕೆ ಪೂರಕವೆಂಬಂತೆ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರು, ತನುಜಾ ಚಿತ್ರದಲ್ಲಿ ನಟಿಸಿರುವುದಲ್ಲದೇ,
ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಪ್ರತಿ ಹಂತದಲ್ಲೂ ಪ್ರೋತ್ಸಾಹ ನೀಡುತ್ತಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು ಚಿತ್ರತಂಡಕ್ಕೆ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ನೀಡುತ್ತಿರುವ ಬೆಂಬಲಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಈ ಚಿತ್ರ ಫೆಬ್ರವರಿ(February) ತಿಂಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರಕ್ಕೆ ಧರ್ಮಾಧಿಕಾರಿಗಳು, ಮಠಾಧೀಶರು, ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.
ತನುಜಾ ಚಿತ್ರದಲ್ಲಿ ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿದ್ದ ಸಪ್ತಾ ಪಾವೂರು(Saptha pavur),
ಹಿರಿಯ ಪತ್ರಕರ್ತ ವಿಶೇಶ್ವರ ಭಟ್(Vishweshwar bhat) ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.