Vijayanagara : ಹೂವಿನಹಡಗಲಿಯಲ್ಲಿ ನಡೆದ ಬಿಜೆಪಿ(BJP) ಸಂಕಲ್ಪ ಯಾತ್ರೆ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪನವರು(BS Yediyurappa),
“ಸಿದ್ದರಾಮಯ್ಯನವರು(Siddaramaiah) ಸೇರಿದಂತೆ ಕಾಂಗ್ರೇಸ್ಸಿನ ಹಲವು ಮುಖಂಡರು ಸಿಎಂ ಆಗಬೇಕೆಂದು ತಿರುಕನ ಕನಸು ಕಾಣುತ್ತಿದ್ದಾರೆ”.
ಯಾವುದೇ ಕಾರಣಕ್ಕೂ ಸಹ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಅವಕಾಶ ಇಲ್ಲ. ಇಡೀ ದೇಶದಲ್ಲಿ ಎರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿ ಇದೆ,
ಉಳಿದ ಕಡೆ ಕಾಂಗ್ರೆಸ್ ಪಕ್ಷಕ್ಕೆ ಅಡ್ರೆಸ್ ಇಲ್ಲ. ಕರ್ನಾಟಕದಲ್ಲಿ(Karnataka) ಕಾಂಗ್ರೆಸ್ ಹುಡುಕಲು ಈಗ ಪಾದಯಾತ್ರೆ ನಡೆಸಿದೆ.
ಇದನ್ನೂ ಓದಿ : https://vijayatimes.com/banned-laws-in-other-countries/
ಈ ಪಾದಯಾತ್ರೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಆದ್ದರಿಂದ ಏನೂ ಪರಿಣಾಮವಾಗುವುದಿಲ್ಲ ಎಂಬುವುದನ್ನು ನಾನು (BSY Slams Siddaramaiah) ಮನವರಿಕೆ ಮಾಡಲು ಇಚ್ಛಿಸುತ್ತೇನೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವು (BJP Government) ಅಧಿಕಾರಕ್ಕೆ ಬರುವುದು ಎಂದು ಯಡಿಯೂರಪ್ಪನವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಮೂರು ನಾಲ್ಕು ತಲೆಮಾರಿಗಾಗುವಷ್ಟು ಹಣ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ರವರು ಹೇಳಿದ್ದಾರೆ. ಆದರೆ ಇದಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಯಾರೂ ವಿರೋಧ ವ್ಯಕ್ತಪಡಿಸಿಲ್ಲ.
ನರೇಂದ್ರ ಮೋದಿಯವರು (BSY Slams Siddaramaiah) ಎಂಟು ವರ್ಷ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿದ್ದಾರೆ, ಅವರು ಜಗತ್ತು ಕಂಡ ಅಪ್ರತಿಮ ನಾಯಕ.
ಕರ್ನಾಟಕ ರಾಜ್ಯದಲ್ಲಿ ಕೂಡ ಕ್ಷೇತ್ರವಾರು ಸರ್ವೆ ನಡೆಯುತ್ತಿದೆ ಎಂದು ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿಯವರು ಅಭಿವೃದ್ದಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು.
ಐದು ಲಕ್ಷ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಪ್ರಗತಿಯಲ್ಲಿದೆ.
ಇದನ್ನೂ ಓದಿ : https://vijayatimes.com/ed-collects-cd-mentioned-mamata-banerjee/
ಶಿಕ್ಷಣ, ಉದ್ಯೋಗದಲ್ಲಿ ಯಾರೂ ವಂಚಿತರಾಗಬಾರದು. ಜನರಿಂದ ಮತ ಹಾಕಿಸಿಕೊಂಡು ತಿರುಗಿ ನೋಡದೆ ಹೋದವರು ಈಗ ಮತ್ತೆ ಬಂದಿದ್ದಾರೆ, ನೀವು ಪ್ರಶ್ನೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದರು.
- ರಶ್ಮಿತಾ ಅನೀಶ್