New Delhi : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್(Budget) ಮಂಡಿಸಿದ್ದು, ಏಳು ಕ್ಷೇತ್ರಗಳನ್ನು ಆದ್ಯತೆಯ ಕ್ಷೇತ್ರಗಳನ್ನಾಗಿ ಗುರುತಿಸಿ ಹಣ ಹಂಚಿಕೆ ಮಾಡಿದ್ದಾರೆ. ಸೀತಾರಾಮನ್‌ಮಂಡಿಸಿರುವ ಬಜೆಟ್‌ನ ಭರವಸೆಗಳ ಲೆಕ್ಕ ಇಲ್ಲಿದೆ.
- ಇ-ಕೋರ್ಟ್‌ಗಳಿಗೆ 7 ಸಾವಿರ ಕೋಟಿ ರೂಪಾಯಿ ಅನುದಾನ.
- ಪ್ರಧಾನಿ ಅವಾಸ್ ಯೋಜನೆಗೆ 79 ಸಾವಿರ ಕೋಟಿ ರೂ. ಅನುದಾನ.
- ರಾಸಾಯನಿಕ ಮುಕ್ತ ಸಹಜ/ಸಾವಯವ ಕೃಷಿಗೆ ಆದ್ಯತೆ
- ಐಐಟಿಯಲ್ಲಿ(IIT) 5 ವರ್ಷಗಳ ಕಾಲ ಅಧ್ಯಯನಕ್ಕೆ ಅನುದಾನ.
- 5ಜಿ ಅಪ್ಲಿಕೇಶನ್(5G Application) ಅಭಿವೃದ್ಧಿಗೆ ನೂರು ಲ್ಯಾಬ್ ಸ್ಥಾಪನೆ.
- ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆ್ಯಪ್.
- ಒಂದು ಜಿಲ್ಲೆಗೆ ಒಂದು ಉತ್ಪನ್ನ.
- “ದೇಖೋ ಅಪ್ನಾ ದೇಶ್” ಪ್ರವಾಸೋದ್ಯಮಕ್ಕೆ ಹೊಸ ಯೋಜನೆ.
- ನಗರೋತ್ಥಾನಕ್ಕೆ 10 ಸಾವಿರ ಕೋಟಿ ರೂಪಾಯಿ ಮೀಸಲು.
- ಎಂಎಸ್ಎಂಇ ಗಳಿಗೆ(MSME) ವಿವಾದ್ ಸೆ ವಿಶ್ವಾಸ್ ಯೋಜನೆ.
- 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ.

- ಸಾಮಾನ್ಯ ಗುರುತು ಚೀಟಿಯಾಗಿ ಪ್ಯಾನ್ ಕಾರ್ಡ್(Pan Card) ಬಳಕೆ.
- ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ
- ದೇಶದ ಯುವ ಜನತೆಗೆ ವಿವಿಧ ಕೌಶಲಗಳನ್ನು ಕಲಿಸಲು ಪ್ರಧಾನಿ ಕೌಶಲ್ಯ ವಿಕಾಸ್ ಯೋಜನೆ
- ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ 47 ಲಕ್ಷ ಯುವಕರಿಗೆ ಕಲಿಕಾ ವೇತನ.
- 30 ಅಂತಾರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ.
- ದೇಶದಲ್ಲಿ ಹೊಸದಾಗಿ 157 ನರ್ಸಿಂಗ್ ಕಾಲೇಜು ಸ್ಥಾಪನೆ.
- ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಸ್ಥಾಪನೆ.
ಇದನ್ನೂ ಓದಿ: ಕೇಂದ್ರ ಬಜೆಟ್: ಕರ್ನಾಟಕಕ್ಕೆ ಬಂಪರ್‌ಕೊಡುಗೆ ; ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ
- ಏಕಲವ್ಯ ವಸತಿ ಶಾಲೆಗೆ 18,800 ಶಿಕ್ಷಕರ ನೇಮಕ.
- ಮಕ್ಕಳು ಮತ್ತು ಯುವಜನರಿಗೆ ಉಪಯೋಗವಾಗುವಂತೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ.
- ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ಉತ್ಪನ್ನಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಸುಧಾರಿಸಲು, ಅನುವು ಮಾಡಿಕೊಡುತ್ತದೆ.
- ಮೀನುಗಾರಿಕಾ ಕ್ಷೇತ್ರದ ಪುರೋಭಿವೃದ್ಧಿಗಾಗಿ ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ರೂ.6,000 ಕೋಟಿ ಅನುದಾನ.
- ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದ್ದು, ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕಿಂತ ಶೇ. 30ರಷ್ಟು ಹೆಚ್ಚಳವಾಗಿದೆ. ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಮುಂದುವರಿಸಲಾಗಿದೆ.
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ.