ಕೊಲಂಬೋ, ಮಾ. 14: ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದುನ್ನು ನಿಷೇಧಿಸುವ ಹಾಗೂ ಮದರಸಾಗಳಿಗೆ ಶಾಶ್ವತ ಬಾಗಿಲು ಹಾಕುವ ವಿಧೇಯಕಕ್ಕೆ ಸಹಿ ಹಾಕಿರುವ ಶ್ರೀಲಂಕಾದ ಗೃಹ ಸಚಿವರು, ಸಂಸತ್ ಮುಂದೆ ಸದ್ಯದಲ್ಲೇ ಈ ಕಾನೂನು ಜಾರಿಯಾಗಲಿದೆ.
ಬೌದ್ಧಧರ್ಮೀಯರೇ ಹೆಚ್ಚಾಗಿರುವ ಲಂಕಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ಭದ್ರತೆ ದೃಷ್ಟಿಯಿಂದ ನಿಷೇಧಿಸಲು ತೀರ್ಮಾನಿಸಲಾಗಿದೆ. ಲಂಕಾದ ಚರ್ಚ್ ಮೇಲೆ ಈ ಹಿಂದೆ ದಾಳಿಯಾದಾಗಲೇ ಈ ಕಾನೂನು ತಾತ್ಕಾಲಿಕವಾಗಿ ಜಾರಿಗೆ ಬಂದಿತ್ತು. ವಿವಾದ ಭುಗಿಲೆದ್ದ ಕಾರಣಕ್ಕೆ ವಾಪಸ್ ಪಡೆಯಲಾಗಿತ್ತು.
ಬುರ್ಖಾ ದೇಶದ ಭದ್ರತೆಗೆ ಸವಾಲಾಗಿದೆ. 2019ರಲ್ಲಿ ಚರ್ಚ್ ಮೇಲಿನ ಉಗ್ರರ ದಾಳಿಯಲ್ಲಿ 250 ಮದಿ ಸಾವನ್ನಪ್ಪಿದ್ದರು. ಈ ಬಳಿಕ ಲಂಕಾದಲ್ಲಿ ಬುರ್ಖಾ ನಿಷೇಧದ ಕೂಗು ಹೆಚ್ಚಾಗಿತ್ತು. ಯಾರು ಬೇಕಾದರೂ ಶಾಲೆಯನ್ನು ತೆರೆದು ಮಕ್ಕಳಿಗೆ ಏನೂ ಬೇಕಾದರೂ ಕಲಿಸಲು ಸಾಧ್ಯವಿಲ್ಲ. ಶಿಕ್ಷಣ ನೀತಿಯನ್ನು ಉಲ್ಲಂಘಿಸುತ್ತಿರುವ ಇಸ್ಲಾಮಿಕ್ ಮದರಾಸಗಳನ್ನು ಮುಚ್ಚಲು ನಿರ್ಧರಿಸಿದೆ. ಶ್ರೀಲಂಕಾದಲ್ಲಿರುವ ಶಿಕ್ಷಣ ನೀತಿಯನ್ನು ಪಾಲಿಸಬೇಕು ಎಂದು ವೀರಶೇಖರ್ ಹೇಳಿದ್ದಾರೆ. ಲಂಕಾ ಸರ್ಕಾರದ ಈ ನಿರ್ಧಾರಕ್ಕೆ ಇಸ್ಲಾಂ ಸಮುದಾಯ ವಿರೋಧ ವ್ಯಕ್ತಪಡಿಸಿದೆ.