Terrible Bus Accident in Rajasthan: 12 Dead, More Than 40 Injured
Jaipur: ರಾಜಸ್ಥಾನದ (Rajasthan) ಸಿಕರ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಸ್ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ವರದಿ ನೀಡಿದ್ದಾರೆ ಸಲಾಸರ್ನಿಂದ ಬರುತ್ತಿದ್ದ ಬಸ್ ಸಿಕರ್ ಜಿಲ್ಲೆಯ ಲಕ್ಷ್ಮಣಗಢ್ (Laxmangarh) ತಲುಪಿದ ನಂತರ ಮೋರಿಗೆ ಡಿಕ್ಕಿ ಹೊಡೆದಿದೆ.
ಇನ್ನು ಈ ದುರಂತದಲ್ಲಿ ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಲಕ್ಷ್ಮಣಗಢದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮಣಗಢದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾಲಾಸರ್ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ (Bus) ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಯಾದವ್ ಹೇಳಿದ್ದಾರೆ. ಗಾಯಾಳುಗಳನ್ನು ಲಕ್ಷ್ಮಣಗಢ ಮತ್ತು ಸಿಕರ್ ಆಸ್ಪತ್ರೆಗಳಿಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಭೀಕರ ಅಪಘಾತಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ (Bhajanlal Sharma) ಅವರು ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೊಲೀಸರ ಪ್ರಕಾರ, ಅಪಘಾತಕ್ಕೆ ಯಾವುದೇ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೂ ತನಿಖೆ ಮುಂದುವರೆದಿದೆ. ಮೋರಿಗೆ ಢಿಕ್ಕಿ ಹೊಡೆಯುವ ಮುನ್ನ ಬಸ್ ಹಠಾತ್ತನೆ ಚಲಿಸಲು ಆರಂಭಿಸಿ ಅದರ ಮುಂಭಾಗದ ಭಾಗಕ್ಕೆ ತೀವ್ರ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತದ (Accident) ನಂತರ, ಬಸ್ನಲ್ಲಿದ್ದ ಪ್ರಯಾಣಿಕರು ಕಿರುಚಲು ಮತ್ತು ಕೂಗಲು ಪ್ರಾರಂಭಿಸಿದರು. ನೆರೆದಿದ್ದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
Bus Accident In Rajasthan Kannada Live Vijayatimes News
Jaipur: Police reported that 12 people were killed and more than 40 injured when a bus collided with a culvert in Rajasthan’s Sikar district this morning. The bus coming from Salasar hit a culvert after reaching Laxmangarh in Sikar district.
In this tragedy, the condition of many passengers is critical and the injured have been admitted to a hospital near Laxmangarh. Police said that a private bus coming from Salasar lost control and hit a culvert in Laxmangarh today around 2 pm. District Superintendent of Police Bhuvan Bhushan Yadav said that 12 people were killed and a large number of passengers were injured in the accident. The injured have been admitted to Laxmangarh and Sikar hospitals for further treatment.
Rajasthan Chief Minister Bhajanlal Sharma (Bhajanlal Sharma) expressed condolence about the accident and instructed the concerned authorities to provide appropriate treatment to the injured. According to police, no exact cause of the accident has been determined yet, although the investigation is ongoing. Eyewitnesses told the police during interrogation that the bus suddenly started moving before hitting the culvert and its front part was severely damaged. After the accident, passengers in the bus started screaming and shouting. The bystanders immediately informed the police and the police started a rescue operation.