English English Kannada Kannada

ನಿಯಂತ್ರಣ ತಪ್ಪಿ ಪಲ್ಟಿಯಾದ ಸಾರಿಗೆ ಸಂಸ್ಥೆಯ ಬಸ್: 30 ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಬಚಾವ್

Share on facebook
Share on google
Share on twitter
Share on linkedin
Share on print

ಗದಗ:  ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ನಡೆದಿದೆ. ಹುಬ್ಬಳ್ಳಿ-ಇಳಕಲ್ ಮಾರ್ಗದ ಸಾರಿಗೆ ಸಂಸ್ಥೆಯ ಬಸ್ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ್ದು, ಏಕಾಏಕಿ ಪಲ್ಟಿಯಾಗಿದೆ.

ಅದೃಷ್ಟವಶಾತ್ ಬಸ್‌ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಬಚಾವ್ ಆಗಿದ್ದಾರೆ. ಬಸ್ ಪಲ್ಟಿಯಾದ ಮೇಲೆ ಗ್ಲಾಸ್ ಒಡೆದು ಹೊರಗಡೆ ಬಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಗೊಂಡ ಪ್ರಯಾಣಿಕರನ್ನು ನರಗುಂದ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Submit Your Article