- ಬೆಂಗಳೂರು ಜನತೆಗೆ (bwssb new scheme) ಜಲಮಂಡಳಿಯಿಂದ ಗುಡ್ ನ್ಯೂಸ್
- ಒನ್ ಟೈಮ್ ಸೆಟಲ್ಮೆಂಟ್ಗೆ ಅವಕಾಶ
- 3 ತಿಂಗಳು ಅವಕಾಶ,ಅಸಲು ಹಣದಲ್ಲಿ ವಿನಾಯಿತಿ ಇಲ್ಲ
Bengaluru:ಬೆಂಗಳೂರು ನಗರದಲ್ಲಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ (bwssb new scheme) ಬೆಂಗಳೂರು ಜಲಮಂಡಳಿ (BWSSB) ಭಾರೀ ನಿಟ್ಟಿನಲ್ಲಿ ಸಿಹಿ ಸುದ್ದಿ ನೀಡಿದೆ.
ಸಂಚಾರ ಪೊಲೀಸರು ಬಾಕಿ ಟ್ರಾಫಿಕ್ ಫೈನ್ ಪಾವತಿಗೆ ಡಿಸ್ಕೌಂಟ್ ನೀಡಿದ್ದ ಮಾದರಿಯಲ್ಲೇ, ಇದೀಗ ಜಲಮಂಡಳಿ ಕೂಡ ನೀರಿನ ಬಿಲ್ ಬಾಕಿದಾರರಿಗೆ ವನ್ ಟೈಮ್ ಸೆಟಲ್‌ಮೆಂಟ್ (One Time Settlement – OTS) ಯೋಜನೆ ಜಾರಿಗೆ ತರುವ ನಿರ್ಧಾರ ಕೈಗೊಂಡಿದೆ.

ಈ ಯೋಜನೆಯಡಿ ಕಾವೇರಿ ನೀರಿನ ಬಿಲ್ ಪಾವತಿಯಲ್ಲಿ ವರ್ಷಗಳಿಂದ (bwssb new scheme) ಜಮೆಯಾಗಿರುವ ಬಡ್ಡಿ ಹಾಗೂ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಜನವರಿ ತಿಂಗಳಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದ್ದು, ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಇದು ದೊಡ್ಡ ರಿಲೀಫ್ ಸಿಗಲಿದೆ.
ಈ OTS ಯೋಜನೆಯ ಪ್ರಮುಖ ಅಂಶವೆಂದರೆ, ಗ್ರಾಹಕರು ನೀರಿನ ಬಿಲ್‌ನ ಅಸಲು ಮೊತ್ತವನ್ನು ಮಾತ್ರ ಪಾವತಿಸಿದರೆ ಸಾಕು, ಅದಕ್ಕೆ ಸೇರಿರುವ ಬಡ್ಡಿ ಹಾಗೂ ಪೆನಾಲ್ಟಿ ಸಂಪೂರ್ಣವಾಗಿ ಮನ್ನಾ ಆಗುತ್ತದೆ.
ಆದರೆ ಅಸಲು ಹಣದಲ್ಲಿ ಯಾವುದೇ ರೀತಿಯ ರಿಯಾಯಿತಿ ಇರುವುದಿಲ್ಲ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.
ಮೂರು ತಿಂಗಳ ಅವಧಿಗೆ ಈ ಸೌಲಭ್ಯ ನೀಡಲು ನಿರ್ಧರಿಸಲಾಗಿದ್ದು, ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಇದರಿಂದಾಗಿ ಹಲವು ವರ್ಷಗಳಿಂದ ಬಾಕಿಯಾಗಿದ್ದ ನೀರಿನ ಬಿಲ್ಲುಗಳನ್ನು ಒಟ್ಟಿಗೆ ಕ್ಲಿಯರ್ ಮಾಡಿಕೊಳ್ಳಲು ಗ್ರಾಹಕರಿಗೆ ಉತ್ತಮ ಅವಕಾಶವಾಗಿದೆ.
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ, ಬೆಂಗಳೂರು ಜಲಮಂಡಳಿಯು ಸುಮಾರು 11.14 ಲಕ್ಷ ನೀರಿನ ಸಂಪರ್ಕಗಳನ್ನು ಒದಗಿಸಿದೆ.
ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ಸುಮಾರು 1.55 ಕೋಟಿ ಜನರ ನೀರಿನ ಅಗತ್ಯವನ್ನು ಪೂರೈಸುತ್ತಿರುವ ಜಲಮಂಡಳಿ,
ನೂರು ಕಿಲೋಮೀಟರ್ (Kilometer) ದೂರದ ಕಾವೇರಿ ನದಿಯಿಂದ ನೀರನ್ನು ತರಿಸಿ ಪೂರೈಕೆ ಮಾಡುತ್ತಿದೆ.
ಜಲಮಂಡಳಿಗೆ ನೀರು ಮತ್ತು ಒಳಚರಂಡಿ ಶುಲ್ಕವೇ ಪ್ರಮುಖ ಆದಾಯ ಮೂಲವಾಗಿದ್ದು, ಅದರಲ್ಲಿ ಆಗುವ ಕೊರತೆ ಸಂಸ್ಥೆಯ
ದಿನನಿತ್ಯದ ನಿರ್ವಹಣೆಗೆ ದೊಡ್ಡ ಸಮಸ್ಯೆಯಾಗುತ್ತಿದೆ.
ಸರ್ಕಾರಿ ಇಲಾಖೆಗಳು, ವಾಣಿಜ್ಯ ಕಟ್ಟಡಗಳು ಹಾಗೂ ಸಾರ್ವಜನಿಕರು ನೀರಿನ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿಸದೇ
ಇರುವುದರಿಂದ, ಜಲಮಂಡಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.
ಪ್ರಸ್ತುತ ಮಾಹಿತಿಯ ಪ್ರಕಾರ, ಬೆಂಗಳೂರು ನಗರದಲ್ಲಿ 700 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಉಳಿದಿದೆ.
ಇದರಲ್ಲಿ ಅಸಲು ಮೊತ್ತವೇ ಸುಮಾರು 450 ಕೋಟಿ ರೂಪಾಯಿ ಆಗಿದ್ದು, ಉಳಿದ ಮೊತ್ತ ಬಡ್ಡಿ ಮತ್ತು ದಂಡ ರೂಪದಲ್ಲಿ ಜಮೆಯಾಗಿರುವ ಹಣವಾಗಿದೆ. ಈ ಕಾರಣದಿಂದ ಜಲಮಂಡಳಿ ಹಲವು ವರ್ಷಗಳಿಂದ ಬಾಕಿ ವಸೂಲಿಗೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ನಿರೀಕ್ಷಿತ ಫಲಿತಾಂಶ ದೊರೆತಿರಲಿಲ್ಲ.
ಈ ಹಿನ್ನೆಲೆಯಲ್ಲಿ OTS ಯೋಜನೆಯ ಮೂಲಕ ಕನಿಷ್ಠ ಅಸಲು ಹಣವನ್ನಾದರೂ ವಸೂಲಿ ಮಾಡಿಕೊಳ್ಳಲು ಜಲಮಂಡಳಿ ಮುಂದಾಗಿದೆ.
ಈ ನಿರ್ಧಾರದಿಂದ ಸಂಸ್ಥೆಗೆ ಆದಾಯ ಬರಲಿದ್ದು, ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಯ ನಿರ್ವಹಣೆಗೆ ಸಹಕಾರಿಯಾಗಲಿದೆ.
ವನ್ ಟೈಮ್ ಸೆಟಲ್‌ಮೆಂಟ್ ನಿರ್ಧಾರಕ್ಕೆ ಬೆಂಗಳೂರು ನಾಗರಿಕರಿಂದ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ.
ಅನೇಕರು ವರ್ಷಗಳಿಂದ ಬಡ್ಡಿ ಮತ್ತು ದಂಡದ ಕಾರಣ ನೀರಿನ ಬಿಲ್ ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲ ಕಚೇರಿಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ನೀರಿನ ಬಿಲ್ ಅಸಲು ಮೊತ್ತಕ್ಕಿಂತ ದ್ವಿಗುಣಕ್ಕೂ ಹೆಚ್ಚು ಆಗಿದ್ದು, ಇದೀಗ OTS ಯೋಜನೆಯಿಂದ ಭಾರೀ ನಿರಾಳತೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಬಾಕಿ ಬಿಲ್ ಪಾವತಿಸಲು ಜಲಮಂಡಳಿ ಆನ್‌ಲೈನ್, ಜಲಮಂಡಳಿ ಕಚೇರಿಗಳಲ್ಲಿ ಆಫ್‌ಲೈನ್ (Offline) , ಹಾಗೂ ಇತರ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಗಳ ಮೂಲಕ ಅವಕಾಶ ಕಲ್ಪಿಸಿದೆ.
ಮಾರ್ಚ್ ಅಂತ್ಯದವರೆಗೆ ಈ ಯೋಜನೆ ಜಾರಿಯಲ್ಲಿರುವ ನಿರೀಕ್ಷೆ ಇದ್ದು, ನೀರಿನ ಬಿಲ್ ಬಾಕಿದಾರರು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿದೆ.
ಇದನ್ನು ಓದಿ : ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ