Karnataka State Backward Classes Vigilance Forum President KS Shivaramu
Mysore: ಕಳೆದ ಕೆಲ ದಿನಗಳಿಂದ ಎಲ್ಲರ ಗಮನ ಸೆಳೆದಿದ್ದ ಮೂಡಾ ಹಗರಣದ (Muda Scam) ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕುರಿತಾದ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರೊಂದಿಗೆ ಕೈಜೋಡಿಸಿ ಬಿವೈ ವಿಜಯೇಂದ್ರ ಮೈಸೂರಿನಲ್ಲಿ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು (K S Shivaramu) ಸೋಮವಾರ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಇನ್ನು ಈ ಕುರಿತಾಗಿ ಮಾತನಾಡಿದ ಅವರು, ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸರಿಲ್ಲಿದ್ದ ಜಂಟಿ ಜಾಗ. ಈರನಗೆರೆ ಸರ್ವೆ ನಂ 85/2 ರಲ್ಲಿ 1 ಎಕರೆ 3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ. ಅರ್ಜಿ ಸಲ್ಲಿಸಿದ ಬಳಿಕ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ ಮಾಡಲಾಗಿದೆ.
50 ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ ಹಾಕಿಸಿ. ಅಂದಿನ ಮುಡಾ ಆಯುಕ್ತ ಡಿ.ಬಿ.ನಟೇಶ್, ಇಂದಿನ ಬಿಜೆಪಿ ಜಿಲ್ಲಾಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ (L R Mahadevaswamy) ಸೇರಿಕೊಂಡು ಅಕ್ರಮ ಎಸಗಿದ್ದಾರೆ ಎಂದಿದ್ದಾರೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B Y Vijayendra) ಆಪ್ತ ವಲಯದಲ್ಲಿ ಮಹಾದೇವಸ್ವಾಮಿ ಗುರುತಿಸಿಕೊಂಡಿದ್ದು, ಎಲ್.ಆರ್. ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಬಳಿಕ ಹೆಚ್ಚುವರಿಯಾಗಿ ಸರಸ್ವತಿಪುರಂನಲ್ಲಿ 50×80 ಹೆಚ್ಚುವರಿ ನಿವೇಶನವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ.ಈಗಿನ ಮಾರುಕಟ್ಟೆ ಮೌಲ್ಯದ ಪ್ರಕಾರ, ಸೈಟ್ 7 ಕೋಟಿ ರೂ.ಗಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆ, ಆದರೆ ಸೌಮ್ಯ ಅದನ್ನು 5.36 ಲಕ್ಷಕ್ಕೆ ಖರೀದಿಸಿದ್ದಾರೆ.
ನಟೇಶ್ ಮತ್ತು ಮಹದೇವಸ್ವಾಮಿ ಅವರು ವಿಜಯೇಂದ್ರ ಅವರ ಆಪ್ತರಾಗಿರುವ ಕಾರಣ, ಕೋಟ್ಯಾಂತರ ಬೆಲೆ ಬಾಳುವ ಪ್ರದೇಶದಲ್ಲಿ ನಿವೇಶನ ಪಡೆಯಲು ಸಂಚು ರೂಪಿಸಲಾಗಿದೆ. ಇದೀಗ ಬಿಜೆಪಿ (BJP) ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ. ಕೂಡಲೇ ಈ ನಿವೇಶನವನ್ನು ತಡೆ ಹಿಡಿಯಬೇಕು ಎಂದು ಕೇಳಿಕೊಂಡಿದ್ದಾರೆ.
BY Vijayendra Breaking News in Kannada latest Update
Mysore: In the wake of the Muda Scam that has caught everyone’s attention for the past few days, an explosive information about BJP State President B.Y.Vijayendra has been revealed. By joining hands with BJP District President LR Mahadevaswamy and former Muda Commissioner DB Natesh, BY Vijayendra acquired benami property in Mysore Karnataka State Backward Classes Vigilance Forum President K S Shivaramu released the documents on Monday.
He further talked about this and said that there was a joint space in Iranagere where there were no names of 11 people including Syed Habib ur Rehman, Syed Nasruth, Bibi Ayesha. 1 acre 3 gunta land was acquired in Iranagere survey no 85/2. Application to the authority for replacement location on 7-7-2021 for the same place. After submitting the application on 13-7-2021 in the ratio of 50:50 a plot of 12057 feet area was allotted.
After 50 years apply for replacement plot from the original owner for Muda. The then Muda Commissioner D.B. Natesh, today’s BJP District President L.R. He has said that he has committed the crime with the help of L R Mahadevaswamy.
Already BJP state president B.Y. Vijayendra (B Y Vijayendra) identified Mahadevaswami in his close circle, L.R. Mahadevaswamy’s wife is named B.Y. Vijayendra has alleged that he has made benami property. In addition, he has illegally allotted an additional plot of 50×80 in Saraswathipuram. According to the current market value, the site is worth more than Rs 7 crore, but Soumya bought it for Rs 5.36 lakh.
As Natesh and Mahadevaswamy are close friends of Vijayendra, a plot is hatched to get a plot worth crores. Now BJP (BJP) district president LR Mahadevaswami is constructing a grand bungalow at Saraswati Puram. He has asked that this site should be blocked immediately.