Bengaluru: ಬಿಜೆಪಿ ನಾಯಕರಾದ ಸಿಟಿ ರವಿ ಮತ್ತು ಅಶ್ವಥ್ ನಾರಾಯಣ್ (C.T.Ravi and Ashwath Vs siddaramaih) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು “ಸಿದ್ರಾಮುಲ್ಲಾಖಾನ್”ಎಂದು ಟೀಕಿಸಿರುವುದು, ಮುಸ್ಲಿಂ ಮುಲ್ಲಾಗಳಿಗೆ ಮಾಡಿರುವ ಅವಮಾನವಾಗಿದೆ.

ಹೀಗಾಗಿ ಈ ಇಬ್ಬರು ಬಿಜೆ ಪಿ (C.T.Ravi and Ashwath Vs siddaramaih) ನಾಯಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಆಗ್ರಹಿಸಿವೆ.
https://vijayatimes.com/5-drunk-created-brawl/
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಸಚಿವ ಅಶ್ವಥ್ ನಾರಾಯಣ್ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih) ಅವರನ್ನು “ಸಿದ್ರಾಮುಲ್ಲಾ ಖಾನ್” ಎಂದು ವ್ಯಂಗ್ಯ ಮಾಡಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ನಾಯಕರ ಈ ಹೇಳಿಕೆಯಿಂದ ಕಾಂಗ್ರೆಸ್ (Congress) ನಾಯಕರು ಕೆಂಡಾಮಂಡಲರಾಗಿದ್ದಾರೆ. ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್ ಎಂಬುದು ಜನರೇ ನೀಡಿರುವ ಬಿರುದು,
ಇದನ್ನೂ ನೋಡಿ : https://fb.watch/heUzx59dXd/ ಕನ್ನಡ ಮಾದ್ಯಮಗಳ ಬಗ್ಗೆ ರಿಷಬ್ ಶೆಟ್ಟಿ ಏನ್ ಹೇಳಿದ್ದಾರೆ ?
ಈ ಹೇಳಿಕೆ ಕಾಂಗ್ರೆಸ್ ಗರಿಗೆ ಇಷ್ಟು ಉರಿಯುತ್ತೆ ಅಂದಿದ್ರೆ 10 ವರ್ಷದ ಮೊದಲೇ ಇದನ್ನು ಹೇಳುತ್ತಿದ್ದೆ” ಎಂದು ಸಿಟಿ ರವಿ ಹೇಳಿದ್ದರು.
ಇದೀಗ ಈ ವಿವಾದದ ಕುರಿತು ಮಾತನಾಡಿರುವ ಮುಸ್ಲಿಂ ಸಂಘಟನೆಯ ಸಾಧಿಕ್ ಪಾಷಾ (Sadhik Pasha), ಬಿಜೆಪಿ ನಾಯಕರ ಈ ಹೇಳಿಕೆಗಳು ನಮಾಜ್ ಓದಿಸುವ ಮುಲ್ಲಾಗಳಿಗೆ ಮಾಡಿರುವ ಅವಮಾನ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಸಚಿವ ಅಶ್ವಥ್ ನಾರಾಯಣ್ ಇಬ್ಬರೂ ಬಹಿರಂಗವಾಗಿ ಕ್ಷಮೆ ಕೇಳದೆ ಇದ್ದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ.
ಮುಸ್ಲಿಂ ಧರ್ಮದ ಹೆಸರನ್ನು ಈ ಇಬ್ಬರು ನಾಯಕರು ರಾಜಕೀಯಕ್ಕೆ ಎಳೆದು ತರೋದು ಸರಿಯಲ್ಲ ಎಂದು ಮುಸ್ಲಿಂ ಸಂಘಟನೆ ಎಚ್ಚರಿಕೆ ನೀಡಿದೆ.

ಇನ್ನೊಂದೆಡೆ ಕಾಂಗ್ರೆಸ್ ಕೂಡ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಸಿದ್ದರಾಮಯ್ಯ ಎಂಬುದು ಸಿದ್ದರಾಮೇಶ್ವರ ದೇವರ ಹೆಸರು, ಅದನ್ನು ಹೀಗೆ ಹೇಳುವ ಮೂಲಕ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
- ಮಹೇಶ್.ಪಿ.ಎಚ್