- ಆರೋಗ್ಯಕ್ಕೂ ಪ್ರಯೋಜನಕಾರಿ ಕರ್ಪೂರ
- ಕೂದಲ ಬೆಳವಣಿಗೆಗೆ ಕರ್ಪೂರ ಸಹಕಾರಿ
- ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕರ್ಪೂರ ರಾಮಬಾಣ
ಸಾಮಾನ್ಯವಾಗಿ ಮನೆ ಮತ್ತು ದೇವಸ್ಥಾನಗಳ ಪೂಜೆ (Temple worship) ಸಮಯದಲ್ಲಿ ಕರ್ಪೂರವನ್ನು (Camphor health benifits) ಬಳಸಲಾಗುತ್ತದೆ. ಇದು ಕೇವಲ ಪೂಜೆಗೆ ಮಾತ್ರ ಸೀಮಿತವಾಗಿರದೆಯೇ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ಕರ್ಪೂರವನ್ನು (Camphor) ಮರದ ಕಾಂಡದಿಂದ ಪಡೆಯಲಾಗುತ್ತದೆ.
ಇದು ಬಿಳಿ ಬಣ್ಣದ (White Color) ಬಾಷ್ಪಶೀಲ ಎಣ್ಣೆಯುಕ್ತ ವಸ್ತು ಆಗಿದೆ. ಕರ್ಪೂರವನ್ನು ಸುಲಭವಾಗಿ ಸುಡಬಹುದಾಗಿದೆ. ಕರ್ಪೂರವನ್ನು ದೇವರ ಪೂಜೆಗೆ (Pooja) ಬಳಕೆ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಕರ್ಪೂರವನ್ನು ಧಾರ್ಮಿಕ ಆರಾಧನೆಯಲ್ಲಿ ಬಳಕೆ ಮಾಡುತ್ತಾ ಬರಲಾಗಿದೆ. ಬಿಳಿ ಬಣ್ಣದ (White in color) ಕರ್ಪೂರವು ಧಾರ್ಮಿಕವಾಗಿ ಮಾತ್ರವಲ್ಲದೇ, ವೈದ್ಯಕೀಯವಾಗಿಯೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.
ಕರ್ಪೂರದಲ್ಲಿ ಉತ್ಕರ್ಷಣ ನಿರೋಧಕಗಳು (Antioxidants) , ಲಿನಾಲುಲ್, ಲೆಮೋನೇನ್, ಸಬಿನ್ ನಂತಹ ಗುಣಗಳನ್ನು ಹೊಂದಿದೆ. ಹಾಗಾಗಿ ಕರ್ಪೂರ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಿ ಆರೋಗ್ಯವನ್ನು ಸುಧಾರಣೆ ಮಾಡುವ ಶಕ್ತಿಯನ್ನು ಹೊಂದಿದೆ
ಕೂದಲಿನ ಆರೈಕೆಗಾಗಿ, ರಾಸಾಯನಿಕ(Chemical) ಕೂದಲಿನ ಉತ್ಪನ್ನಗಳ ಬದಲಿಗೆ ಕರ್ಪೂರ ಎಣ್ಣೆಯನ್ನು ಬಳಸಿ. ಕರ್ಪೂರದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ನಯವಾಗಿರುತ್ತದೆ ಮತ್ತು ಕೂದಲಿನ (Smooth and hairy) ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಕರ್ಪೂರವನ್ನು ಎಣ್ಣೆಗೆ ಬೆರೆಸಿ (Stir in the oil) ಪ್ರತಿದಿನ ತಲೆಗೆ ಹಚ್ಚಿಕೊಳ್ಳಿ.

ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೊಟ್ಟೆ ಮತ್ತು ಮೊಸರಿಗೆ (eggs and yogurt) ಕರ್ಪೂರದ ಎಣ್ಣೆಯನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡಿದರೆ ಹೇನು ಮುಂತಾದವುಗಳನ್ನು ದೂರ ಇರಿಸುತ್ತದೆ.
ಇನ್ನು ಕರ್ಪೂರದ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಮೊಡವೆಗಳ ಮೇಲೆ ಹಚ್ಚಿ. ಮೊಡವೆಗಳಿಗೆ ಕರ್ಪೂರ (Camphor) ಅತ್ಯುತ್ತಮ ಪರಿಹಾರವಾಗಿದೆ, ಇದನ್ನು ನೀರಿನಲ್ಲಿ ಬೆರೆಸಿ ಪ್ರತಿದಿನ ಮುಖಕ್ಕೆ (face every day) ಉಜ್ಜಿದರೆ ಪರಿಹಾರ ಸಿಗುತ್ತದೆ. ಆದರೆ ಹೊಟ್ಟೆಗೆ ಹೋಗದಂತೆ ನೋಡಿಕೊಳ್ಳಿ. ಕೆಂಪು ದದ್ದುಗಳು (Red rashes) ಮತ್ತು ಚರ್ಮದ ತುರಿಕೆಗೆ ಚಿಕಿತ್ಸೆಗೆ ಕೂಡ ಕರ್ಪೂರವನ್ನು ಜೆಲ್ ರೂಪದಲ್ಲಿ ಬಳಸಬಹುದು.
ಒಡೆದ ಪಾದಗಳ ಚಿಕಿತ್ಸೆಗೆ ಕರ್ಪೂರವನ್ನು ನೀರಿನಲ್ಲಿ ಕಲಸಿ ಬೆಳಗ್ಗೆ ಸ್ವಲ್ಪ ಹೊತ್ತು ನೆನೆಸಿ ನಂತರ (After soaking) ರುಬ್ಬಿ ತೊಳೆದ ನಂತರ ಕೆನೆ ಮತ್ತು ಪೆಟ್ರೋಲಿಯಂ ಜೆಲ್ಲಿ ಹಚ್ಚಿದರೆ ದದ್ದು ಮಾಯವಾಗುತ್ತದೆ.ಕರ್ಪೂರವನ್ನು ನಿಯತವಾಗಿ ಲೇಪಿಸುವುದರಿಂದ ಉಗುರು ಶಿಲೀಂಧ್ರವನ್ನು (Nail fungus) ಕಡಿಮೆ ಮಾಡಬಹುದು.
ಇದನ್ನು ಓದಿ : http://ಅಮೆರಿಕದಲ್ಲಿ ಪ್ರಿಸ್ಕ್ರಿಪ್ಷನ್ ಔಷಧಿಗಳ ಬೆಲೆ ಕಡಿತಗೊಳಿಸಲು ಟ್ರಂಪ್ ಹೊಸ ಯೋಜನೆ; ಶೇ 80ರಷ್ಟು ಇಳಿಕೆ
ಅದು ಬರದಂತೆ ತಡೆಯಲಾಗುವುದು. (Camphor health benifits) ಇದು ನೈಸರ್ಗಿಕ ಆಂಟಿಫಂಗಲ್ ಏಜೆಂಟ್ ಅನ್ನು ಹೊಂದಿದೆ.