Bangalore : ಬೆಂಗಳೂರಿನಿಂದ ಮಧ್ಯಪ್ರದೇಶದ ಜಬಲ್ಪುರ, ಹಾಗೂ ಜಬಲ್ಪುರದಿಂದ ಬೆಂಗಳೂರಿನ ನಡುವೆ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲಿನಲ್ಲಿ (Super Fast Express Passenger Train) ಇನ್ನು ಮುಂದೆ ಸ್ಲೀಪರ್ ಕೋಚ್ ಎ.ಸಿ ಬೋಗಿಗಳಿರುವುದಿಲ್ಲ. ಈ ಬೋಗಿಗಳನ್ನು ಏಪ್ರಿಲ್ 8ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಎಂದು ನೈರುತ್ಯ ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ (Anish Hegde) ಪ್ರಕಟಣೆ ಹೊರಡಿಸಿದ್ದಾರೆ. ಇವೆರಡು ನಗರಗಳ ಮಧ್ಯದಲ್ಲಿ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ (ರೈಲಿನ ಸಂಖ್ಯೆ 12194/12193) ಒಂದು ಹವಾ ನಿಯಂತ್ರಿತ ಸ್ಲೀಪರ್ ಕೋಚ್ ಭೋಗಿ ಇದೆ. ಇದನ್ನು ಏಪ್ರಿಲ್ 8ರ ನಂತರ ಈ ಬೋಗಿಯನ್ನು ರದ್ದುಗೊಳಿಸಲಾಗಿದೆ.
ಆದರೆ ಇದಕ್ಕೆ ಬದಲಾಗಿ ಹವಾ ನಿಯಂತ್ರಿತ ಮೂರನೇ ದರ್ಜೆಯ ಎ.ಸಿ ತ್ರೀ ಟೈಯರ್ ಎಕಾನಮಿಕ್ ಬೋಗಿಯನ್ನು (AC three tier economy coach) ಅಳವಡಿಸಲಾಗುತ್ತಿದೆ, ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಧ್ಯಪ್ರದೇಶದ ಜಬಲ್ಪುರದಿಂದ ಬೆಂಗಳೂರಿನ ಯಶವಂತಪುರದ ಕಡೆಗೆ ಏಪ್ರಿಲ್ 8ರಂದು ಹೊರಡುವ ರೈಲು ಹಾಗೂ ಯಶವಂತಪುರದಿಂದ ಜಬಲ್ಪುರಕ್ಕೆ ಏಪ್ರಿಲ್ 9ರಂದು ಹೊರಡುವ ರೈಲು ಇವೆರಡರಲ್ಲೂ ಎ.ಸಿ ಸ್ಲೀಪರ್ ಬೋಗಿ ಇರುವುದಿಲ್ಲ.
ಇದನ್ನೂ ಓದಿ : https://vijayatimes.com/dhruvanarayan-wife-dies/
ಆದ್ದರಿಂದ ಅದೇ ದಿನದಂದು ಈ ಬೋಗಿಗಳನ್ನು ರದ್ದು ಮಾಡುವ ಆದೇಶವು ಜಾರಿಗೊಳುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದಲ್ಲದೆ ಹೊಸದಾಗಿ ಜೋಡಿಸಲ್ಪಡುವ ಸ್ಲೀಪರ್ ಕ್ಲಾಸ್ ಎಕನಾಮಿ ಬೋಗಿ ಸೌಲಭ್ಯವು ಇವೆರಡು ನಗರಗಳ ನಡುವೆ ಸಂಚಾರ ಮಾಡುವ ರೈಲುಗಳಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ತಿಳಿಸಿದ್ದಾರೆ