Cancer on the rise in men: Death toll to rise in next 25 years, why?
Cancer News: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ (Cancer) ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಪೂರಕ ಎನ್ನುವಂತೆ ಹಲವಾರು ರೀತಿಯ ಅಧ್ಯಯನಗಳು ನಡೆಯುತ್ತಿದೆ. ಇದೆ ವಿಷಯವಾಗಿ ನಡೆದಂತಹ ಒಂದು ಅಧ್ಯಯನದಲ್ಲಿ, 2050ರ ವೇಳೆಗೆ ಪುರುಷರಲ್ಲಿ ಕ್ಯಾನ್ಸರ್ ರೋಗನಿರ್ಣಯ ಮತ್ತು ಸಾವುನೋವುಗಳ ಸಂಖ್ಯೆಯು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
2022 ರಿಂದ 2050ರ ನಡುವೆ ಕ್ಯಾನ್ಸರ್ ಸಮಸ್ಯೆಯು ಜಾಗತಿಕವಾಗಿ ಶೇಕಡಾ 84ರಷ್ಟು ಹೆಚ್ಚಳವಾಗಲಿದ್ದು, ಪುರುಷರಲ್ಲಿ ಕ್ಯಾನ್ಸರ್ ನಿಂದ ಹೆಚ್ಚುವ ಸಾವುಗಳಲ್ಲಿ ಶೇಕಡಾ 93 ರಷ್ಟು ಹೆಚ್ಚಳವಾಗಿದೆ ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪೀರ್- ರಿವ್ಯೂಡ್ ಜರ್ನಲ್ (American Cancer Society Peer Reviewed Journal) ನಲ್ಲಿ ಪ್ರಕಟವಾದ ಅಧ್ಯಯನದಿಂದಾಗಿ ಸಂಶೋಧಕರು ಅಂದಾಜಿಸಿದ್ದಾರೆ.
ಪುರುಷರಲ್ಲಿ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು?
ಅಧ್ಯಯನದ ಪ್ರಕಾರ, 185 ದೇಶಗಳಿಂದ ಡೇಟಾವನ್ನು (Data) ಸಂಗ್ರಹಿಸಿದ್ದು, ಸಂಶೋಧಕರು ಹೇಳುವ ಪ್ರಕಾರ, ಪುರುಷರು ಮಹಿಳೆಯರಿಗಿಂತ ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಇದು ಕ್ಯಾನ್ಸರ್ ಮತ್ತು ಅದಕ್ಕೆ ಸಂಬಂಧಿತ ಸಾವುನೋವುಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಪುರುಷರಲ್ಲಿ ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಾಗ, ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬರುವ ಸಾಧ್ಯತೆ ತುಂಬಾ ಕಡಿಮೆ ಮತ್ತು ಕೆಲಸದಲ್ಲಿ ಕ್ಯಾನ್ಸರ್ ಕಾರಕಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ವಯಸ್ಸಾದವರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ
65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಕ್ಯಾನ್ಸರ್ ಕಂಡು ಬರುತ್ತಿದ್ದು, ಯುವಕರಿಗೆ ಹೋಲಿಸಿದರೆ ಅವರು ಬದುಕುಳಿಯುವ ಪ್ರಮಾಣ ಕಡಿಮೆ ಆಗಿದೆ. ಯಾಕೆಂದರೆ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದಿರುವುದು, ಅನಾರೋಗ್ಯ (Health Problem) ಕೊನೆ ಹಂತಕ್ಕೆ ಹೋದಾಗ ರೋಗನಿರ್ಣಯ ಮಾಡಲಾಗುತ್ತದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಅವರಲ್ಲಿ ಕೆಲವರಿಗೆ ಹೆಚ್ಚು ಪ್ರಮಾಣದ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಇದೆಲ್ಲಾ ಕಾರಣದಿಂದ, ವಯಸ್ಸಾದವರಲ್ಲಿ ಕ್ಯಾನ್ಸರ್ ನಿಂದ ಸಂಭವಿಸಬಹುದಾದ ಸಾವು 3.4 ಮಿಲಿಯನ್ ನಿಂದ 7.7 ಮಿಲಿಯನ್ ಗೆ ಏರುವ ನಿರೀಕ್ಷೆಯಿದೆ. ಅಲ್ಲದೆ ಕ್ಯಾನ್ಸರ್ ಪ್ರಕರಣಗಳು 2022 ರಲ್ಲಿ 6 ಮಿಲಿಯನ್ ನಿಂದ 2050 ರ ವೇಳೆಗೆ 13.1 ಮಿಲಿಯನ್ ಗೆ ಏರುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.
ಎಲ್ಲೆಲ್ಲಿ ಹೆಚ್ಚಳ?
2022 ಮತ್ತು 2050 ರ ನಡುವೆ, ಆಫ್ರಿಕಾ (Africa) ಮತ್ತು ಪೂರ್ವ ಮೆಡಿಟರೇನಿಯನ್ನಲ್ಲಿ, ಕ್ಯಾನ್ಸರ್ ಪ್ರಕರಣ ಮತ್ತು ಸಾವುಗಳ ಸಂಖ್ಯೆ 2.5 ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆ ವ್ಯತಿರಿಕ್ತವಾಗಿ, ಯುರೋಪ್ ನಲ್ಲಿ ಇದರ ಅರ್ಧದಷ್ಟು ಹೆಚ್ಚಳ ಕಂಡು ಬರುವ ನಿರೀಕ್ಷೆಯಿದೆ” ಎಂದು ಸಂಶೋಧಕರು ಹೇಳಿದ್ದಾರೆ.
Cancer Increases in Young People trending news
ಯಾವ ರೀತಿಯ ಕ್ಯಾನ್ಸರ್ ಹೆಚ್ಚಾಗುತ್ತದೆ?
2050ರಲ್ಲಿ ಜಾಗತಿಕವಾಗಿ ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗಲು ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ ಎಂದು ಊಹಿಸಲಾಗಿದೆ, 2022 ರಿಂದ 2050 ರವರೆಗೆ ಶೇಕಡಾ 87ಕ್ಕಿಂತ ಹೆಚ್ಚಾಗಿದೆ. ಇದರ ನಂತರ ಪ್ರಾಸ್ಟೇಟ್ ಮತ್ತು ಕೊಲೊರೆಕ್ಟಲ್ (Prostate and Colorectal) ಕ್ಯಾನ್ಸರ್ ಬರುತ್ತದೆ. ಅಲ್ಲದೆ 2050 ರ ವೇಳೆಗೆ ಮೂತ್ರಕೋಶದ ಕ್ಯಾನ್ಸರ್ ಹೆಚ್ಚು ಮಾರಣಾಂತಿಕವಾಗಲಿದೆ ಎಂದು ಊಹಿಸಲಾಗಿದ್ದರೂ, ಚರ್ಮದ ಕ್ಯಾನ್ಸರ್, ಹೆಚ್ಚಿನ ಸಾವುಗಳಿಗೆ ಕಾರಣವಾಗಬಹುದು ಎಂಬುದು ಅಧ್ಯಯನಗಳಿಂದ ಕಂಡು ಬಂದಿದೆ.
In recent times, the problem of cancer is increasing day by day, and various types of studies are being conducted to supplement this. In one such study, it is said that by 2050, the number of cancer diagnoses and deaths among men will increase.
Between 2022 and 2050, the cancer problem will increase by 84 percent globally, with a 93 percent increase in cancer deaths among men, according to a study published in the American Cancer Society Peer Reviewed Journal.
What causes cancer to increase in men?
According to the study, which collected data from 185 countries, researchers say men smoke and drink more alcohol than women, which increases the risk of cancer and related deaths. Also, when men develop cancer-related symptoms, they are less likely to seek medical attention and are more likely to be exposed to carcinogens at work.
Cancer cases increase in the elderly
Cancer is more common in people aged 65 years and older and has a lower survival rate compared to younger people. Because they do not respond properly to treatment, it is mentioned in the study that the illness (health problem) is diagnosed when it goes to the last stage.
But some of them are unable to afford high medical expenses. Because of all this, cancer-related deaths among the elderly are expected to rise from 3.4 million to 7.7 million. It is also estimated that cancer cases will increase from 6 million in 2022 to 13.1 million by 2050.
Where is the increase?
Between 2022 and 2050, in Africa and the Eastern Mediterranean, the number of cancer cases and deaths is expected to increase 2.5 times. In contrast, Europe is expected to see half of this increase,” the researchers said.
What type of cancer increases?
Lung cancer is predicted to be the leading cause of increased cancer cases and deaths globally in 2050, increasing by more than 87 percent from 2022 to 2050. This is followed by prostate and colorectal cancer. Also, while bladder cancer is predicted to be the most deadly by 2050, studies have found that skin cancer may cause more deaths.