• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಕರ್ನಾಟಕಕ್ಕೆ ಶುರುವಾಯಿತು ಕ್ಯಾನ್ಸರ್ ಕಾಟ, 2 ತಿಂಗಳಲ್ಲಿ 5,000ಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್ ಪತ್ತೆ

Teju Srinivas by Teju Srinivas
in ಆರೋಗ್ಯ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಕರ್ನಾಟಕಕ್ಕೆ ಶುರುವಾಯಿತು ಕ್ಯಾನ್ಸರ್ ಕಾಟ, 2 ತಿಂಗಳಲ್ಲಿ 5,000ಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್ ಪತ್ತೆ
0
SHARES
1k
VIEWS
Share on FacebookShare on Twitter

*ಕರ್ನಾಟಕಕ್ಕೆ ಕ್ಯಾನ್ಸರ್‌ (Cancer threat in Karnataka) ಕಾಟ
*2 ತಿಂಗಳಲ್ಲಿ 2,000 ಕೇಸ್‌ ಪತ್ತೆ
*ಗೃಹ ಆರೋಗ್ಯ ಯೋಜನೆ ಅಡಿ ಸ್ಕ್ರೀನಿಂಗ್ ವೇಳೆ ಮಾಹಿತಿ

ಕ್ಯಾನ್ಸರ್‌ ಹೆಸರು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳ್ತೀವಿ. ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್​‌ಗೆ ತುತ್ತಾಗುತ್ತಿದ್ದಾರೆ.

ಈ ಕ್ಯಾನ್ಸರ್‌ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡೋರೂ (Cancer threat in Karnataka) ಕೂಡ ಕ್ಯಾನ್ಸರ್‌ಗೆ ತುತ್ತಾಗ್ತಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ಹಾಟ್‌ಸ್ಫಾಟ್‌ ಆಗಿ ಬದಲಾಗುತ್ತಿದೆ.

ಕೆಲವರು ಆರಂಭದಲ್ಲೇ ಚಿಕಿತ್ಸೆ ಪಡೆದು ಗುಣಮುಖರಾದ್ರೆ, ಇನ್ನೂ ಕೆಲವರಿಗೆ ತಡವಾಗಿ ಕ್ಯಾನ್ಸರ್‌ (Cancer) ಇರೋದು ಗೊತ್ತಾಗುತ್ತೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಅದೆಷ್ಟೋ ಜನ ಸಾವನ್ನಪ್ಪಿದ್ದ ಅದೆಷ್ಟೋ ಉದಾಹರಣೆಗಳು ಇಂದಿಗೂ ಜೀವಂತವಾಗಿದೆ.

Cancer threat in Karnataka

ಕೊರೋನಾದ ಬಳಿಕ ಬೆಂಗಳೂರು ಸೇರಿ ಕರ್ನಾಟಕದಲ್ಲಿ ವೈರಸ್ ಹಾವಳಿ ಶುರುವಾಗಿದ್ದು, ಈ ವೈರಸ್‌ನಿಂದ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ.

ಜನರ ಆರೋಗ್ಯ ಸಮಸ್ಯೆಗಳು ಹೆಚ್ಚಾದ ಬೆನ್ನಲ್ಲೇ ಬಿಪಿ, ಶುಗರ್, ಕ್ಯಾನ್ಸರ್ ಜೊತೆಗೆ ಕೋಮಾರ್ಬಿಟಿಸ್ (Cancer threat in Karnataka) ಹೊಂದಿರುವ ರೋಗಿಗಳ ಲಿಸ್ಟ್ ಮಾಡಲಾಗಿದ್ದು ಇವರಿಗೆಲ್ಲ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ನೀಡಲಾಗ್ತಿದೆ.


ಗೃಹ ಆರೋಗ್ಯ’ ಯೋಜನೆಯಡಿ ಈ ಚಿಕಿತ್ಸೆ ನೀಡಲಾಗ್ತಿದೆ. ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಕೆಲವೊಂದು ಸಮಸ್ಯೆಗಳಿಗೆ ಅಗತ್ಯವಿರುವಷ್ಟು ಔಷಧಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತಿದೆ.

ಕಳೆದ ಎರಡು ತಿಂಗಳಲ್ಲಿ ‘ಗೃಹ ಆರೋಗ್ಯದಡಿ’ ಲಕ್ಷಾಂತರ ಜನರಿಗೆ ಆರೋಗ್ಯ ಇಲಾಖೆ ಕ್ಯಾನ್ಸರ್ ಸ್ಕ್ರಿನಿಂಗ್ (Screening) ಮಾಡಿದೆ. ಈ ವೇಳೆ 5664 ಕ್ಯಾನ್ಸರ್ ಪೀಡಿತ ರೋಗಿಗಳು ಪತ್ತೆಯಾಗಿದ್ದಾರೆ.

ಕರ್ನಾಟಕದಲ್ಲಿ ಕಳೆದ 2 ವರ್ಷಗಳ ಅಂತರದಲ್ಲಿ ಸುಮಾರು 2,000 ಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್‌ ಕೇಸ್‌ ಪತ್ತೆಯಾಗಿದೆ. ಗೃಹ ಆರೋಗ್ಯ ಯೋಜನೆ ಅಡಿ ಸ್ಕ್ರೀನಿಂಗ್ ಮಾಡಿದಾಗ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಕಳೆದ ಎರಡು ತಿಂಗಳ ‘ಗೃಹ ಆರೋಗ್ಯ’ದಲ್ಲಿ 5664 ಕ್ಯಾನ್ಸರ್ ಪೀಡಿತ ರೋಗಿಗಳು ಪತ್ತೆಯಾಗಿದ್ದು ಹೆಚ್ಚುವರಿ ಚಿಕಿತ್ಸೆಗೆ ಇಲಾಖೆ ಸೂಚಿಸಿದೆ.

ಈ ಪೈಕಿ ಓರಲ್ ಕ್ಯಾನ್ಸರ್ 3403 ಜನರಲ್ಲಿ ಕಂಡು ಬಂದಿದೆ. ಆರೋಗ್ಯ ಇಲಾಖೆ ಇದೀಗ ಮತ್ತಷ್ಟು ಜನರನ್ನ ಸ್ಕ್ರೀನಿಂಗ್​ಗೆ ಒಳಪಡಿಸಲು ಮುಂದಾಗಿದೆ.

ಗೃಹ ಆರೋಗ್ಯ ಸ್ಕ್ರೀನಿಂಗ್ ವೇಳೆ ಬೆಳಕಿಗೆ ಬಂದ ಕ್ಯಾನ್ಸರ್ ಪ್ರಕರಣಗಳು ಹೀಗಿದೆ. ಓರಲ್ 3, 403 ಬ್ರೆಸ್ಟ್ ಕ್ಯಾನ್ಸರ್1,311, ಸರ್ವೈಕಲ್ ಕ್ಯಾನ್ಸರ್, 950 ಪ್ರಕರಣಗಳು ಪತ್ತೆಯಾಗಿದೆ.

ಅದರಲ್ಲೂ ಮಹಿಳೆಯರಲ್ಲೇ ಹೆಚ್ಚು ಕ್ಯಾನ್ಸರ್ ಪತ್ತೆಯಾಗ್ತಿರೋದು ಆತಂಕಕಾರಿಯಾಗಿದೆ.

ಪ್ರತಿ ವರ್ಷ ಭಾರತದಲ್ಲಿ ಸುಮಾರು 13.9 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದ್ದು, ಕರ್ನಾಟಕದಲ್ಲಿ ಕಳೆದ ವರ್ಷ 87,000 ಹೊಸ ಪ್ರಕರಣಗಳು ವರದಿಯಾಗಿವೆ.

ಇದರಲ್ಲಿ ಪ್ರಮುಖವಾಗಿ ಮಹಿಳೆಯರೇ ಹೆಚ್ಚಾಗಿ ಮಾರಕ‌ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ತಿಳಿದುಬಂದಿದೆ. ಕಳೆದ ವರ್ಷ ಬರೋಬ್ಬರಿ 48685 ಮಹಿಳೆಯರಲ್ಲಿ ಹಾಗೂ 39170 ಪುರುಷರಲ್ಲಿ‌ ಕ್ಯಾನ್ಸರ್ ಪತ್ತೆಯಾಗಿದೆ.

ಅದರಲ್ಲೂ ಬೆಚ್ಚಿಬೀಳಿಸುವ ಸಂಗತಿಯೆಂದರೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.

ಒಟ್ಟಿನಲ್ಲಿ ಬದಲಾದ ಜೀವನಶೈಲಿ, ಮಾಲಿನ್ಯ ಇತರ ಕಾರಣಗಳಿಂದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕೊಂಚ ಹೆಚ್ಚಿನ ಎಚ್ಚರವಹಿಸಬೇಕಿದೆ.

ಇದನ್ನು ಓದಿ : ಬಿಎಂಟಿಸಿಯಲ್ಲಿ ಮದ್ಯಪಾನ ಮಾಡಿದ ಡ್ರೈವರ್‌ಗಳಿಗೆ ಡ್ಯೂಟಿ: ಡಿಪೋ ಮ್ಯಾನೇಜರ್ ಸೇರಿ 9 ಮಂದಿ ತಾತ್ಕಾಲಿಕ ಅಮಾನತು
Tags: cancerHealthKarnataka

Related News

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ
ಪ್ರಮುಖ ಸುದ್ದಿ

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ

July 15, 2026
ಫ್ರಾನ್ಸ್‌ ವಿರುದ್ಧ 2-0 ಜಯ: ಫಿಫಾ ವಿಶ್ವಕಪ್‌ 2026 ಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ
Sports

ಫ್ರಾನ್ಸ್‌ ವಿರುದ್ಧ 2-0 ಜಯ: ಫಿಫಾ ವಿಶ್ವಕಪ್‌ 2026 ಫೈನಲ್‌ಗೆ ಸ್ಪೇನ್ ಭರ್ಜರಿ ಎಂಟ್ರಿ

July 15, 2026
ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್
ಪ್ರಮುಖ ಸುದ್ದಿ

ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್

July 15, 2026
ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ
ಪ್ರಮುಖ ಸುದ್ದಿ

ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ

July 15, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.