- ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರ ಬಳಿ ಕಾರು ಸ್ಪೋಟ
- ಕೃತ್ಯದ ಹಿಂದೆ ಉಗ್ರರ ಕೈವಾಡ
- ಪುಲ್ವಾಮಾ ನಿವಾಸಿ ತಾರಿಕ್ ಖರೀದಿಸಿದ್ದ ಕಾರು ಸ್ಫೋಟ
New Delhi: ದೆಹಲಿ ನಗರದಲ್ಲಿ ಐತಿಹಾಸಿಕ ಕೆಂಪು ಕೋಟೆಯ (Red Fort) ಸಮೀಪ ಸಂಭವಿಸಿರುವ ಕಾರು ಸ್ಫೋಟ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ನಂತರ ಪೊಲೀಸರು ವೇಗವಾಗಿ ತನಿಖೆ ಆರಂಭಿಸಿದ್ದು, ವಾಹನದ ಮಾಲೀಕನನ್ನು ಬಂಧಿಸಿದ್ದಾರೆ. (Car blast near Red Fort)
ಸ್ಫೋಟಕ್ಕೂ ಕೆಲ ಗಂಟೆಗಳ ಮುನ್ನ ಕಾರಿನ ಚಲನವಲನಗಳನ್ನು ಸಿಸಿಟಿವಿ ಕ್ಯಾಮೆರಾಗಳು (CCTV Camera) ಸ್ಪಷ್ಟವಾಗಿ ಕ್ಯಾಪ್ಚರ್ ಮಾಡಿವೆ.

ಪ್ರಾಥಮಿಕ ತನಿಖೆ ಪ್ರಕಾರ, ಕಾರನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿ ಜಮ್ಮು-ಕಾಶ್ಮೀರದ (Jammu-Kashmir) ಪುಲ್ವಾಮಾದ ನಿವಾಸಿ ಮತ್ತು ವೈದ್ಯನಾದ ಉಮರ್ ಮೊಹಮ್ಮದ್ ಎಂಬ ಅನುಮಾನ ವ್ಯಕ್ತವಾಗಿದೆ.
ಇದರಿಂದಾಗಿ ದೆಹಲಿ ಮತ್ತು ಹರಿಯಾಣ ಪೊಲೀಸರು ಸಂಯುಕ್ತವಾಗಿ ತನಿಖೆಯನ್ನು ಮುಂದುವರಿಸಿದ್ದಾರೆ. (Car blast near Red Fort)
ಪೊಲೀಸ್ ಮೂಲಗಳ ಪ್ರಕಾರ, ಸ್ಫೋಟಕ್ಕೆ ಬಳಸಿದ್ದು ಅಮೋನಿಯಂ (Ammonium) ನೈಟ್ರೇಟ್ ಮತ್ತು ಡಿಟೊನೇಟರ್ಸ್ (Detonators).
ಇದು ಸಾಮಾನ್ಯವಾಗಿ ಬಾಂಬ್ ಸ್ಫೋಟಗಳಲ್ಲಿ ಬಳಸಲಾಗುತ್ತಿದ್ದು, ಸ್ಫೋಟದ ಸ್ವರೂಪ ಗಂಭೀರವಾಗಿರುವುದನ್ನು ಸೂಚಿಸುತ್ತದೆ.
ಸ್ಫೋಟಗೊಂಡ ವೈಟ್ ಹುಂಡೈ (Hyundai) i20 ಕಾರು ಮಧ್ಯಾಹ್ನ 3:19ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸಿದ್ದು, ಮೂರು ಗಂಟೆಗಳ ಕಾಲ ಅಲ್ಲಿ ನಿಂತಿತ್ತು.
ಸಿಸಿಟಿವಿ ದೃಶ್ಯಗಳ ಪ್ರಕಾರ ಸಂಜೆ 6:48ಕ್ಕೆ ಜನಸಂದಣಿ ನಡುವೆ ನಿಧಾನವಾಗಿ ಪಾರ್ಕಿಂಗ್ (Parking) ಪ್ರದೇಶದಿಂದ ಹೊರಬರುತ್ತಿರುವುದು ದಾಖಲಾಗಿದೆ.
ಆದರೆ ಕಾರಿನ ಒಳಗಿನ ವ್ಯಕ್ತಿ ಮುಖ ಮುಚ್ಚಿಕೊಂಡಿರುವ ಕಾರಣ ಪೊಲೀಸರು ಇನ್ನಷ್ಟು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
100ಕ್ಕೂ ಹೆಚ್ಚು ಸಿಸಿಟಿವಿ ಕ್ಲಿಪ್‌ಗಳನ್ನು ಪೂರಕವಾಗಿ ಪರಿಶೀಲಿಸಲಾಗುತ್ತಿದೆ.
ಇನ್ನು ಕಾರಿನ ಮಾಲೀಕ ಗುರುಗ್ರಾಮ್‌ನ ನಿವಾಸಿಯಾದ ಎಂ.ಡಿ. ಸಲ್ಮಾನ್ (M.D. Salman) ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ತನಿಖೆ ಪ್ರಕಾರ, ಅವರು ಕಾರನ್ನು ಓಖ್ಲಾದ ದೇವೇಂದ್ರ ಎಂಬಾತನಿಗೆ ಮಾರಾಟಮಾಡಿದ್ದು, ನಂತರ ಅಂಬಾಲಾದ ವ್ಯಕ್ತಿಯೊಬ್ಬನು ಖರೀದಿಸಿದ್ದು, ಕೊನೆಗೆ ಪುಲ್ವಾಮಾದ ತಾರೀಕ್ ಎಂಬಾತನಿಗೆ ಬಾರುತ್ತಿದ್ದಂತೆ ಮಾಹಿತಿ ಸಿಗುತ್ತಿದೆ.
ಆದರೆ ವಾಹನ ಇನ್ನೂ ಸಲ್ಮಾನ್ ಹೆಸರಲ್ಲೇ ನೋಂದಣಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸ್ಫೋಟದ ನಂತರ ಚಿಕಿತ್ಸೆಗಾಗಿ ಕರೆದೊಯ್ಯಲಾದ ಗಾಯಾಳುಗಳ ದೇಹದಲ್ಲಿ ಒಂದೂ ಪೆಲೆಟ್ ಅಥವಾ ಶಾರ್ಪ್ನೆಲ್ ಪತ್ತೆಯಾಗಿಲ್ಲ.
ಇದು ಸಾಮಾನ್ಯ ಬಾಂಬ್ ಸ್ಪೋಟಕ್ಕಿಂತ ವಿಭಿನ್ನ ರೀತಿಯ ಸ್ಫೋಟವಾಗಿರಬಹುದೆಂಬ ಶಂಕೆಗೆ ಬಲ ನೀಡುತ್ತಿದೆ.
ಇನ್ನು ಸ್ಫೋಟದಲ್ಲಿ ಒಟ್ಟು 9 ಜನರು ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಘಟನೆ ನಂತರ ದೆಹಲಿ ಪೊಲೀಸ್ ಇಲಾಖೆ ಹಾಗೂ NIA, NSG ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿವೆ.
ನಗರದಾದ್ಯಂತ ಹೈ ಅಲರ್ಟ್ (High Alert) ಘೋಷಿಸಲ್ಪಟ್ಟಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಗೃಹ ಸಚಿವ ಅಮಿತ್ ಶಾ (Amith Shah) ಉನ್ನತ ಮಟ್ಟದ ಸಭೆ ಕರೆದಿದ್ದು, ಸ್ಫೋಟದ ಹಿನ್ನೆಲೆಯ ಎಫ್‌ಎಸ್‌ಎಲ್, ಎನ್‌ಎಸ್‌ಜಿ ಮತ್ತು ಎನ್‌ಐಎ ಅಧಿಕಾರಿಗಳು ಸಹ ತನಿಖೆಯಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನು ಓದಿ : ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿದ ಕೇಂದ್ರ ಸರ್ಕಾರ: ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ತಡೆ