ಧಾರಾಪುರಂ, ಮಾ. 30: ತಮಿಳುನಾಡು ವಿಧಾನಸಭೆಯ ಸ್ಪೀಕರ್ ಪಿ.ಧನಪಾಲ್ ಅವರ ಕಾರು ಮಂಗಳವಾರ ಧಾರಾಪುರಂ ಸೂರಿನಲ್ಲೂರ್ ಟೋಲ್ ಗೇಟ್ ಬಳಿ ಅಪಘಾತಕ್ಕೀಡಾಗಿದೆ. ಸ್ಪೀಕರ್ ಧನಪಾಲ್ ಜತೆ ರಾಜ್ಯ ಸಚಿವ ಎಸ್.ಪಿ. ವೇಲುಮಣಿ ಇದ್ದರು. ಅಪಘಾತದಲ್ಲಿ ಧನಪಾಲ್ ಅವರಿಗೆ ಗಾಯಗಳಾಗಿವೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ. ಮಧ್ಯಾಹ್ನ ಧಾರಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರಿಬ್ಬರು ಹೊರಟಿದ್ದರು.
ಫೆಬ್ರವರಿ 25ರಂದು ಮೋದಿ ಧಾರಾಪುರಂ ಚುನಾವಣಾ ಕ್ಷೇತದಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ತಮಿಳುನಾಡಿನ ಆಡಳಿತಾರೂಢ ಪಕ್ಷ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಮೈತ್ರಿ ಪಕ್ಷವಾಗಿ ಬಿಜೆಪಿ ಇಲ್ಲಿ ಕಣಕ್ಕಿಳಿದಿದೆ. 234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟದ ವಿರುದ್ಧ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ ಸ್ಪರ್ಧಿಸಲಿದೆ.