- ತೊಗರಿ ಬೇಳೆಯಲ್ಲಿ ಡೆಡ್ಲಿ ಬಣ್ಣ ಬಳಕೆ (Carcinogenic dye found in lentil)
- ಆಹಾರ ಸುರಕ್ಷತಾ ಇಲಾಖೆಯಿಂದ ಎಚ್ಚರಿಕೆ
ನಿತ್ಯ ಸಾಂಬಾರು ತಯಾರಿಸಲು ಬಳಸುವ ತೊಗರಿ ಬೇಳೆಯಲ್ಲೂ (Togari dal) ಸಹ ಕಲಬೆರಕೆ ಇದೆ ಎಂದು ಆಹಾರ ಸುರಕ್ಷತಾ ಇಲಾಖೆ (Department of Food Safety) ಎಚ್ಚರಿಕೆ ನೀಡಿದೆ.ತೊಗರಿ ಬೇಳೆಯಲ್ಲಿ ಹಾನಿಕಾರಕ ಮತ್ತು ಕ್ಯಾನ್ಸರ್ ಕಾರಕ (Carcinogen) ಅಂಶ ಪತ್ತೆಯಾಗಿದೆ.
ಇದರಲ್ಲಿ ಬೇರೆಸುವ ಕ್ಯಾನ್ಸರ್ಕಾರಕ ಬಣ್ಣ ಇರುವುದರಿಂದ ಅದನ್ನು ಸೇವಿಸುವುದರಿಂದ ಪಾರ್ಶ್ವವಾಯು (Paralysis), ಅಂಗವೈಕಲ್ಯ (Disability), ಮತ್ತು ಕ್ಯಾನ್ಸರ್ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಸಿದೆ.ದಿನನಿತ್ಯ ಸೇವಿಸುವ ಆಹಾರದಲ್ಲಿ ಕಲಬೆರಕೆ ಹೆಚ್ಚಾಗಿದ್ದು,ಜೇನುತುಪ್ಪದಲ್ಲೂ ರಾಸಾಯನಿಕ ಬಣ್ಣ ಬಳಕೆಯ ಬಗ್ಗೆಯೂ ಕೂಡ ಸಾಕಷ್ಟು ದೂರುಗಳು ಬಂದಿದೆ.
ತೊಗರಿ ಬೇಳೆಗೆ ಅತ್ಯಂತ ಅಪಾಯಕಾರಿ ಬಣ್ಣವನ್ನು ಎರಡು ದಶಕಗಳಿಂದ ಮಿಕ್ಸ್ ಮಾಡಿ ಜನರಿಗೆ ತಿನ್ನಿಸುತ್ತಿದ್ದಾರೆ. ಕೇಸರಿ ಬೇಳೆಗೆ ಕ್ಯಾನ್ಸರ್ ಕಾರಕ ರ್ಟ್ರಾಜೈನ್ (Tartrazine) ಎಂಬ ವಿಷಕಾರಿ ಬಣ್ಣ ಮಿಕ್ಸ್ ಮಾಡುತ್ತಿದ್ದಾರೆ. ಈ ಬೇಳೆಯನ್ನು ನಿರಂತರವಾಗಿ ಸೇವನೆ ಮಾಡಿದ್ರೆ 3 ರಿಂದ 90 ದಿನದ ಒಳಗೆ ಮನುಷ್ಯರಿಗೆ ಪಾರ್ಶ್ವವಾಯು ಸಮಸ್ಯೆ ಬಾಧಿಸಲಿದೆ.

ಅಲ್ಲದೆ ಲೆಥೆರಿಸಂ ಖಾಯಿಲೆ (Leatherism disease) ಅಂದ್ರೆ, ಒಬ್ಬ ವ್ಯಕ್ತಿಯ ಎರಡೂ ಕಾಲಿನ ಮಾಂಸ, ಮೂಳೆ ನ್ಯೂನತೆಗೆ ಒಳಗಾಗುವ ಸಾಧ್ಯತೆಯಿದೆ.ಕಡಿಮೆ ಬೆಲೆಗೆ ಸಿಗುವ ಕೇಸರಿ ಬೇಳೆ ತಂದು ತೊಗರಿ ಬೇಳೆಯಲ್ಲಿ ಅಥವಾ ಕೇಸರಿ ಬೇಳೆಯನ್ನೇ ತೊಗರಿ ಬೇಳೆ ಅಥವಾ ಮಸೂರ್ ಬೇಳೆ (Lentils) ಎಂದು ಮಾರಾಟ ಮಾಡುವ ದಂಧೆ ಚಾಲ್ತಿಯಲ್ಲಿದೆ.
ಕೇಸರಿ ಬೇಳೆ ಬಣ್ಣ ಹಾಗೂ ಆಕಾರದಲ್ಲಿ ತೊಗರಿ ಬೇಳೆಯನ್ನೇ ಹೋಲುತ್ತದೆ. ಆದರೆ ಅದು ವಿಷಕಾರಿ ಅಂಶಗಳಿಂದ ಕೂಡಿರುತ್ತದೆ. ಇದು ಒಂದು ಕಳೆ ಬೆಳೆಯಾಗಿದ್ದು, ಕಾಡಿನಲ್ಲಿ ಬೆಳೆಯುತ್ತದೆ. ಕೇಸರಿ ಬೇಳೆಯನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಲ್ಯಾಥರಿಸಂ ಕಾಯಿಲೆಗೆ ತುತ್ತಾಗಬಹುದು.
ಇದನ್ನೂ ಓದಿ: ಮೆಹಂದಿಯಿಂದ ಚರ್ಮ ರೋಗ, ಕ್ಯಾನ್ಸರ್ : ಟ್ಯಾಟೂ, ಲಿಪ್ ಸ್ಟಿಕ್ ನಂತರದಲ್ಲಿ ಮದರಂಗಿಗೂ ಕಂಟಕ!
ಎರಡೂ ಕಾಲುಗಳ ನರ ಹಾಗೂ ಮಾಂಸಖಂಡಗಳ ಮೇಲೆ ಸರಿಪಡಿಸಲಾಗದ ನ್ಯೂನತೆ ಉಂಟಾಗುತ್ತದೆ.(Carcinogenic dye found in lentil) ಇದು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಲಬೆರಕೆ ಗುರುತಿಸುವ ಬಗೆ ಹೇಗೆ?
ಒಂದು ಗಾಜಿನ ಲೋಟದಲ್ಲಿ ನೀರು ತೆಗೆದುಕೊಂಡು ಅದಕ್ಕೆ ತೊಗರಿ ಬೇಳೆ ಹಾಕಿ. ಒಂದು ವೇಳೆ ಅದು ನಕಲಿ ಆಗಿದ್ದರೆ ಟಾರ್ಟ್ರಾಜೈನ್ ಬಣ್ಣ (Tartrazine dye) ಬಿಡುಗಡೆ ಆಗಲಿದೆ. ವರ್ಜಿನಲ್ (Virginal) ಆಗಿದ್ದರೆ ಬಣ್ಣ ಬಿಡುವುದಿಲ್ಲ. ಬೇಳೆಯನ್ನ ಪುಡಿ ಮಾಡಿ 5 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ. ಆಗ ಕೃತಕ ಬಣ್ಣ (Artificial color) ಬಿಟ್ಟರೆ ಅದು ನಕಲಿ ಎಂದರ್ಥ.