Mumbai : ಸೆಲೆಬ್ರಿಟಿಗಳು (Celebrity) ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಸಣ್ಣ ವಿಚಾರಗಳು ಕೂಡ ದೊಡ್ಡ ಸದ್ದು ಮಾಡುತ್ತವೆ. ಅವರು ವಾಹನವನ್ನು ಬಿಟ್ಟು ಸೈಕಲ್ನಲ್ಲಿ ಹೋದರೆ ಅಥವಾ ನಡೆದುಕೊಂಡು ಹೋದರು ಕೂಡ ಸಾಕಷ್ಟು ಚರ್ಚೆಯಾಗುತ್ತದೆ.

ಈಗ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅಂತಹದೇ ಒಂದು ಸುದ್ದಿಯಲ್ಲಿದ್ದಾರೆ. ಅವರು ಅಪರಿಚಿತರ ಒಬ್ಬರ ಬೈಕ್ ನಲ್ಲಿ (Bike) ಹೋಗಿರುವುದು ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದಕ್ಕೆ ಅಮಿತಾಬ್ ಬಚ್ಚನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕು.
ಅಮಿತಾಬ್ ಬಚ್ಚನ್ (Amitabh Bachchan) ಉತ್ತಮ ಶಿಸ್ತಿನ ವ್ಯಕ್ತಿ. ಅವರು ಎಲ್ಲೆಡೆ ಶಿಸ್ತನ್ನು ಕಾಪಾಡುತ್ತಾರೆ. ಯಾವುದೇ ತರಹದ ವಿವಾದಗಳಿಂದ ದೂರ ಉಳಿಯಲು ಬಯಸುತ್ತಾರೆ. ಆದಾಗ್ಯೂ, ಕೆಲವೊಮ್ಮೆ ತನಗೇ ಅರಿಯದೆ ಮಾಡಿದ ತಪ್ಪುಗಳಿಗೆ ನೀವು ಅನುಭವಿಸಬೇಕಾಗುತ್ತದೆ.
ಇತ್ತೀಚೆಗಷ್ಟೇ ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಈ ಫೋಟೋದಲ್ಲಿ, ಅವರು ಬೈಕ್ ನ ಹಿಂಭಾಗದಲ್ಲಿ ಕುಳಿತಿದ್ದಾರೆ. ಬೈಕ್ ಸವಾರರೂ ಹೆಲ್ಮೆಟ್ (Helmet) ಧರಿಸಿರಲಿಲ್ಲ. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬಂದಿದ್ದು, ಮುಂಬೈ ಪೊಲೀಸರು (Police) ಪ್ರಕರಣ ದಾಖಲಿಸಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಅಪರಿಚಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ, “ಧನ್ಯವಾದಗಳು ಸ್ನೇಹಿತ. ನೀವು ಯಾರೆಂದು ನನಗೆ ಗೊತ್ತಿಲ್ಲ.ಟ್ರಾಫಿಕ್ ಜಾಮ್ (Traffic Jam) ಕಿರಿಕಿರಿಯಿಂದ ತಪ್ಪಿಸಿ,ಕೆಲಸದ ಸ್ಥಳಕ್ಕೆ ನನ್ನನ್ನು ಸರಿಯಾದ ಸಮಯಕ್ಕೆ ತಲುಪಿಸಿದ್ದೀರಿ ಎಂದು ಬರೆದುಕೊಂಡಿದ್ದಾರೆ.ಅನೇಕ ಅಭಿಮಾನಿಗಳು ಅಮಿತಾಭ್(Amitabh) ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ ಇನ್ನು ಕೆಲವರು ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಇವರಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಿಗ್ ಬಿ ಇದಕ್ಕೆ ಏನು ಪ್ರತಿಕ್ರಿಯಿಸುತ್ತಾರೆ ಎಂಬುದು ನೋಡಬೇಕಾಗಿದೆ.
ಪ್ರಾಜೆಕ್ಟ್ ಕೆ’(Project K) ಸಿನಿಮಾ ಕೆಲಸಗಳಲ್ಲಿ ಅಮಿತಾಭ್ ಬಚ್ಚನ್ ಬ್ಯುಸಿ ಇದ್ದಾರೆ.ಸೆಟ್ನಲ್ಲಿ ಇತ್ತೀಚೆಗೆ ಗಾಯಗೊಂಡ ಹಿನ್ನೆಲೆಯಲ್ಲಿ ಇವರು ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಸದ್ಯ ಅವರು ಚೇತರಿಸಿಕೊಂಡಿದ್ದುಮತ್ತೆ ಶೂಟಿಂಗ್ (Shooting) ಸೆಟ್ ಗೆ ಮರಳಿದ್ದಾರೆ.ಇದೀಗ ನಡೆದ ಘಟನೆಯ ಸಂದರ್ಭದಲ್ಲೂ ಬೈಕ್ ನಲ್ಲಿ ಅವರು ಶೂಟಿಂಗ್ ಸೆಟ್ ಗೆ ತೇರಾಳಿದ್ದಾರೆ. ಯಾವ ಚಿತ್ರೀಕರಣ ಎಂಬುದರ ಬಗ್ಗೆ ಇನ್ನೂ ತಿಳಿದಿಲ್ಲ.
ರಶ್ಮಿತಾ ಅನೀಶ್