Telangana : ಜಗತ್ತಿನಲ್ಲಿ ಕೆಲವು ವಿಚಿತ್ರ ಘಟನೆಗಳು (case filed against the bull) ಸಂಭವಿಸುವುದು ಹಿಂದೆ ಅತೀ ಅಪರೂಪವಾಗಿತ್ತು. ಆದ್ರೆ, ಇಂದು ಅದು ಸರ್ವೆ ಸಮಾನ್ಯವಾಗಿದೆ.
ವಿಚಿತ್ರ ಎಂಬ ಪದಕ್ಕಿಂತ ಆಂಗ್ಲ ಪದದಲ್ಲಿ ಹೇಳುವ ಸಿಲ್ಲಿ ಎಂಬ ಪದವೇ (case filed against the bull) ಇಲ್ಲಿ ಹೆಚ್ಚು ಬಳಕೆಯಾಗುತ್ತದೆ. ಸದ್ಯ ಇಂಥದ್ದೇ ರೀತಿಯಲ್ಲಿ ಇಲ್ಲೊಂದು ಘಟನೆ ಸಂಭವಿಸಿದೆ.

ತೆಲಂಗಾಣದ SCCL ಜನರಲ್ ಮ್ಯಾನೇಜರ್ ಕಚೇರಿ ಎದುರು ಗೂಳಿಯೊಂದು ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಗೂಳಿ ಮಾಲಿಕನಾದ ರೈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತೆಲಂಗಾಣದ (Telangana) ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಯೆಲಾಂಡುವಿನ ಸಿಂಗರೇಣಿ ಕಾಲೀರೀಸ್ ಕಂಪನಿ ( SCCL ) ಜನರಲ್ ಮ್ಯಾನೇಜರ್ ಕಚೇರಿ ಎದುರು ಗೂಳಿಯೊಂದು ಮೂತ್ರ ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ರೈತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಗೂಳಿ ಮಾಲಿಕನಾದ ರೈತ ಸುಂದರ್ ಲಾಲ್ ಲೋಧಾ ಎಂದು ಗುರುತಿಸಲಾಗಿದ್ದು, ಎಸ್‌ಸಿಸಿಎಲ್ ಮಾಡಿದ ಭೂಸ್ವಾಧೀನಕ್ಕೆ ನನಗೆ ಇನ್ನೂ ಪರಿಹಾರ ಘೋಷಿಸಿಲ್ಲ ಎಂದು ರೈತ ಆರೋಪಿಸಿದ್ದಾರೆ. ಎಸ್‌ಸಿಸಿಎಲ್ ಜಿಎಂ ಕಚೇರಿ ಎದುರು ಎತ್ತಿನಗಾಡಿ ಮೇಲೆ ಕುಳಿತು ರೈತ ಪ್ರತಿಭಟನೆ ನಡೆಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ನೋಡಿ : https://fb.watch/hdA8u8i_wW/ ವಿಜಯ ಟೈಮ್ಸ್ ರಿಯಾಲಿಟಿ ಚೆಕ್!!! ಪೊಲೀಸರ ಅಧಿಕಾರ ದುರ್ಬಳಕೆಗೇ ಪಟ್ಟು ಬಿಡದೇ ದಂಡ ಹಾಕಿಸಿದ ವಿಜಯ ಟೈಮ್ಸ್ ತಂಡ.
ಸಿಂಗರೇಣಿ ಆಡಳಿತ ಮಂಡಳಿಯು ಗೂಳಿಯು ಮೂತ್ರ ವಿಸರ್ಜಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸಿ ಪೊಲೀಸರಿಗೆ ದೂರು ನೀಡಿತ್ತು. ಯೆಲ್ಲಾಂಡು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ,
ಭಾರತೀಯ ದಂಡ ಸಂಹಿತೆಯ (Indian Penal Code) ಸೆಕ್ಷನ್ 270 ರ ಅಡಿಯಲ್ಲಿ ರೈತರ ವಿರುದ್ಧ ಉಪದ್ರವವನ್ನು ಉಂಟುಮಾಡಿದ ಪ್ರಕರಣದ ಅಡಿ ದೂರನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/indian-luxury-trains/