ಹೊಸ ತಿರುವು ಪಡೆದುಕೊಂಡ ಮಾಜಿ ಕಾಪೋ೯ರೇಟರ್ ರೇಖಾ ಹತ್ಯೆ ಕೇಸ್‌

ಬೆಂಗಳೂರು,ಜೂ.26: ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಮಾಜಿ ಕಾಪೋ೯ರೇಟರ್ ರೇಖಾ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಂಧಿತ ಆರೋಪಿಗಳು ಬಾಯ್ಬಿಟ್ಟಿರುವ ಮಾಹಿತಿ ಮೇರೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ.

ಮಾಜಿ ಕಾಪೋ೯ರೇಟರ್ ರೇಖಾ ಹತ್ಯೆಗೆ ಕಾರಣವೇನು, ಕೌಟುಂಬಿಕ ಕಲಹ, ಫೈನಾನ್ಸಿಯಲ್ ವ್ಯವಹಾರ ಹೀಗೆ ನಾನಾ ಕಾರಣಗಳು ಇನ್ನೂ ಊಹೆಗಳಾಗಿಯೇ ಉಳಿದಿವೆ. ಆದರೆ ಪ್ರಕರಣದಲ್ಲಿ ಸದ್ಯ ಬಂಧಿತ ಆರೋಪಿಗಳು ಹೇಳಿರುವ ಮಾಹಿತಿ ಹೊಸ ಆಯಾಮವನ್ನೇ ನೀಡ್ತಿದೆ. ಹೌದು ಬಂಧಿತರ ಪೈಕಿ ಕಿಂಗ್ ಪಿನ್ ಎನಿಸಿರೋ ಪೀಟರ್ ಹೇಳಿರುವ ಕಾರಣ ಸದ್ಯ ಬಯಲಾಗಿದೆ.

ಪೀಟರ್‌ಗ ರೇಖಾ ಪತಿ ಕದಿರೇಶ್‌ನ ಜೊತೆಗಿದ್ದ. ಕದಿರೇಶ್‌ಗೆ ಬಲಗೈ ಬಂಟನಂತಿದ್ದ ಪೀಟರ್ ಕದಿರೇಶ್ ಹೇಳಿದನ್ನ ಚಾಚು ತಪ್ಪದೇ ಮಾಡ್ತಿದ್ದ. ಆದ್ರೆ ಕದಿರೇಶ್ ಹತ್ಯೆಗೈದವರನ್ನ ರೇಖಾ ಜಾಮೀನು ನೀಡಿ ಬಿಡಿಸಿದ್ರಂತೆ ಹೀಗಂತ ಪೀಟರ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಕದಿರೇಶ್ ಕೊಲೆ ಬಳಿಕ ಪೀಟರ್ ರೇಖಾ ಜೊತೆಗೂ ಅದೇ ಆತ್ಮೀಯತೆಯಿಂದಿದ್ದ. ಆದರೆ ಪೀಟರ್ ತಲೆ ಕೆಡಿಸಿದ್ದು ಮಾತ್ರ ಮೃತ ಕದಿರೇಶ್ ಸಹೋದರಿ, ಮಾಲಾ, ಹಾಗೂ ಆಕೆಯ ಪುತ್ರ ಅರುಣ್.

ಸಹೋದರನ ಸಾವಿನ ನಂತರ ರೇಖಾ ತಮ್ಮನ್ನ ಕಡೆಗಣಿಸುತ್ತಿದ್ದಾಳೆ, ಕೇಳಿದಾಗ ಹಣ ಕೊಡಲು ನಿರಾಕರಿಸುತ್ತಿದ್ದಾಳೆ ಎಂದು ಪೀಟರ್ ಗೆ ಹೇಳಿದ್ರು. ಟೆಂಡರ್ ವಿಚಾರದಲ್ಲೂ ಇಬ್ಬರ ನಡುವೆ ಮನಸ್ತಾಪ ಇತ್ತು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಮಾಲಾ ಮತ್ತು ಅರುಣ್ ಪೀಟರ್ ಮುಂದೆ ಬಿಟ್ಟು ರೇಖಾ ಮುಗಿಸೊ ಸ್ಕೆಚ್ ರೆಡಿ ಮಾಡಿಕೊಂಡಿದ್ರು. ಕದಿರೇಶ್ ಹತ್ಯೆ ಮಾಡಿಸಿದ್ದು ರೇಖಾಳೆ ಎಂದು ನಂಬಿಸಿಬಿಟ್ಟಿದ್ರು. ಅಂದುಕೊಂಡಂತೆ ತಂತ್ರಗಾರಿಕೆ ಮಾಡಿ ರೇಖಾ ಕಥೆಯನ್ನು ಮುಗಿಸಿದ್ರು.

ಒಟ್ನಲ್ಲಿ‌ ಇಡೀ ಹತ್ಯೆ ರಾಜಕೀಯ, ಹಣ, ಮತ್ತು ಕೌಟುಂಬಿಕ ಕಲಹವನ್ನ ಒಳಗೊಂಡಿದ್ದು ಇಬ್ಬರು ಮಕ್ಕಳನ್ನೂ ಲೆಕ್ಕಿಸದೇ ರೇಖಾರನ್ನ ಕೊಂದು ಮುಗಿಸಿದ್ದು ದ್ವೇಷದ ಪಾಪಿಗಳು.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.