Mysuru : ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (Case on Shivarathri Muruga sharana) ಎಸಗಿದ್ದಾರೆ ಎಂಬ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ದ ಫೋಕ್ಸೋ ಕಾಯ್ದೆ (Pocso Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿತ್ರದುರ್ಗದ ಮುರುಘಾ ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳನ್ನು ಡಾ. ಶಿವರಾತ್ರಿ ಮುರುಘಾ ಶರಣರು (Case on Shivarathri Muruga sharana) ಲೈಂಗಿಕವಾಗಿ ಬಳಸಿಕೊಂಡಿದ್ದಾರೆ,
ಎಂದು ಆರೋಪಿಸಿರುವ ಕೆಲ ವಿದ್ಯಾರ್ಥಿನಿಯರು ಮೈಸೂರಿನ (Mysuru) ಒಡನಾಡಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಒಡನಾಡಿ ಸಂಸ್ಥೆ ಈ ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ,
https://vijayatimes.com/nithish-kumar-jdu-gets-shock/
ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿ(Child Welfare Committee), ವಿದ್ಯಾರ್ಥಿನಿಯರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹೀಗಾಗಿ ಮುರುಘಾ ಶ್ರೀಗಳ ವಿರುದ್ದ ಪೋಕ್ಸೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸುವಂತೆ ಸಮಿತಿ ಆದೇಶ ಹೊರಡಿಸಿದೆ.
ಸಮಿತಿ ನೀಡಿರುವ ಆದೇಶದನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (District Child Protection Officer) ಅರುಂಧತಿ ಅವರು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ನಜರಾಬಾದ್ ಠಾಣೆಯ ಪೊಲೀಸರು ಇಡೀ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿರುವುದರಿಂದ ಇದನ್ನು ಚಿತ್ರದುರ್ಗಕ್ಕೆ ವರ್ಗಾಹಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ದೂರಿನಲ್ಲೇನಿದೆ..? :
ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿರುವ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿನಿಯರು ಶ್ರೀಗಳು ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.
https://vijayatimes.com/ayodhya-ram-mandir-construction-budget-revealed/
ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ನಮ್ಮನ್ನು ಸ್ವಾಮೀಜಿ ಅವರು ಇರುವ ಜಾಗಕ್ಕೆ ಕಳುಹಿಸುತ್ತಿದ್ದರು.

ಆಗ ಮತ್ತು ಬರುವ ಔಷಧಿ ನೀಡಿ, ನಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈ ಅನುಭವ ಅನೇಕ ವಿದ್ಯಾರ್ಥಿನಿಯರಿಗಾಗಿದೆ.