Let the Much Discussed Caste Census not be used for Political Gain
Kerala: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಜಾತಿಗಣತಿ (Caste Census) ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ತನ್ನ ನಿಲುವು ಸ್ಪಷ್ಟಪಡಿಸಿದ್ದು ಇದು ಪ್ರತಿಪಕ್ಷಗಳಿಗೂ ಪ್ರಹಾರ ನಡೆಸಿದಂತಿದೆ.
ಬಿಹಾರದಿಂದ (Bihar) ಆರಂಭವಾದ ಜಾತಿ ಗಣತಿ ಸಂಸತ್ ಚುನಾವಣೆಯಲ್ಲೂ ಸದ್ದು ಮಾಡಿತ್ರು, ಈಗಲೂ ಪ್ರತಿಧ್ವನಿಸುತ್ತಿದೆ. ಈ ಚರ್ಚೆಯ ನಡುವೆ ಆರ್ ಎಸ್ ಎಸ್ (RSS) ಸಭೆಯ ಪ್ರಕಟಣೆ ಜಾತಿಗಣತಿಗೆ ಸಮ್ಮತಿ ಸೂಚಿಸುವ ಸುಳಿವು ನೀಡಿದೆ.
ಕೇರಳದ ಪಾಲಕ್ಕಾಡ್ನಲ್ಲಿ ನಡೆದ ಸಂಘದ ಉನ್ನತ ಸಭೆಯಲ್ಲಿ ಬಿಜೆಪಿ (BJP)ಯ ಸೈದ್ಧಾಂತಿಕ ಸಂಸ್ಥೆ ಜಾತಿ ಗಣತಿ ಸಂಬಂಧ ಚರ್ಚೆ ನಡೆಸಿದ್ದು, ಮತ್ತೆ ಮುನ್ನೆಲೆಗೆ ಬಂದಿದೆ. ಬಹುಚರ್ಚಿತ ಜಾತಿ ಗಣತಿಯ ಅಂಕಿ ಸಂಖ್ಯೆಗಳನ್ನು ರಾಜಕೀಯ ಅಥವಾ ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎನ್ನುವ ಮೂಲಕ ಜಾತಿಗಣತಿ ಉದ್ದೇಶಗಳ ಮೇಲೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪಕ್ಷರಾಜಕಾರಣದ ಪ್ರಮುಖ ಅಜೆಂಡಾ ಆಗಿರುವ ಜಾತಿ ಗಣತಿ ಬಗೆಗೆ ಸಂಘದ ನಿಲುವು ಪರೋಕ್ಷವಾಗಿ ಜಾತಿ ಗಣತಿಗೆ ಸಮ್ಮತಿ ಇದೆ ಎಂದು ತಿಳಿಸಿದೆ.
ಮೀಸಲಾತಿ ವಿಚಾರದಲ್ಲಿ ಆರ್ ಎಸ್ ಎಸ್ ((RSS) ದಲಿತ, ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದೆ ಎಂಬ ವಾದದ ನಡುವೆ, ಸಂಘದ ಮೂರುದಿನಗಳ ಸಮನ್ವಯ ಸಭೆಯಲ್ಲಿ ನಡೆದ ಚರ್ಚೆಗಳು ಜಾತಿಗಣತಿ ಕುರಿತು ಸಾಕಷ್ಟು ಒಳಹುಗಳನ್ನು ಬಿಚ್ಚಿಟ್ಟಿದೆ. ಸರ್ಕಾರಕ್ಕೆ ಸಂಖ್ಯೆಗಳೇ ಮುಖ್ಯ ಎನ್ನುವುದಾದರೇ ಹಿಂದಿನ ವ್ಯವಸ್ಥೆಗಳ ಮೂಲಕ ಸಂಖ್ಯೆಗಳ ಕ್ರೂಡೀಕರಣಕ್ಕೆ ಮುಂದಾಗಬಹುದು. ಜಾತಿ ಗಣತಿ ಸೂಕ್ಷ್ಮ ವಿಚಾರ ಮತ್ತು ರಾಜಕೀಯ ಕಾರಣಗಳಿಗೆ ಬಳಕೆಯಾಗುವ ಬಗ್ಗೆ ಎಚ್ಚರಿಕೆಯ ಗಂಟರ ಬಾರಿಸಿದೆ.
ಜಾತಿ ಗಣತಿ ವಿಚಾರದಲ್ಲಿ ಬಿಜೆಪಿಗೆ ತನ್ನದೇ ಮಿತ್ರಪಕ್ಷಗಳಿಂದ ಎದುರಾಗಿರುವ ಸಂದಿಗ್ಧತೆಯನ್ನು ಸಂಘ ಸೂಚ್ಯವಾಗಿ ಮುಂದುವರೆಯಲು ಬಿಜೆಪಿಗೂ ಉತ್ತೇಜಿಸಿದೆ. ಇನ್ನು ದೇಶ ವಿದೇಶದ ಕೆಲ ಪ್ರಮುಖ ಘಟನಾವಳಿಗೂ ಆರ್ ಎಸ್ ಎಸ್ ಪ್ರತಿಕ್ರಿಯಿಸಿದ್ದು, ಪಶ್ಚಿಮ ಬಂಗಾಳದ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ (West Bengal Doctor Rape and Murder Case) ಖಂಡನೆ ವ್ಯಕ್ತಪಡಿಸಿ, ಕಾನೂನು ಹಾಗೂ ಶಿಕ್ಷೆಯ ಬದಲಾವಣೆಗೆ ಪ್ರಸ್ತಾಪಿಸಿದೆ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯದ ಬಗೆಗೆ ಕಳವಳ ವ್ಯಕ್ತಪಡಿಸಿದೆ.
Kerala: The Rashtriya Swayamsevak Sangh (RSS) has clarified its stand on the issue of Caste Census, which is causing debate across the country, which seems to have struck a blow to the opposition too.
The caste census that started from Bihar made a noise in the parliamentary elections and is still reverberating. In the midst of this debate, the announcement of the RSS meeting hinted at consent to caste census.
In the high-level meeting of the Sangh held in Palakkad, Kerala, the ideological organization of the BJP (BJP) discussed the issue of caste census and came to the fore again. The much-discussed caste census numbers should not be used for political or electoral purposes, giving way to a debate on the purposes of the caste census. The Sangh's stance on caste census, which is the main agenda of party politics, has indirectly indicated that there is consent for caste census.
Amidst the argument that the RSS (RSS) has neglected Dalit and backward communities on the reservation issue, the discussions at the Sangh's three-day coordination meeting on caste census revealed a lot of innuendos. The fact that numbers are important to the government can lead to crudeization of numbers through previous systems. About caste census being used for sensitive and political reasons Alarm bells rang.
The Sangh has implicitly encouraged the BJP to proceed with the dilemma faced by its own allies on the issue of caste census. Also, RSS has responded to some important incidents in the country and abroad and has condemned the West Bengal Doctor Rape and Murder Case and proposed to change the law and punishment. Expressed concern over atrocities on minority Hindus in Bangladesh.