Bengaluru: ರಾಜ್ಯದಲ್ಲಿ ಮಂಡನೆಯಾಗಲು ಸಿದ್ದವಾಗಿರುವ ಜಾತಿ ಗಣತಿ (Caste Census) ವರದಿಯನ್ನು (Caste Census – Kar Govt) ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಒಪ್ಪಬಾರದು
ಎಂದು ಒಕ್ಕಲಿಗರ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಜಾತಿ ಗಣತಿ ಮಂಡನೆಗೆ ರಾಜ್ಯದ ಪ್ರಬಲ ಸಮುದಾಯಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ರಾಜ್ಯ
ಸರ್ಕಾರವನ್ನು ತೀವ್ರ (Caste Census – Kar Govt) ಸಂಕಷ್ಟಕ್ಕೆ ಸಿಲುಕಿಸಿದೆ.

ಬೆಂಗಳೂರಿನಲ್ಲಿ (Bengaluru) ಆದಿಚುಂಚಿನಗಿರಿ ಮಠದ ನಿರ್ಮಲಾನಂದನಾಥ ಶ್ರೀ (Nirmalanandanatha Shree), ನಂಜಾವದೂತ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಒಕ್ಕಲಿಗ
ಸಮುದಾಯದ ನಾಯಕರ ಸಭೆ ನಡೆದಿದೆ. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ (D K Shivakumar), ಕೃಷಿ ಸಚಿವ ಚಲುವರಾಯಸ್ವಾಮಿ, ಮಾಜಿ ಉಪಮುಖ್ಯಮಂತ್ರಿ
ಅಶ್ವತ್ಥನಾರಾಯಣ್, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Gyanendra) ಸೇರಿದಂತೆ ರಾಜ್ಯದ ಪ್ರಮುಖ ಒಕ್ಕಲಿಗ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಭೆಯ ಕುರಿತು ಮಾತನಾಡಿರುವ ನಿರ್ಮಲಾನಂದ ಶ್ರೀ ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ಈಗ ಬಿಡುಗಡೆಗೆ ಸಿದ್ದವಾಗಿರುವ ಜಾತಿ ಗಣತಿಯ ವರದಿಯಲ್ಲಿ ಸಾಕಷ್ಟು ದೋಷಗಳಿದ್ದು,
ಅದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಈ ಕುರಿತು ಪ್ರತಿಕ್ರಿಯಿಸಲು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ
ಚೆಲುವರಾಯಸ್ವಾಮಿ (Cheluvarayaswamy) ಮಾತನಾಡಲು ನಿರಾಕರಿಸಿ ಸ್ವಾಮೀಜಿಗಳು ಮಾತನಾಡುತ್ತಾರೆ ಎಂದು ಹೇಳಿ ಹೊರಟರು.

ಒಕ್ಕಲಿಗರ ಸಂಘದ ಸಭೆಯ ನಿರ್ಣಯಗಳು :
ರಾಜ್ಯ ಸರ್ಕಾರ ಕಾಂತರಾಜು (Kantharaju) ಸಮಿತಿಯ ವರದಿಯನ್ನು ಒಪ್ಪಬಾರದು.
ಜಾತಿ ಜನಗಣತಿ ಮಾಡುವುದಾದರೆ ಹೊಸದಾಗಿ ಜಾತಿ ಗಣತಿ ನಡೆಸಬೇಕು.
ಕಾಂತರಾಜು ವರದಿಯನ್ನು ಶೈಕ್ಷಣಿಕ, ಸಾಮಾಜಿಕ ಗಣತಿ ಎಂದು ಮಾತ್ರ ಒಪ್ಪಬಹುದು.
ಒಕ್ಕಲಿಗ ಸಮುದಾಯದ ನಾಯಕರು ಸರ್ಕಾರದ ಮಟ್ಟದಲ್ಲಿ ವಿರೋಧಿಸಬೇಕು.
ಈ ವಿಷಯದಲ್ಲಿ ಯಾವುದೇ ಪಕ್ಷ ಇರಲಿ ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕರು, ಸಂಸದರು ಒಂದಾಗಬೇಕು.
ಹೋರಾಟ ಅನಿವಾರ್ಯವಾದರೆ ಪಕ್ಷಾತೀತವಾಗಿ ಎಲ್ಲಾ ನಾಯಕರು ಸಮುದಾಯದ ಪರವಾಗಿ ನಿಲ್ಲಬೇಕು.
ರಾಜ್ಯ ಸರ್ಕಾರ ವರದಿ ಜಾರಿಗೆ ಮುಂದಾದರೆ ಹೋರಾಟ ಮಾಡಲು ಸಿದ್ದವಾಗಿರಬೇಕು.
ಇದನ್ನು ಓದಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ