English English Kannada Kannada

ಕ್ರೀಡೆ

Waqar Younis

ವಾಖರ್ ಯೂನಿಸ್‌ ಹೇಳಿಕೆಗೆ ಕ್ರಿಕೆಟ್‌ ದಿಗ್ಗಜರಿಂದ ತೀವ್ರ ಆಕ್ರೋಶ

ಈತನ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಟ್ವೀಟ್ ಮಾಡಿ, ಇದು ಜಿಹಾದಿ ಮನಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಅವರು, ವಾಖರ್ ಯೂನಿಸ್ ಅವರ ಹೇಳಿಕೆ ಬೇಸರ ತರಿಸಿದೆ ಎಂದಿದ್ದಾರೆ.

ಪಾಕ್‌ ವಿರುದ್ದ ಭಾರತದ ಸೋಲಿಗೆ ಪ್ರಮುಖ 5 ಕಾರಣಗಳು

ಹಾರ್ದಿಕ್ ಪಾಂಡ್ಯ ಮೇಲೆ ಟೀಮ್ ಮ್ಯಾನೇಜ್ ಮೆಂಟ್‌ಗೆ ಯಾಕೆ ಅಷ್ಟೊಂದು ಒಲವು ಅಂತ ಗೊತ್ತಿಲ್ಲ. ಪಾಂಡ್ಯ ಬೌಲಿಂಗ್ ಮಾಡೋದಿಲ್ಲ. ಅವರು ಅನ್‌ಫಿಟ್ ಅಂತ ಗೊತ್ತಿದ್ರೂ, ಮ್ಯಾನೇಜ್‌ಮೆಂಟ್ ಇವರನ್ನ ಆಯ್ಕೆ ಮಾಡ್ತು. ಜೊತೆಗೆ ಬ್ಯಾಟಿಂಗ್‌ನಲ್ಲಿ ಫಾರ್ಮ್‌ನಲ್ಲಿ ಇಲ್ಲದೆ ಪಾಂಡ್ಯಗೆ, ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಿದ್ದು.

kohli

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್‌ ಶರ್ಮಾ ಅವರನ್ನು ಕೈ ಬಿಡಬೇಕಾ?

 ನಿಮ್ಮ ಪ್ರಕಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ರೋಹಿತ್‌ ಶರ್ಮಾ ಅವರನ್ನು ಕೈ ಬಿಡಬೇಕಾ? ನೀವು ರೋಹಿತ್‌ ಶರ್ಮಾರನ್ನು ಬಿಡುತ್ತೀರಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ? ನಿಮಗೆ ವಿವಾದ ಬೇಕೆಂದರೆ, ಮೊದಲೇ ಹೇಳಿ, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ,” ಎಂದು ಹೇಳಿದರು.

ಐಪಿಲ್‌ಗೆ 2 ಹೊಸ ತಂಡಗಳ ಸೇರ್ಪಡೆ

ಸಂಜೀವ್ ಗೊಯೆಂಕಾ ಒಡೆತನದ ಆರ್‌ಪಿಎಸ್‌ಜಿ ಗ್ರೂಪ್ ಲಕ್ನೋವನ್ನು 7090 ಕೋಟಿ ರೂ.ರೂಪಾಯಿಗಳ ಬಿಡ್‌ನೊಂದಿಗೆ ಆಯ್ಕೆ ಮಾಡಿಕೊಂಡಿದ್ದರೆ,ಸಿಪಿಸಿ ಕ್ಯಾಪಿಟಲ್ 5625 ಕೋಟಿಗಳ ರೂ.ಗಳ ಬಿಡ್‌ನೊಂದಿಗೆ ಅಹಮದಾಬಾದ್ ಅನ್ನು ಆಯ್ಕೆ ಮಾಡಿದೆ.

ಭಾರತ ತಂಡ ಸೋಲಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದವರ ವಿರುದ್ದ ಸೆಹ್ವಾಗ್ ಆಕ್ರೋಶ

ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸೆಹ್ವಾಗ್‌ ಹಬ್ಬ ಹರಿದಿನಗಳಲ್ಲಿ ಭಾರತದಲ್ಲಿ ಪಟಾಕಿ ನಿಷೇಧ ನಿಯಮವನ್ನು ಉಲ್ಲಂಘಿಸುವ ಕ್ರಿಕೆಟ್ ಅಭಿಮಾನಿಗಳ ಬೂಟಾಟಿಕೆಯ ವಿರುದ್ಧ ವಾಗ್ದಾಳಿ ನಡೆಸಿದರು. ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ನಿಷೇಧಿಸಲಾಗಿದೆ ಆದರೆ ನಿನ್ನೆ ಭಾರತದ ಕೆಲವು ಭಾಗಗಳಲ್ಲಿ ಪಾಕಿಸ್ತಾನದ ವಿಜಯವನ್ನು ಆಚರಿಸಲು ಪಟಾಕಿಗಳನ್ನು ಸಿಡಿಸಲಾಯಿತು.

ಆರಂಭಿಕ ಆಘಾತವೇ ಪಂದ್ಯ ಸೋಲಿಗೆ ಕಾರಣ – ವಿರಾಟ್‌ ಕೊಹ್ಲಿ

10 ಓವರ್ ನಂತರ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ನಮಗೆ ಬೇಕಾಗಿದ್ದ 15ರಿಂದ 20 ಅಧಿಕ ರನ್ ಪಡೆದುಕೊಳ್ಳಲಾಗಲಿಲ್ಲ. ಇನ್ನು ಪಾಕ್ ಬ್ಯಾಟಿಂಗ್ ವೇಳೆ ಅವರ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಪಡೆಯಬೇಕಾಗಿದ್ದ ಅನಿವಾರ್ಯತೆ ಇತ್ತು. ಆದರೆ ಆ ಅವಕಾಶವನ್ನು ಎದುರಾಳಿ ತಂಡ ನಮಗೆ ನೀಡಲೇ ಇಲ್ಲ, ಅವರು ಉತ್ತಮ ಕ್ರಿಕೆಟ್ ಆಡಿದರು ಎಂದು ನಾಯಕ ಕೊಹ್ಲಿ ತಿಳಿಸಿದರು

azam siddique

ಪಾಕ್‌ ಗೆಲುವು ದಾಖಲಿಸಿದ್ದಕ್ಕೆ ಗಳಗಳನೆ ಅತ್ತ ಅಜಂ ಸಿದ್ದಿಕ್ಕಿ. ಯಾರು ಈ ಅಜಂ ?

ಭಾರತದ ವಿರುದ್ಧ ವಿಶ್ವಕಪ್ ನಲ್ಲಿ ಪದೇ ಪದೇ ಸೋಲು ಕಾಣುತ್ತಿದ್ದ ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಂ ನಾಯಕತ್ವದಲ್ಲಿ ಐತಿಹಾಸಿಕ ಗೆಲುವು ದಕ್ಕಿದೆ. ಇದೇ ಖುಷಿಯಲ್ಲಿ ಬಾಬರ್ ಅಜಂ ತಂದೆ ಅಜಂ ಸಿದ್ದಕಿ ಕ್ರೀಡಾಂಗಣದಲ್ಲಿಯೇ ಆನಂದಭಾಷ್ಪ ಹರಿಸಿದ್ದಾರೆ.

ಟಿ20 ವಿಶ್ವಕಪ್ : ಪಾಕಿಸ್ತಾನಕ್ಕೆ ಐತಿಹಾಸಿಕ ಗೆಲವು

ಮೊದಲ ಓವರ್‌ನಲ್ಲೇ ಅನುಭವಿ ಓಪನರ್‌ ರೋಹಿತ್‌ ಶರ್ಮಾ ಇನ್‌ಸ್ವಿಂಗ್‌ ಎಸೆತವನ್ನು ಅರಿಯಲು ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಬಳಿಕ 3ನೇ ಓವರ್‌ನ ಮೊದಲ ಎಸೆತದಲ್ಲಿ ಕೆಎಲ್‌ ರಾಹುಲ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಆದರೆ, ಈ ಎಸೆತ ನೋ ಬಾಲ್‌ ಆಗಿತ್ತು ಎಂಬುದು ಈಗ ಭಾರಿ ವಿವಾದ ಸೃಷ್ಟಿಸಿದೆ. ರಾಹುಲ್‌ ಔಟ್‌ ಆದ ಎಸೆತದಲ್ಲಿ ಬೌಲರ್‌ ಅಫ್ರಿದಿ ಗೆರೆ ದಾಟಿ ಚೆಂಡನ್ನು ಎಸೆದಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಭಾರತ ವಿರುದ್ದ ಪಂದ್ಯಕ್ಕೆ ಪಾಕ್ ತಂಡ ಪ್ರಕಟ

ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ

ಭಾರತ ಮತ್ತು ಇಂಗ್ಲೆಂಡ್ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ – ಶೇನ್ ವಾರ್ನ್

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಯುಎಇ ಮತ್ತು ಒಮಾನ್‌ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ 2021ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಅನ್ನು ಪ್ರಶಸ್ತಿಯ ನೆಚ್ಚಿನ ತಂಡವೆಂದು ಪರಿಗಣಿಸಿದ್ದೇನೆ ಎಂದು ಹೇಳಿದರು.

Submit Your Article