English English Kannada Kannada

ಪ್ರಮುಖ ಸುದ್ದಿ

150 ಅಪಾಯಕಾರಿ ಅಪ್ಲಿಕೇಶನ್‌ಗಳು ಬ್ಯಾನ್

UltimaSMS ಹಗರಣದ ಅಭಿಯಾನದ ಬಗ್ಗೆ ಆತಂಕಕಾರಿ ವಿಷಯವೆಂದರೆ ಅದು ಯಾವುದೇ ದೇಶ ಅಥವಾ ಸ್ಥಳಾಕೃತಿಗೆ ಸೀಮಿತವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈಜಿಪ್ಟ್, ಸೌದಿ ಅರೇಬಿಯಾ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ, ಓಮನ್, ಕತಾರ್, ಕುವೈತ್, ಯುಎಸ್ಎ ಮತ್ತು ಪೋಲೆಂಡ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರೊಂದಿಗೆ ವಿಶ್ವದಾದ್ಯಂತ ಹೆಚ್ಚು ಪೀಡಿತ ದೇಶಗಳಲ್ಲಿ ಇದು ಹರಡಿದೆ.

ದಿಶಾ ರವಿ ಕೇಸ್‌ ವಜಾ ಆಗುವ ಸಾಧ್ಯತೆ.

ಇದೇ ಕಾರಣದಿಂದ ದೇಶದ್ರೋಹ, ಕ್ರಿಮಿನಲ್ ಸಂಚು ಆರೋಪದಡಿ ಐಪಿಸಿ ಅನ್ವಯ ಪ್ರಕರಣ ಎದುರಿಸುತ್ತಿರುವ ದಿಶಾ ಅವರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸದೇ ಇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚುವ ವರದಿಯನ್ನೂ ಪೊಲೀಸರು ಸಲ್ಲಿಸಬಹುದು. ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ AY 4.2 ಬಗ್ಗೆ ಆತಂಕ ಬೇಡ ತಜ್ಞರ ವರದಿ

ಕೋವಿಡ್ ವೈರಾಣುವಿನ ಎ.ವೈ. 4.2 ರೂಪಾಂತರಿ ರಾಜ್ಯಕ್ಕೆ ಕಾಲಿರಿಸಿ ಮೂರು ತಿಂಗಳುಗಳ ಮೇಲಾಗಿದೆ. ಆದರೆ ಸೋಂಕು ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಆತಂಕ ಅನಗತ್ಯ ಎಂದು ರಾಜ್ಯ ಆರೋಗ್ಯ ತಜ್ಞರು ಅಭಯ ನೀಡಿದ್ದಾರೆ.

50ರೂ ಗಿಂತ ಹೆಚ್ಚಿನ ರೀಚಾರ್ಜ್‌ ಮೇಲೆ ಪ್ರೊಸೆಸಿಂಗ್ ಶುಲ್ಕ ವಿಧಿಸಲಿರುವ ಫೋನ್ ಪೇ

ಫೋನ್ ಪೇ ಮೂಲಕ ರೀಚಾರ್ಜ್ ಮಾಡುವವರಿಗೆ ಶುಲ್ಕ ವಿಧಿಸುವ ಸಣ್ಣ ಪ್ರಮಾಣದ ಪ್ರಯೋಗ ಇದಾಗಿದ್ದು, ಇದರಲ್ಲಿ ಕೆಲವು ಬಳಕೆದಾರರು ಮೊಬೈಲ್ ರೀಚಾರ್ಜ್ ಗಳಿಗೆ ಚಾರ್ಜಿಂಗ್ ಶುಲ್ಕ ಪಾವತಿಸಬೇಕಿದೆ ಎಂದು ಫೋನ್ ಪೇ ಹೇಳಿಕೊಂಡಿದೆ. ಅಂದರೆ, ಅದು ನಿಮ್ಮ ಖಾತೆಯು ಪ್ರಾಯೋಗಿಕ ಗುಂಪಿನ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಶೀಘ್ರದಲ್ಲೇ ಫೋನ್ ಪೇ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಫೋನ್ ಪೇ ಎಲ್ಲಾ ಪಾವತಿ ಸೇವೆಗಳ ಮಾದರಿಯಲ್ಲಿಯೇ ಕ್ರೆಡಿಟ್ ಕಾರ್ಡ್ ಗಳ ಮೂಲಕ ಮಾಡಿದನು ಎಲ್ಲಾ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಇತರೆ ಪಾವತಿ ಸೇವೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಫೋನ್ ಪೇ ಹೇಳಿದೆ.

ಆರ್ಯನ್‌ ಖಾನ್ ಡ್ರಗ್ಸ್‌ ಕಳ್ಳಸಾಗಣಿಕೆಯಲ್ಲೂ ತೊಡಗಿಸಿಕೊಂಡಿದ್ದ – ಎನ್‌ಸಿಬಿ

 ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಬಂಧಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಎನ್ ಸಿಬಿ, ಆರ್ಯನ್ ಖಾನ್ ಕೇವಲ ಡ್ರಗ್ಸ್ ಸೇವಿಸುವುದಿಲ್ಲ. ಅವರು ಡ್ರಗ್ಸ್ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.

ಖರ್ಗೆ ಮೊಮ್ಮಗಳನ್ನು ವರಿಸಿದ ಬ್ರಾಹ್ಮಣ : ದಲಿತ – ಬ್ರಾಹ್ಮಣ ವಿವಾಹಕ್ಕೆ ಸಾಕ್ಷಿಯಾದ ರಾಜಕಾರಣಿಗಳು

ಪಾಣಿನಿ ಭಟ್ ಮತ್ತು ಪ್ರಾರ್ಥನಾ ಒಂದೇ ಕಂಪನಿಯಲ್ಲಿ ಕೆಲಸಕ್ಕಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಮದುವೆಗೆ ಒಪ್ಪಿಸಿದ್ದಾರೆ. ದಲಿತ ವರ್ಗದ ಹುಡುಗಿಯನ್ನು  ಹವ್ಯಕ ಬ್ರಾಹ್ಮಣ ಕುಟುಂಬದ ಸೊಸೆಯಾಗಿ ಸ್ವೀಕರಿಸಿದ್ದು ಎರಡೂ ಕುಟುಂಬಗಳ ಸಮ್ಮತಿಯಿಂದ ಅದ್ದೂರಿಯಿಂದ ಮದುವೆ ಕಾರ್ಯ ಜರುಗಿದೆ.

ಪೆಟ್ರೋಲ್ ಡೀಸೆಲ್ ದರ ಕಡಿತಕ್ಕೆ ಆಗ್ರಹಿಸಿ ನವೆಂಬರ್‌ 15ರಿಂದ ಲಾರಿ ಮುಷ್ಕರ

ತೈಲ ಬೆಲೆ ಏರಿಕೆಯಿಂದ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ದೊಡ್ಡ ನಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ತೈಲ ಬೆಲೆಯನ್ನು ಕಡಿಮೆ ಮಾಡಲು ಒತ್ತಾಯಿಸಬೇಕೆಂದು ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದ್ದು, ತೈಲ ಬೆಲೆಯನ್ನು ಕಡಿಮೆ ಮಾಡದಿದ್ದರೆ ಮುಷ್ಕರ ಮಾಡುವ ಕುರಿತು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಸರ್ಕಾರದಿಂಧ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಕ್ಕೆ ಬ್ರೇಕ್ ?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ (By election) ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡಬಲ್‌ ಎಂಜಿನ್‌ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ  ಬಿಜೆಪಿಗೆ (BJP) ಅನುಕೂಲ ಮಾಡಲು ಜೆಡಿಎಸ್‌ (JDS) ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೆಡಿಎಸ್‌ ಮತ ಬಿಜೆಪಿಗೆ ಸಹಾಯ ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯ ಬದಲಾವಣೆಗೆ ಆಗ್ರಹಿಸಿ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಆತ್ಮಹತ್ಯೆಗೆ ಪ್ರಸ್ತುತ ಇರುವ ಶಿಕ್ಷಣ ವ್ಯವಸ್ಥೆಯೇ ಕಾರಣ ಎಂಬುದನ್ನು ವೀಡಿಯೋ ಮುಖಾಂತರ ತಿಳಿಸಿರುವ ವಿದ್ಯಾರ್ಥಿಯು ಹದಿಮೂರು ನಿಮಿಷ ಗಳಿರುವ ವಿಡಿಯೋ ಒಂದನ್ನು ಮಾಡಿದ್ದಾನೆ ಮತ್ತು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಆ ವೀಡಿಯೋ ಪ್ರಸಾರ ಮಾಡಬೇಕೆಂದು ಕೋರಿದ್ದಾನೆ. 

ನವೆಂಬರ್‌ನಿಂದ ಪೂರ್ಣಾವಧಿ ತರಗತಿಗಳು ಪ್ರಾರಂಭ

ತಜ್ಞರ ಸಲಹೆ ಮೇರೆಗೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಲಾಗಿದೆ. 1 ರಿಂದ 5ನೇ ತರಗತಿ ಪ್ರಾರಂಭಕ್ಕೆ ಪೋಷಕರು ಕಾಯುತ್ತಿದ್ದರು, ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಶಾಲೆ ಆರಂಭಿಸಲು ನಿರ್ಧರಿಸಿ ಮೊದಲ ಹಂತದಲ್ಲಿ ಅರ್ಧ ದಿನ ಶಾಲೆ ಮುಂದಿನ ತಿಂಗಳಿಂದ ಪೂರ್ತಿ ದಿನ ಶಾಲೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.

Submit Your Article