Rajasthan : ಜಾನುವಾರ ಸಾಗಾಟ (Cattle transportation) ಪ್ರಕರಣದಲ್ಲಿ ವಾಹನ ಚಾಲಕ ಇದ್ರೀಸ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರನ್ನು ರಾಜ್ಯ ಪೊಲೀಸರು ರಾಜಸ್ಥಾನದಲ್ಲಿ (Cattle transportation in Rajasthan) ಇಂದು ಬಂಧಿಸಿದ್ದಾರೆ.
ರಾಮನಗರ ಜಿಲ್ಲೆಯ (Ramanagara District) ಸಾತನೂರು ಬಳಿ ಮಾರ್ಚ್ 31 ರ ರಾತ್ರಿ ಪುನೀತ್ ಕೆರೆಹಳ್ಳಿಯ ಗ್ಯಾಂಗ್ ಜಾನುವಾರುಗಳನ್ನು ಸಾಗಿಸುತ್ತಿದ್ದ ಇದ್ರಿಷ್ ಪಾಷಾ (Idris Pasha)
ಅವರ ವಾಹನವನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ಕುರಿತು ಪುನೀತ್ ಕೆರೆಹಳ್ಳಿ ಮೇಲೆ FIR ದಾಖಲು ಮಾಡಲಾಗಿತ್ತು.
ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದರು ಆದರೆ ಅಂದಿನಿಂದ (Cattle transportation in Rajasthan) ತಲೆಮರೆಸಿಕೊಂಡಿದ್ದ ಪುನೀತ್ ಕೆಯನ್ನು
ಸೋಮವಾರ ರಾತ್ರಿ ಫೇಸ್ಬುಕ್ ಲೈವ್ (Social media) ಬಂದು ನಾನು ಕೊಲೆ ಮಾಡಿಲ್ಲ ಎಂದಿದ್ದನು. ರಾಮನಗರ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿಯವರು ಈ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದರು.
ಇದನ್ನೂ ಓದಿ : https://vijayatimes.com/warning-sign-of-breast-cancer/
ಪ್ರಕರಣದ ಪ್ರಮುಖ ಆರೋಪಿಯಾದ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದು ಅವನ ಶೋಧಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದ್ದರು.
ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆ ತಾಲೂಕಿನ ತೆಂಡೇಕೆರೆ ದನದ ಸಂತೆಯಲ್ಲಿ ಮಾರ್ಚ್ 27 ರಂದು ರಾಸುಗಳನ್ನು ಖರೀದಿಸಿದ್ದ,
ಮಾರ್ಚ್ 31 ರ ರಾತ್ರಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸಂತೆಗಳಿಗೆ ಕೊಂಡೊಯ್ಯುತ್ತಿರುವಾಗ ಇದ್ರಿಸ್ ಪಾಷಾ ಅವರ ವಾಹನವನ್ನು ರಾಮನಗರ ಜಿಲ್ಲೆಯ ಸಾತನೂರು ಬಳಿ ಪುನೀತ್ ಕೆರೆಹಳ್ಳಿ ಗ್ಯಾಂಗ್ ತಡೆಗಟ್ಟಿ,
2 ಲಕ್ಷ ಹಣ ಕೊಟ್ಟರೆ ಗಾಡಿ ಬಿಡುತ್ತೇನೆ ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಇದ್ರೀಶ್ ಪಾಷ ಮತ್ತು ಅವರ ಜೊತೆಗಿದ್ದ ಇರ್ಫಾನ್ ಹಾಗೂ ಸೈಯದ್ ಜಹೀರ್ ಎಂಬುವವರಿಗೆ ಬೆದರಿಕೆಯೊಡ್ಡಿದ್ದಾರೆ.
ಇದನ್ನೂ ಓದಿ : https://vijayatimes.com/h-d-deve-gowda-statement/
ಆದರೆ ಇದ್ರೀಷ್ ಪಾಷಾ ತಾನು ರಾಸುಗಳನ್ನು ಖರೀದಿಸಿದ ರಶೀದಿಯನ್ನು ಕಾನೂನು ಬದ್ದವಾಗಿ ಸಾಗಿಸುತ್ತಿದ್ದೇವೆ ಎಂದು ರಶೀದಿ ತೋರಿಸಿ ನಿಮಗೆ ಯಾಕೆ ಹಣವನ್ನು ಕೊಡಬೇಕು ಎಂದು ವಾದ ಮಾಡಿದ್ದಾರೆ,
ಆಗ ಇವೆರಡು ಗುಂಪುಗಳ ನಡುವೆ ಮಾತಿನ ಚಕಾಮಕಿ ನಡೆದು ಪುನೀತ್ ಕೇರೆಹಳ್ಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಇದ್ರೀಶ್ ಪಾಷಾ,
ಇರ್ಫಾನ್ ಮತ್ತು ಸಯ್ಯದ್ ಜಹೀರ್ ಮೇಲೆ ತೀವ್ರ ಹಲ್ಲೆ ನಡೆಸಿ ಇದ್ರೀಸ್ ಪಾಷಾ ಅವರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.