ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ರಕ್ತನಾಳಗಳು ಬ್ಲಾಕೇಜ್ (Blockage) ಆಗುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗಿ ಅನೇಕರು ಹೃದಯಸ್ತಂಭನ ಉಂಟಾಗಿ ಸಾವನ್ನಪ್ಪುತ್ತಿದ್ದಾರೆ. ಹೃದ್ರೋಗ ತಜ್ಞರ ಪ್ರಕಾರ, ಸದ್ಯ ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರು ಹೃದಯದ ಸಮಸ್ಯೆಯಿಂದಲೇ ಸಾಯುತ್ತಿದ್ದಾರೆ. ಅಲ್ಲದೆ, ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೇ ಸಾಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ರಕ್ತನಾಳಗಳ ಬ್ಲಾಕೇಜ್ . ಹೀಗಾಗಿ ರಕ್ತನಾಳಗಳ ಆರೋಗ್ಯದ ಮೇಲೆ ಗಮನ ಹರಿಸುವುದು ಅತ್ಯಂತ ಪ್ರಮುಖವಾಗಿದೆ. ರಕ್ತನಾಶಗಳ ಬ್ಲಾಕೇಜ್ಗೆ (Blockage) ಕಾರಣವಾಗುವ ಕೆಲ ಆಹಾರ ಪದಾರ್ಥಗಳಿಂದ ದೂರವಿರುವುದು ಉತ್ತಮ. ಅವುಗಳೆಂದರೆ,

• ಐಸ್ಕ್ರೀಮ್: ಐಸ್ಕ್ರೀಮ್ಗಳಲ್ಲಿ (Ice Cream) ಅಧಿಕ ಪ್ರಮಾಣದಲ್ಲಿ ಸ್ಯಾಚುರೇಟೆಡ್ (Saturated) ಕೊಬ್ಬು ಮತ್ತು ಕ್ಯಾಲೋರಿಗಳನ್ನು ಇರುತ್ತದೆ. ಇವು ತೂಕ ಹೆಚ್ಚಿಸಿ, ಹೃದಯದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಇದರ ಸೇವನೆ ಮೀತಿಯಲ್ಲಿರಬೇಕು.
• ತಂಪುಪಾನೀಯಗಳು: ತಂಪು ಪಾನೀಯಗಳ ಸೇವನೆಯು ದೇಹದಲ್ಲಿನ ಇನ್ಸುಲಿನ್ (Insulin) ಮಟ್ಟವನ್ನು ಹೆಚ್ಚಿಸಿ, ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಅದರಿಂದ ರಕ್ತನಾಶಗಳ ಮೇಲೆ ಒತ್ತಡ ಉಂಟಾಗುತ್ತದೆ. ಹೀಗಾಗಿ ತಂಪು ಪಾನೀಯಗಳ ಬದಲು ನಿಂಬೆ ಜ್ಯೂಸ್ (Juice) ಸೇರಿದಂತೆ ಹಣ್ಣಿನ ಜ್ಯೂಸ್ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
• ಫ್ರೆಂಚ್ ಫ್ರೈ: ಇದು ದಿಢೀರನೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಧಿಕಗೊಳಿಸುತ್ತದೆ. ಇದರಲ್ಲಿರುವ ಹೆಚ್ಚಿನ ಉಪ್ಪು ಮತ್ತು ಕೊಬ್ಬಿನಾಂಶವು ಹೃದಯ ಮತ್ತು ರಕ್ತನಾಶಗಳಿಗೆ ಅಪಾಯಕಾರಿಯಾಗಿವೆ. ಹೀಗಾಗಿ ಫ್ರೆಂಚ್ ಫ್ರೈ (French Fries) ಸೇವನೆ ಹೃದಯ ಮತ್ತು ರಕ್ತನಾಶಗಳಿಗೆ ಒಳ್ಳೆಯದಲ್ಲ.
• ಪಿಜ್ಜಾ: ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳ ಪಟ್ಟಿಯಲ್ಲಿ ಪಿಜ್ಜಾ (Pizza) ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಇದನ್ನು ಹೆಚ್ಚಾಗಿ ತಿನ್ನಬಾರದು. ಇದರಿಂದ ರಕ್ತದೊತ್ತಡ ಅಧಿಕವಾಗುತ್ತದೆ. ಅದರಿಂದ ಅನೇಕ ಆರೋಗ್ಯ ಸಂಬಂಧಿತ ಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

• ಹುರಿದ ಚಿಕನ್: ಎಣ್ಣೆಯಲ್ಲಿ ಚಿಕನ್ ಅನ್ನು ಡೀಪ್ ಫ್ರೈ (Deep Fry) ಮಾಡಿ ತಿನ್ನುವುದರಿಂದ ಇದು ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಮೂಲವಾಗುತ್ತದೆ. ಹೀಗಾಗಿ ಎಣ್ಣೆಯಲ್ಲಿ ಹುರಿದ ಮಾಂಸಗಳಿಂದ ದೂರವಿರಬೇಕು.
• ಮಾಂಸ : ಬೊಜ್ಜು ಇರುವವರು ಸಂಸ್ಕರಿಸಿದ ಮಾಂಸ ಮತ್ತು ಕೆಂಪು ಮಾಂಸದಿಂದ ದೂರವಿರಬೇಕು. ಕೆಂಪು ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಧ್ಯವಾದರೆ ಆಡಿನ ಮಾಂಸವನ್ನು ತಿನ್ನುವುದು ಉತ್ತಮ. ಕೆಂಪು ಮಾಂಸ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.