Mandya: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ ಹೋರಾಟ (Cauvery farmers take legal action) ಭುಗಿಲೆದ್ದಿದ್ದು, ಅದರಲ್ಲೂ ಮಂಡ್ಯದಲ್ಲಿ ಕಾವೇರಿ

ಕಿಚ್ಚು ಇಂದು ಸಹ ಮುಂದುವರೆದಿದೆ. ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ
ಅಹೋರಾತ್ರಿ ಧರಣಿ ಆರನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ರೈತರು ಅಂತಿಮವಾಗಿ ಕಾನೂನು (Cauvery farmers take legal action) ಹೋರಾಟಕ್ಕೆ ಮುಂದಾಗಿದ್ದಾರೆ.
ನೈಸರ್ಗಿಕವಾಗಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ
ಕರ್ನಾಟಕ ಸರ್ವೋದಯ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರತಿಭಟನೆ ವೇಳೆ ಮಾತನಾಡಿದ್ದು, ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಅಹೋರಾತ್ರಿ ಚಳುವಳಿ ಮಾಡುತ್ತಿದ್ದು, ಇದೀಗ
ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರದಿಂದ ಯಾವ ರೀತಿ ಕೇಸ್ ಫೈಲ್ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಅದರ ಮೇಲೆ ನಾವು ಸಹ ಪೆಟಿಶನ್ ಹಾಕುತ್ತೇವೆ.
ಬುಧವಾರದ ಒಳಗೆ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಸರ್ಕಾರ ಯಾವ ರೀತಿ ಅರ್ಜಿ ಹಾಕಿದೇ ಎನ್ನುವುದರ ಮೇಲೆ ನಾವು ರಿಟ್ ಅರ್ಜಿ ಸಲ್ಲಿಸುತ್ತೇವೆ. ಮತ್ತು ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮರನ್ನ (General Ravi Varma) ಭೇಟಿ ಮಾಡುತ್ತೇವೆ.
ತದನಂತರ ಸರ್ಕಾರದಿಂದ ಮಾಹಿತಿ ಪಡೆದು ಆ ಬಳಿಕ ಸರ್ಕಾರದ ಅರ್ಜಿ ಒಳಗೆ ಸೇರಿಸಲು ಸಾಧ್ಯವಿಧೀಯ ಎನ್ನುವುದರ ಕುರಿತು ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೆಆರ್ಎಸ್ನಲ್ಲಿ ಲೆಕ್ಕಾಚಾರದ ಪ್ರಕಾರ ನೀರು 12 ಟಿಸಿಎಂಗೆ ಬಂದರೆ ಬೆಂಗಳೂರಿಗೆ (Bengaluru) ಕುಡಿಯಲು ನೀರು ಸಹ ಇರುವುದಿಲ್ಲ. ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು, ರೈತರಿಗೆ ನೀರಿಲ್ಲ.
ಇದಕ್ಕಾಗಿ ಮತ್ತೊಂದು ಹೋರಾಟ ಮಾಡುತ್ತೇವೆ. ಪ್ರಾಧಿಕಾರ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಒಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ(Tamilnadu) ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿದುಹೋಗುತ್ತಿದ್ದು, ಮತ್ತೊಂದು ಕಡೆ ಕಾವೇರಿಗಾಗಿ ಪ್ರತಿಭಟನೆ
ಭುಗಿಲೆದ್ದಿದೆ. ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಕೂಡ ಜೋರಾಗಿದ್ದು, ಇನ್ನೊಂದೆಡೆ ರೈತರು ಸಿಡಿದೇಳುವಂತೆ ಮಾಡಿದೆ.
- ಭವ್ಯಶ್ರೀ ಆರ್.ಜೆ