Jobs 2025 : ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (Central board of secondary Education) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ (Recruitment of posts) ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಅಂಗೀಕೃತ ವಿವಿಯಿಂದ ಪದವಿ ಪಡೆದವರಿಗೆ ಸೂಪರಿಂಟೆಂಡೆಂಟ್ (Superintendent) ಹುದ್ದೆಗಳಿಗೆ ಮತ್ತು ಪಿಯುಸಿ ಪಾಸಾದವರು ಜೂನಿಯರ್ ಅಸಿಸ್ಟಂಟ್ (Junior Assistant) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ನೇಮಕಾತಿ ಪ್ರಾಧಿಕಾರ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (Central board of secondary education)
ಹುದ್ದೆಗಳ ಹೆಸರು : ಸೂಪರಿಂಟೆಂಡೆಂಟ್ (Superintendent) ಮತ್ತು ಜೂನಿಯರ್ ಅಸಿಸ್ಟಂಟ್ (Junior Assistant)
ಹುದ್ದೆಗಳ ವಿವರ : 212
ಹುದ್ದೆಗಳ ವರ್ಗೀಕರಣ ವಿವರ
ಸೂಪರಿಂಟೆಂಡೆಂಟ್ ವೇತನ ಶ್ರೇಣಿ 6 : 142
ಜೂನಿಯರ್ ಅಸಿಸ್ಟಂಟ್ ವೇತನ ಶ್ರೇಣಿ 2 : 70
ವಿದ್ಯಾರ್ಹತೆ (Eligibility) :
ಸೂಪರಿಂಟೆಂಡೆಂಟ್ : ಯಾವುದೇ ಪದವಿ ಪಡೆದಿರಬೇಕು
ಜೂನಿಯರ್ ಅಸಿಸ್ಟಂಟ್ : ದ್ವಿತೀಯ ಪಿಯುಸಿ ಪಾಸಾಗಿರಬೇಕು.
ವಯೋಮಿತಿ (Age limit) : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸೂಪರಿಂಟೆಂಡೆಂಟ್ (Superintendent) ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಜೂನಿಯರ್ ಅಸಿಸ್ಟಂಟ್ (Junior Assistant) ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. OBC ವರ್ಗದವರಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 02-01-2025
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 31-01-2025
ಅರ್ಜಿ ಶುಲ್ಕ : 800.ರೂ.ಗಳು
ಪರೀಕ್ಷೆ ಮಾದರಿ ಮತ್ತು ಪಠ್ಯಕ್ರಮ ಆಯ್ಕೆ ಪ್ರಕ್ರಿಯೆಯ ಇತ್ಯಾದಿ ವಿವರಗಳಿಗಾಗಿ https://cbse.gov.in ಎಂಬ ಜಾಲತಾಣವನ್ನು ನೋಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್ – Aadhar card
SSLC ಅಂಕಪಟ್ಟಿ- SSLC Marks Card
PUC ಅಂಕಪಟ್ಟಿ – PUC Marks Card
ಪದವಿ ಪ್ರಮಾಣಪತ್ರ – Degree Certificate
ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ – Caste and Reservation Certificate
ಇಮೇಲ್ ವಿಳಾಸ – Email Address
ಮೊಬೈಲ್ ನಂಬರ್ – Mobile Number
ಪಾಸ್ಪೋರ್ಟ್ ಭಾವಚಿತ್ರ – Passport Size Photo
ಸಹಿ ಸ್ಕ್ಯಾನ್ ಕಾಪಿ – Scan Copy of Signature