ನವದೆಹಲಿ : ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ cbseresults.nic.in ನಲ್ಲಿ ಪ್ರಕಟಿಸಲಾಗಿದೆ. ಫಲಿತಾಂಶ ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ದಾಖಲಿಸಬೇಕು. ಫಲಿತಾಂಶದ ನಂತರ ಮಾರ್ಕ್ಸ್ ಕಾರ್ಡ್ ಮತ್ತು ಪ್ರಮಾಣ ಪತ್ರಗಳನ್ನು ಡಿಜಿಲಾಕರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಅಧಿಕೃತ ವೆಬ್ ಸೈಟ್ ಮಾತ್ರವಲ್ಲದೇ ಫಲಿತಾಂಶವನ್ನು ಉಮಂಗ್ ಆಪ್ ಮೂಲಕವೂ ನೋಡಬಹುದಾಗಿದೆ. ಜೊತೆಗೆ ಪರೀಕ್ಷೆ ಅಭ್ಯರ್ಥಿಗಳ ಮೊಬೈಲ್ ಗೂ ಫಲಿತಾಂಶದ ಎಸ್ ಎಂ ಎಸ್ ಬರಲಿದೆ.
ಅಭ್ಯರ್ಥಿಯು ತೇರ್ಗಡೆಯಾಗದಿದ್ದಲ್ಲಿ, ಫಲಿತಾಂಶದ ಷರಾದಲ್ಲಿ “ಫೇಲ್” ಶಬ್ದದ ಬದಲಾಗಿ “ಎಸೆಂಶಿಯಲ್ ರಿಪೀಟ್” (ಅಗತ್ಯವಾಗಿ ಪುನರಾವರ್ತನೆ) ಎಂದು ನಮೂದಿಸಲು ಸಿಬಿಎಸ್ಇ ತೀರ್ಮಾನಿಸಿದೆ
ಈ ಬಾರಿ ಕರೋನಾದಿಂದಾಗಿ ಪರೀಕ್ಷೆಗಳು ನಡೆದಿರಲಿಲ್ಲ. ಫಾರ್ಮುಲಾ ಆಧಾರದಲ್ಲಿ ರಿಸಲ್ಟ್ ನೀಡಲಾಗಿದೆ. ಒಟ್ಟು 20,97,128 ವಿದ್ಯಾರ್ಥಿಗಳಲ್ಲಿ 20,76,997 ಮಂದಿ ಪಾಸ್ ಆಗಿದ್ದಾರೆ. ಒಟ್ಟು ಪಾಸ್ ಪರ್ಸಂಟೇಜ್ 99.04%. ಇದರಲ್ಲಿ 19,639 ವಿದ್ಯಾರ್ಥಿಗಳ ಫಲಿತಾಂಶ ಬರುವುದು ಇನ್ನೂ ಬಾಕಿ ಇದೆ.
ಕಳೆದ ವರ್ಷದ 10ನೇ ತರಗತಿ ಸಿಬಿಎಸ್ಇ ಫಲಿತಾಂಶದಲ್ಲಿ 41,804 ವಿದ್ಯಾರ್ಥಿಗಳು 95 ಶೇಕಡಕ್ಕಿಂತಲೂ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿದ್ದರು. ಒಟ್ಟು ಪಾಸ್ ಪರ್ಸಂಟೇಜ್ 91.46% ಇತ್ತು. ಕೇರಳದ ತಿರುವನಂತಪುರಂ ನಲ್ಲಿ ಅತೀ ಹೆಚ್ಚು 99.28% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು