ಚಿನ್ನಸ್ವಾಮಿಯಲ್ಲಿ ವಿಧ್ವಂಸಕ ಕೃತ್ಯ: 240ಕ್ಕೂ ಹೆಚ್ಚು (CCTV cable cut at Chinnaswamy Stadium) ಕ್ಯಾಮೆರಾಗಳು ನಿಷ್ಕ್ರಿಯ
ಭಾರೀ ಭದ್ರತಾ ಲೋಪ ಬಯಲು: ಸ್ಟೇಡಿಯಂನಲ್ಲಿ ಕೇಬಲ್ ಕಟ್ ಪ್ರಕರಣ ಬಹಿರಂಗ
ಟಿಕೆಟ್ ಬ್ಲ್ಯಾಕ್ ದಂಧೆ ಕೂಡ ಬಯಲು; 10 ಮಂದಿ ಬಂಧನ
Bengaluru: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ( ಏಪ್ರಿಲ್ 24) ರಂದು ನಡೆದಿದ್ದ (CCTV cable cut at Chinnaswamy Stadium) ಪಂದ್ಯದ ದಿನವೇ ಭಾರೀ ಭದ್ರತಾ ಲೋಪ ಉಂಟಾಗಿದ್ದು, ಅದು ಕ್ರಿಕೆಟ್ ಪ್ರೇಮಿಗಳಿಗೆ ಆತಂಕ ಮೂಡಿಸಿದೆ.
ಇನ್ನು ಆರ್ಸಿಬಿ (Royal Challengers Bengaluru) ಮತ್ತು ಜಿಟಿ (Gujarat Titans) ನಡುವಿನ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತಮುತ್ತ ಅಳವಡಿಸಲಾಗಿದ್ದ
ಸುಮಾರು 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಮೇಲಿನ (CCTV cable cut at Chinnaswamy Stadium) ನಂಬಿಕೆಗೆ ದೊಡ್ಡ ಹೊಡೆತ ನೀಡಿದೆ.
ಘಟನೆಯ ವಿವರಗಳ ಪ್ರಕಾರ, ಪಂದ್ಯ ದಿನ ಬೆಳಿಗ್ಗೆ ತಾಂತ್ರಿಕ ತಂಡವು ಸಿಸಿಟಿವಿ ವ್ಯವಸ್ಥೆಯನ್ನು ಪರಿಶೀಲಿಸುವಾಗ ಹಲವು ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇರುವುದನ್ನು ಗಮನಿಸಿದೆ.
ಪ್ರವೇಶ ದ್ವಾರಗಳು, ಸುತ್ತಮುತ್ತಲಿನ ವಲಯಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಏಕಾಏಕಿ ಆಫ್ ಆಗಿದ್ದರಿಂದ ಪೊಲೀಸರು ಕ್ಷಣಕಾಲ ಗೊಂದಲಕ್ಕೀಡಾದರು.
ಈ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪರ್ಯಾಯ ಭದ್ರತಾ ವ್ಯವಸ್ಥೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಯಿತು.
ಕೆಲ ಸಮಯ ನಿಗಾ ವ್ಯವಸ್ಥೆ ಕುಂಠಿತಗೊಂಡಿದ್ದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆಯ ವೇಳೆ ಈ ಪ್ರಕರಣದ ಹಿಂದೆ ಇಬ್ಬರು ಆರೋಪಿಗಳ ಕೈವಾಡವಿರುವುದು ಬಹಿರಂಗವಾಗಿದೆ. ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ (Solutions) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ (Abdul Kalam) ಎಂಬವರು ಮಾನ್ಯ ಪಾಸ್ ಇಲ್ಲದೇ ಕ್ರೀಡಾಂಗಣ ಪ್ರವೇಶಿಸಿದ್ದು, ನಿಷ್ಕ್ರಿಯಗೊಂಡ ಹಳೆಯ ಐಡಿ ಕಾರ್ಡ್ ಬಳಸಿ ಸರ್ವರ್ ರೂಂಗೆ ನುಗ್ಗಿದ್ದಾರೆ.
ಬಳಿಕ ಎನ್‌ವಿಆರ್ (NVR) ಮತ್ತು ಆಪ್ಟಿಕಲ್ ಫೈಬರ್ (Optical Fiber) ಸಂಪರ್ಕಗಳನ್ನು ಕತ್ತರಿಸಿ ಸಿಸಿಟಿವಿ (CCTV) ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.
ವಿಚಾರಣೆಯ ವೇಳೆ ಸಂಬಳ ನೀಡದ ಕಾರಣ ಈ ಕೃತ್ಯ ಎಸಗಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಪಂದ್ಯ ಸಂದರ್ಭದಲ್ಲಿ ಮತ್ತೊಂದು ಅಕ್ರಮವೂ ಬೆಳಕಿಗೆ ಬಂದಿದೆ. ಕ್ರೀಡಾಂಗಣದ ಒಳಗೆ ಮತ್ತು ಸುತ್ತಮುತ್ತ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದು, ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ.
ಪಿ3 ಸ್ಟ್ಯಾಂಡ್ ಹಾಗೂ ರೋಜರ್ ಬಿನ್ನಿ ಸ್ಟ್ಯಾಂಡ್‌ಗೆ (Roger Binney Stand) ಸೇರಿದ ಒಟ್ಟು 19 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಎಸ್‌ಸಿಎ (KSCA) ಸದಸ್ಯರಿಗೆ ನೀಡಲಾಗಿದ್ದ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನೇ ಹೆಚ್ಚು ಪ್ರಮಾಣದಲ್ಲಿ ಬ್ಲಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಕೆಲವು ಟಿಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದ್ದರೆ, ಇನ್ನೂ ಕೆಲವು ಟಿಕೆಟ್‌ಗಳನ್ನು ಎರಡು-ಮೂರು ಪಟ್ಟು ಹೆಚ್ಚಾಗಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಎಲ್ಲಾ ಘಟನೆಗಳ ನಡುವೆಯೂ ಪೊಲೀಸರು ಸಮಯಪ್ರಜ್ಞೆ ಪ್ರದರ್ಶಿಸಿ ಯಾವುದೇ ದೊಡ್ಡ ಅನಾಹುತ ಸಂಭವಿಸದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಚುರುಕುಗೊಂಡಿದೆ. ಒಟ್ಟಾರೆ, ಈ ಘಟನೆ ಕ್ರೀಡಾಂಗಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಮತ್ತೆ ಒತ್ತಿ ಹೇಳುತ್ತಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇದನ್ನು ಓದಿ : https://vijayatimes.com/increased-heat-in-karnataka/