• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
0
SHARES
12
VIEWS
Share on FacebookShare on Twitter

ಹೋಟೆಲ್‌ ಮಾಲೀಕರೇ ಎಚ್ಚರ! ಕಿಚನ್‌ನಲ್ಲಿ (CCTV mandatory in hotel kitchen) ಇನ್ಮುಂದೆ ಈ ನಿಯಮ ತಪ್ಪಿಸುವಂತಿಲ್ಲ

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕಣ್ಗಾವಲು ಕಡ್ಡಾಯ

ಹಾಳಾದ ಆಹಾರಕ್ಕೆ ಕಡಿವಾಣ, ಅಡುಗೆಮನೆಯ ಪ್ರತಿಯೊಂದು ಚಟುವಟಿಕೆ ಮೇಲೂ ನಿಗಾ

Bengaluru : ಹೋಟೆಲ್‌, ಪಬ್‌, ಬಾರ್‌ ಹಾಗೂ ರೆಸ್ಟೋರೆಂಟ್‌ಗಳ ಅಡುಗೆಮನೆಗಳಲ್ಲಿ (CCTV mandatory in hotel kitchen) ಆಹಾರ ಸುರಕ್ಷತೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಹೊಸ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.

ಗ್ರಾಹಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

CCTV mandatory in hotel kitchen

ಇತ್ತೀಚೆಗೆ ಬೆಂಗಳೂರಿನ ಹಲವು ಸ್ಟಾರ್‌ ಹೋಟೆಲ್‌ಗಳ ಕಿಚನ್‌ಗಳಲ್ಲಿ ನಡೆದ ತಪಾಸಣೆ ವೇಳೆ (CCTV mandatory in hotel kitchen) ಅವಧಿ ಮೀರಿದ ಆಹಾರ,

ಫಂಗಸ್‌ (Fungus) ಹಿಡಿದ ತರಕಾರಿಗಳು, ಹಾಳಾದ ಮಾಂಸ ಹಾಗೂ ಹಾಲಿನ ಉತ್ಪನ್ನಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಎಚ್ಚರಿಕೆ ವಹಿಸಿದೆ.

ಇದರ ಬೆನ್ನಲ್ಲೇ ಕಿಚನ್‌ಗಳಲ್ಲಿ ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ಸ್ವಚ್ಛತೆಯ ಮೇಲ್ವಿಚಾರಣೆಗೆ CCTV ಕ್ಯಾಮೆರಾ ವ್ಯವಸ್ಥೆ ಅಳವಡಿಸುವ ವಿಚಾರವೂ ಮಹತ್ವ ಪಡೆದುಕೊಂಡಿದೆ.

ಕಿಚನ್‌ನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ಆಹಾರ ಸುರಕ್ಷತಾ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ 60ಕ್ಕೂ ಹೆಚ್ಚು ತ್ರೀ-ಸ್ಟಾರ್‌ ಮತ್ತು ಫೈವ್‌-ಸ್ಟಾರ್‌ ಹೋಟೆಲ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.

ವಿವಿಧ ಹೋಟೆಲ್‌ಗಳ ಅಡುಗೆಮನೆ, ಆಹಾರ ಸಂಗ್ರಹಣಾ ಸ್ಥಳ, ಫ್ರಿಜ್‌ ಮತ್ತು ಫ್ರೀಜರ್‌ (Freezer) ವ್ಯವಸ್ಥೆಗಳನ್ನು ಪರಿಶೀಲಿಸಿದ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

ಕೆಲವು ಕಡೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಫಂಗಸ್‌ ಹಿಡಿದ ತರಕಾರಿಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಹಾಳಾದ ಮಾಂಸ ಮತ್ತು ಹಾಲಿನ

ಉತ್ಪನ್ನಗಳ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಿದ್ದಾರೆ. ಒಟ್ಟಾರೆ 1,000 ಕೆಜಿಗೂ ಅಧಿಕ ಆಹಾರ ಮತ್ತು ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇಂತಹ ಘಟನೆಗಳು ಮರುಕಳಿಸದಂತೆ ಕಿಚನ್‌ಗಳಲ್ಲಿನ ಆಹಾರ ನಿರ್ವಹಣೆ, ಸಿಬ್ಬಂದಿಯ ಕೆಲಸ ಹಾಗೂ ಸ್ವಚ್ಛತಾ ಕ್ರಮಗಳ ಮೇಲೆ ನಿರಂತರ ನಿಗಾ ಇರಿಸುವ ವ್ಯವಸ್ಥೆ ಜಾರಿಗೆ ತರಲು ಇಲಾಖೆ ಮುಂದಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿಯಮಗಳನ್ನು ಸೇರಿಸುವ ಸಾಧ್ಯತೆಯಿದೆ.

ತರಕಾರಿಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸುವುದು, ಕೊಳೆತ ಅಥವಾ ಫಂಗಸ್‌ ಹಿಡಿದ ತರಕಾರಿಗಳನ್ನು ತಕ್ಷಣ ವಿಲೇವಾರಿ ಮಾಡುವುದು ಹಾಗೂ

ಆಹಾರದ ಶೆಲ್ಫ್‌ ಲೈಫ್‌ ದಾಖಲಿಸುವುದು ಪ್ರಮುಖ ಅಂಶಗಳಾಗಿವೆ. ಫ್ರೋಜನ್‌ ಆಹಾರವನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು.

ಒಮ್ಮೆ ಕರಗಿಸಿದ ಫ್ರೋಜನ್‌ (Frozen) ಆಹಾರವನ್ನು ಮತ್ತೆ ಫ್ರೀಜ್‌ ಮಾಡಿ ಬಳಸುವುದಕ್ಕೆ ಅವಕಾಶ ನೀಡದಿರುವ ಸಾಧ್ಯತೆಯಿದೆ. ಮೊಸರು, ಚೀಸ್‌, ಬಟರ್‌ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ, ಅವುಗಳ ಅವಧಿ ಮುಗಿಯುವ ಮೊದಲು ಬಳಸಬೇಕು.

ಅಡುಗೆ ಎಣ್ಣೆಯ ಗುಣಮಟ್ಟದ ಮೇಲೂ ನಿಗಾ ವಹಿಸಲಾಗುತ್ತದೆ. ಇದರ ಜೊತೆಗೆ ಕಿಚನ್‌ನ ಪ್ರಮುಖ ಪ್ರದೇಶಗಳಲ್ಲಿ CCTV ಕ್ಯಾಮೆರಾಗಳನ್ನು ಅಳವಡಿಸಿ, ಆಹಾರ ತಯಾರಿಕೆ ಮತ್ತು ನಿರ್ವಹಣಾ ಪ್ರಕ್ರಿಯೆಯನ್ನು ದಾಖಲಿಸುವ ವ್ಯವಸ್ಥೆ ತರಲು ಚಿಂತನೆ ನಡೆಯುತ್ತಿದೆ.

ಅಡುಗೆಮನೆಗಳಲ್ಲಿ ಕಚ್ಚಾ ಆಹಾರ, ಅರೆಬೇಯಿಸಿದ ಆಹಾರ ಮತ್ತು ಸಿದ್ಧ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಕಡ್ಡಾಯವಾಗಲಿದೆ. ವೆಜ್‌ ಮತ್ತು ನಾನ್‌ವೆಜ್‌ ಆಹಾರವನ್ನು ಬೇರ್ಪಡಿಸಿ ನಿರ್ವಹಿಸುವುದಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಕಚ್ಚಾ ಮಾಂಸ ಮತ್ತು ಮೀನು ಸೇರಿದಂತೆ ಪ್ರಾಣಿಜನ್ಯ ಆಹಾರವನ್ನು 4 ಡಿಗ್ರಿ ಸೆಲ್ಸಿಯಸ್‌ (Degrees Celsius) ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.

ಬಿಸಿ ಆಹಾರವನ್ನು 65 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು, ಶೀತ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ಹಾಗೂ ಫ್ರೋಜನ್‌ ಆಹಾರವನ್ನು ಮೈನಸ್‌ 18 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಬೇಕು.

ಮರುಬಿಸಿ ಮಾಡುವ ಆಹಾರದ ಒಳಭಾಗದ ತಾಪಮಾನ 75 ಡಿಗ್ರಿ ಸೆಲ್ಸಿಯಸ್‌ ತಲುಪುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗಳ ಜೊತೆಗೆ CCTV ಮೂಲಕ

ಕಿಚನ್‌ನ ಚಟುವಟಿಕೆಗಳ ಮೇಲೆ ನಿಗಾ ಇಟ್ಟರೆ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯವಾಗಲಿದೆ.

ಅವಧಿ ಮೀರಿದ ಅಥವಾ ಹಾಳಾದ ಆಹಾರವನ್ನು ಕಿಚನ್‌ನಲ್ಲಿ ಇಟ್ಟುಕೊಂಡು ಮತ್ತೆ ಬಳಸುವುದಕ್ಕೆ ಇನ್ನು ಮುಂದೆ ಕಠಿಣ ಕಡಿವಾಣ ಹಾಕುವ ಸಾಧ್ಯತೆಯಿದೆ.

ಇಂತಹ ಆಹಾರವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದಕ್ಕೆ ಪ್ರತ್ಯೇಕ SOP ಅಂದರೆ ಪ್ರಮಾಣಿತ ಕಾರ್ಯವಿಧಾನವನ್ನು ರೂಪಿಸಲಾಗುತ್ತಿದೆ.

ಕಿಚನ್‌ಗಳಲ್ಲಿ ಆಹಾರದ ಲೇಬಲಿಂಗ್‌, ಶೆಲ್ಫ್‌ ಲೈಫ್‌ (Shelf Life) , ಸಂಗ್ರಹಣಾ ತಾಪಮಾನ ಹಾಗೂ ಆಹಾರ ವಿಲೇವಾರಿ ಕುರಿತ ದಾಖಲೆಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ಇಲಾಖೆ ಮುಂದಾಗಿದೆ.

CCTV ಕ್ಯಾಮೆರಾಗಳ ಅಳವಡಿಕೆ ಮತ್ತು ಅದರ ದೃಶ್ಯಗಳನ್ನು ಅಗತ್ಯವಿದ್ದಾಗ ಪರಿಶೀಲಿಸುವ ವ್ಯವಸ್ಥೆ ಜಾರಿಯಾದರೆ, ಕಿಚನ್‌ಗಳಲ್ಲಿ ನಡೆಯುವ ಆಹಾರ ನಿರ್ವಹಣೆಯ ಮೇಲೂ ಹೆಚ್ಚಿನ ಹೊಣೆಗಾರಿಕೆ ಬರಲಿದೆ.

ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್‌, ಪಬ್‌, ಬಾರ್‌ ಹಾಗೂ ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಗ್ರಾಹಕರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೋಟೆಲ್‌ ಮಾಲೀಕರು ತಮ್ಮ ಕಿಚನ್‌ ವ್ಯವಸ್ಥೆ, ಆಹಾರ ಸಂಗ್ರಹಣೆ, ಸ್ವಚ್ಛತೆ ಮತ್ತು ಮೇಲ್ವಿಚಾರಣಾ ಕ್ರಮಗಳನ್ನು ಪರಿಶೀಲಿಸಿಕೊಳ್ಳಬೇಕಾದ ಅಗತ್ಯವಿದೆ.

ಇದನ್ನು ಓದಿ : https://vijayatimes.com/jds-opposes-bidadi-township/

Tags: bengalurucameraCCTVHotel

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.