ಬೆಂಗಳೂರು, ಫೆ. 02: ಕೇಂದ್ರ ಸರ್ಕಾರ ಮಂಡಿಸಿದ ಆಯವ್ಯಯ ರಾಷ್ಟ್ರದ ಇತಿಹಾಸದಲ್ಲಿ ಮಂಡಿಸಲಾಗಿರುವ ಅತ್ಯಂತ ನಿರುತ್ಸಾಹಿ ಬಜೆಟ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ರಾಷ್ಟ್ರದ ಇತಿಹಾಸದಲ್ಲೇ ಇಂತಹ ನಿರುತ್ಸಾಹಿ ಬಜೆಟ್ ಇನ್ನೊಂದಿಲ್ಲ. ಲಾಕ್‌ಡೌನ್ ನಿಂದ ನಷ್ಟಕ್ಕೊಳಗಾದ ವೃತ್ತಿಪರರು, ವ್ಯಾಪಾರಿಗಳು ಸೇರಿ ಯಾವ ವರ್ಗಕ್ಕೂ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ. ಉದ್ಯೋಗ ಸೃಷ್ಟಿಯ ಯೋಜನೆಗಳಿಲ್ಲ, ಕೃಷಿ ಕ್ಷೇತ್ರದ ರಕ್ಷಣೆ, ಬೆಳೆಗೆ ಉತ್ತಮ ಬೆಲೆಯ ಭರವಸೆಯಿಲ್ಲ. ಇದು ಜನ ವಿರೋಧಿ ಬಜೆಟ್ ಆಗಿದೆ.
ಕಾಂಗ್ರೆಸ್ ಅವಧಿಯಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ಹೆಚ್ಚು ತೆರಿಗೆ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಪೂರಕವಾದ ಯಾವುದೇ ಜನಪರ ಕಾರ್ಯಕ್ರಮ ಇಲ್ಲ. ಅಡುಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಇಳಿಕೆಯ ಪ್ರಸ್ತಾಪವೇ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ ಎಂದು ಕಿಡಿಕಾರಿದ್ದಾರೆ.