E20 ಪೆಟ್ರೋಲ್ ಬಗ್ಗೆ ಹರಿದಾಡುತ್ತಿರುವ (central government clarifies ethanol rumors) ಸುಳ್ಳು ಸುದ್ದಿಗಳಿಗೆ ಬ್ರೇಕ್
ಇಂಜಿನ್ ಹಾನಿ, ಮೈಲೇಜ್ ಕುಸಿತ, ವಾರಂಟಿ ರದ್ದು ಸೇರಿದಂತೆ ಹಲವು ಅನುಮಾನಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ
ಎಥನಾಲ್ ಮಿಶ್ರಣದಿಂದ ದೇಶಕ್ಕೆ ಆರ್ಥಿಕ ಹಾಗೂ ಪರಿಸರ ಲಾಭಗಳ ವಿವರ ಬಿಡುಗಡೆ
ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ (central government clarifies ethanol rumors) E20 (ಶೇ.20 ಎಥನಾಲ್ ಮಿಶ್ರಿತ) ಪೆಟ್ರೋಲ್ ಕುರಿತು ಹಲವು ರೀತಿಯ ವದಂತಿಗಳು ಹರಿದಾಡುತ್ತಿವೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು “Ethanol Blending Programme in India – A Journey” ಹೆಸರಿನ 15 ಪುಟಗಳ ಅಧಿಕೃತ ವರದಿಯನ್ನು ಬಿಡುಗಡೆ ಮಾಡಿದೆ.
ಈ ವರದಿಯಲ್ಲಿ ಎಥನಾಲ್ ಮಿಶ್ರಣ ಯೋಜನೆಯ ಸಾಧನೆಗಳು, ಅದರ ವೈಜ್ಞಾನಿಕ ಹಿನ್ನೆಲೆ ಹಾಗೂ ಜನರಲ್ಲಿ ಮೂಡಿರುವ ಪ್ರಮುಖ ಐದು ಅನುಮಾನಗಳಿಗೆ ಸ್ಪಷ್ಟ ಉತ್ತರ ನೀಡಲಾಗಿದೆ.

ಸರ್ಕಾರದ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ಮಾಹಿತಿಗಳು (central government clarifies ethanol rumors) ವಾಸ್ತವಕ್ಕೆ ದೂರವಾಗಿದ್ದು, ಅವುಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ತಿಳಿಸಿದೆ.
ಭಾರತವು ಎಥನಾಲ್ ಮಿಶ್ರಣ ಯೋಜನೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು, ನಿಗದಿತ ಅವಧಿಗೂ ಮುನ್ನವೇ ದೇಶಾದ್ಯಂತ E20 ಗುರಿಯನ್ನು ತಲುಪಿದೆ. 2013-14ರಲ್ಲಿ ಕೇವಲ ಶೇ.1.5ರಷ್ಟಿದ್ದ ಎಥನಾಲ್ ಮಿಶ್ರಣ ಪ್ರಮಾಣವು ಹಂತ ಹಂತವಾಗಿ ಏರಿಕೆಯಾಗಿದ್ದು, 2025-26ರಲ್ಲಿ ಶೇ.20ಕ್ಕೆ ತಲುಪಿದೆ.
ಇದರಿಂದ ದೇಶವು ಸುಮಾರು ₹1.90 ಲಕ್ಷ ಕೋಟಿ ವಿದೇಶಿ ವಿನಿಮಯವನ್ನು ಉಳಿಸಿಕೊಂಡಿದ್ದು, ಕಬ್ಬು ಮತ್ತು ಜೋಳ ಬೆಳೆಗಾರ ರೈತರಿಗೆ ₹1.60 ಲಕ್ಷ ಕೋಟಿಗೂ ಹೆಚ್ಚು ಆದಾಯ ದೊರೆತಿದೆ.
ಅಲ್ಲದೆ, ಕಚ್ಚಾ ತೈಲದ ಆಮದು ಕಡಿಮೆಯಾಗಿರುವುದರ ಜೊತೆಗೆ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯೂ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಸರ್ಕಾರದ ವರದಿಯಲ್ಲಿ ವಾಹನ ಚಾಲಕರನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರ ನೀಡಲಾಗಿದೆ. E20 ಪೆಟ್ರೋಲ್ ಬಳಸುವುದರಿಂದ ಇಂಜಿನ್ ಹಾಳಾಗುವುದಿಲ್ಲ ಎಂದು ARAI ಹಾಗೂ IOCL ನಡೆಸಿದ ಅಧ್ಯಯನಗಳು ದೃಢಪಡಿಸಿವೆ.
ಇದೇ ವೇಳೆ ಮೈಲೇಜ್ (Mileage) ಸಂಪೂರ್ಣವಾಗಿ E20 ಇಂಧನದ ಮೇಲೆ ಅವಲಂಬಿತವಲ್ಲ; ಚಾಲನಾ ಶೈಲಿ, ಟೈರ್ ಒತ್ತಡ, ವಾಹನದ ನಿರ್ವಹಣೆ ಹಾಗೂ ಏರ್ ಫಿಲ್ಟರ್‌ನ (Air Filter) ಸ್ಥಿತಿ ಕೂಡ ಪ್ರಮುಖ ಪಾತ್ರವಹಿಸುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಹೀಗಾಗಿ E20 ಬಳಕೆಯಿಂದ ವಾಹನದ ಕಾರ್ಯಕ್ಷಮತೆ ಕುಸಿಯುತ್ತದೆ ಎಂಬ ಆತಂಕಕ್ಕೆ ಯಾವುದೇ ಆಧಾರವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದಲ್ಲದೆ, E20 ಪೆಟ್ರೋಲ್ (Petrol) ಬಳಸಿದರೆ ವಾಹನದ ವಾರಂಟಿ ಹಾಗೂ ವಿಮಾ ಸೌಲಭ್ಯ ರದ್ದಾಗುತ್ತದೆ ಎಂಬ ವದಂತಿಯನ್ನೂ ಸರ್ಕಾರ ತಳ್ಳಿಹಾಕಿದೆ. ವಾಹನ ತಯಾರಕರ
ಸಂಘ (SIAM) ಹಾಗೂ ವಿಮಾ ಸಂಸ್ಥೆಗಳು E20 ಬಳಕೆಯಿಂದ ವಾರಂಟಿ ಅಥವಾ ಕ್ಲೈಮ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಪೆಟ್ರೋಲ್‌ನಲ್ಲಿ ಸಕ್ಕರೆ ಅಂಶ ಇರುವುದರಿಂದ ಇರುವೆ ಅಥವಾ ಜೇನುನೊಣಗಳು ವಾಹನದ ಟ್ಯಾಂಕ್‌ಗೆ ಬರುತ್ತವೆ ಎಂಬ ಮಾತು ಕೂಡ ಸತ್ಯವಲ್ಲ ಎಂದು BPCL ವಿಜ್ಞಾನಿಗಳು ತಿಳಿಸಿದ್ದಾರೆ.
ಇಂಧನ ದರ್ಜೆಯ ಎಥನಾಲ್‌ನಲ್ಲಿ ಸಕ್ಕರೆ ಅಂಶ ಇರುವುದಿಲ್ಲ ಹಾಗೂ ವಿಶೇಷ ಡಿನೇಚುರೆಂಟ್‌ಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗೆ ಅವಕಾಶವೇ ಇಲ್ಲ ಎಂದು ವರದಿ ಹೇಳಿದೆ.
ಇದೇ ವೇಳೆ, ಒಂದು ಲೀಟರ್ ಎಥನಾಲ್ ಉತ್ಪಾದನೆಗೆ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತದೆ ಎಂಬ ಆರೋಪಕ್ಕೂ ಸರ್ಕಾರ ಉತ್ತರ ನೀಡಿದೆ. ಹೆಚ್ಚುವರಿ
ಧಾನ್ಯಗಳಿಂದ ಎಥನಾಲ್ ತಯಾರಿಸಲಾಗುತ್ತಿದ್ದು, ಆಧುನಿಕ ಡಿಸ್ಟಿಲರಿಗಳಲ್ಲಿ ಕೇವಲ 3ರಿಂದ 5 ಲೀಟರ್ ಸಂಸ್ಕರಿಸಿದ ನೀರನ್ನಷ್ಟೇ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಜೋಳದಂತಹ ಕಡಿಮೆ ನೀರು ಬೇಕಾಗುವ ಬೆಳೆಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ರೈತರಿಗೆ ಉತ್ತಮ ಆದಾಯವೂ ದೊರೆಯುತ್ತಿದೆ. ಒಟ್ಟಾರೆ, E20 ಪೆಟ್ರೋಲ್ ಕುರಿತು
ಹರಿದಾಡುತ್ತಿರುವ ವದಂತಿಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಜನರು ಅಧಿಕೃತ ಮಾಹಿತಿಯನ್ನೇ ನಂಬುವಂತೆ ಮನವಿ ಮಾಡಿದೆ.
ಇದನ್ನು ಓದಿ : https://vijayatimes.com/digital-revolution-in-kps-schools/