ನವದೆಹಲಿ ನ 22 : ಕೇಂದ್ರ ನೌಕರರಿಗೆ (Central Government Employees) ಸಂತಸದ ಸುದ್ದಿ ಪ್ರಕಟವಾಗಿದೆ. ಈ ತಿಂಗಳು ನೌಕರರ ಸಂಬಳ ಮತ್ತೊಮ್ಮೆ ಹೆಚ್ಚಾಗಲಿದೆ (Salary Hike). ವಾಸ್ತವವಾಗಿ, 28% DA ಹೆಚ್ಚಳದ ನಂತರ, ಮತ್ತೊಮ್ಮೆ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, ಅಕ್ಟೋಬರ್ನಿಂದ ಉದ್ಯೋಗಿಗಳು ಒಟ್ಟು ಶೇ. 31ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ. ಅಂದರೆ, ನವೆಂಬರ್ ತಿಂಗಳ ಸಂಬಳವೂ ಹೆಚ್ಚಾಗಲಿದೆ.
ಸುದೀರ್ಘ ಕಾಯುವಿಕೆಯ ನಂತರ ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು 17% ರಿಂದ 28% ಕ್ಕೆ ಹೆಚ್ಚಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ನಂತರ, ಇದೀಗ ಮತ್ತೆ 3% DA ಹೆಚ್ಚಿಸಲಾಗಿರುವ ಕಾರಣ ಅದು ಶೇ.31ಕ್ಕೆ ಬಂದು ತಲುಪಿದೆ.
ನೌಕರರ ತುಟ್ಟಿ ಭತ್ಯೆ ಶೇ.31ಕ್ಕೆ ಏರಿಕೆಯಾಗಿದೆ. ಈ ಹಿಂದೆ ಅದು 28% ಆಗಿತ್ತು. ಹೀಗಾಗಿ ಇದೀಗ ಕೇಂದ್ರ ಉದ್ಯೋಗಿಗಳ ನವೆಂಬರ್ ತಿಂಗಳ ಸಂಬಳದಲ್ಲಿ ಬಂಪರ್ ಏರಿಕೆಯಾಗಲಿದೆ. ಈ ತಿಂಗಳು ಉದ್ಯೋಗಿಗಳ ಸಂಬಳದಲ್ಲಿ 3% ಹೆಚ್ಚಳ DAಬರುತ್ತದೆ. 28% DA ಗೆ ಹೋಲಿಸಿದರೆ 31% DA ಯೊಂದಿಗೆ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
31% DAಮೇಲೆ ಲೆಕ್ಕಾಚಾರ
ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಿದ ನಂತರ, ಒಟ್ಟು DA ಶೇಕಡಾ 31 ಆಗಿದೆ. ಈಗ 18,000 ರೂ ಮೂಲ ವೇತನದಲ್ಲಿ, ಒಟ್ಟು ವಾರ್ಷಿಕ ತುಟ್ಟಿ ಭತ್ಯೆ 66,960 ರೂ. ಸಿಗಲಿದೆ. ಆದರೆ ವ್ಯತ್ಯಾಸದ ಬಗ್ಗೆ ಮಾತನಾಡುವುದಾದರೆ, ವೇತನದಲ್ಲಿ ವಾರ್ಷಿಕ ಹೆಚ್ಚಳ 6,480 ರೂ. ಇರಲಿದೆ.