ಕೇಂದ್ರ ಸರ್ಕಾರದಿಂದ ಮಾನಸಿಕ ಆರೈಕೆಗೆ 37 ಸಾವಿರ ಕೋಟಿ ಅನುದಾನ!

ಕೋವಿಡ್ ಅಬ್ಬರದಲ್ಲಿ ಕಳೆದ ವರ್ಷ 1,53,052 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷಗಳಲ್ಲಿ ಕೊರೊನಾ / ಕೋವಿಡ್ ಸಾಂಕ್ರಾಮಿಕ ರೋಗದ ಸಂಕಷ್ಟದಿಂದ ದೇಶಾದ್ಯಾಂತ ಎಷ್ಟೋ ಜನರು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರವು ಜನರ ಮನೋಸ್ಥೈರ್ಯವನ್ನು ಹೆಚ್ಚಿಸಲು ಮಾನಸಿಕ ಆರೋಗ್ಯ ಕೇಂದ್ರದ ಸ್ತಾಪನೆಯತ್ತ ಗಮನ ಹರಿಸಲಾಗಿದ್ದು, ಬೆಂಗಳೂರಿನ ನಿಮಾನ್ಸ್ ನಲ್ಲಿ ‘ಮಾನಸಿಕ ಆರೈಕೆ ಕೇಂದ್ರ’ ಸ್ಥಾಪನೆಗೆ ಮುಂದಾಗಿದೆ. ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಆಧ್ಯತೆ ನೀಡಲಾಗಿದ್ದು, 2022- 2023ರ ವಾರ್ಷಿಕ ಬಡ್ಜೆಟ್ 39.45 ಲಕ್ಷ ಕೋಟಿಯಲ್ಲಿ 37 ಸಾವಿರ ಕೋಟಿ ಅನುದಾನವಾನ್ನು ಮೀಸಲಿಡಲಾಗಿದೆ.

2019 ರಲ್ಲಿ ಕೋವಿಡ್ -19ರ ಅಬ್ಬರದಲ್ಲಿ 1,39,123 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1,53,052 ಆತ್ಮಹತ್ಯೆ ಭಾರತದಲ್ಲಿ ಸಂಭವಿಸಿದೆ. ಆತ್ಮಹತ್ಯೆಯು ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಬೆಳೆಯುತ್ತಿದೆ. ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 8,00,000 ಜನರು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ರಾಷ್ಟ್ರೀಯ ಆತ್ಮಹತ್ಯೆ ದರ 11.3 % (2020) ಶ್ರೀಮಂತರು ಹಾಗು ಬಡವರು ಇಬ್ಬರಿಗು ತಪ್ಪಿದಲ್ಲ ಈ ಖಿನ್ನತೆ. ಖಿನ್ನತೆಗೆ ಕಾರಾಣಗಳೇನು? ಸಿರೊಟೋನಿನ್ (Sirotonin)ನ ಅಸಮತೋಲನ, ಮನೋವೈದ್ಯರ ಪ್ರಕಾರ ಸಿರೊಟೋನಿನ್ ಕೊರತೆಯು ಆತ್ಮಹತ್ಯೆಗೆ ಮುಖ್ಯ ಕಾರಣವಾಗಿದೆ.

ಮೆದುಳಿನಲ್ಲಿ ಕಡಿಮೆ ಮಟ್ಟದ ಸಿರೊಟೋನಿನ್ ಇದ್ದರೆ ಅದು ಖಿನ್ನತೆಗೆ ಕಾರಣವಾಗುತ್ತದೆ ಹಾಗು ಆತಂಕ ಮತ್ತು ನಿದ್ರೆಯ ತೊಂದರೆಗೆ ಕಾರಣವಾಗಬಹುದು. ಸಿರೊಟೋನಿನ್ ಎಂಬುದು ನಮ್ಮ ದೇಹದೊಳಗಿರುವ ಒಂದು ಬಗೆಯ ಹಾರ್ಮೋನ್. ಈ ಹಾರ್ಮೋನ್ ನಮ್ಮ ದೇಹದಲ್ಲಿ ಸಮತೋಲನದಲ್ಲಿದ್ದರೆ ಮಾತ್ರ ಸಂತೋಷ ಎಂಬ ಪದದ ಭಾವನೆಯನ್ನು ಅನುಭವಿಸಲು ಸಾಧ್ಯ. ಅಷ್ಟೇ ಅಲ್ಲ! ಈ ಹಾರ್ಮೋನ್ ನಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸಲು, ಆತಂಕವನ್ನು ಮತ್ತು ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೆಚ್ಚಿನ ಸಿರೊಟೋನಿನ್ ಮಟ್ಟಗಳು ನಡುಕ, ಭಾರೀ ಬೆವರುವಿಕೆ, ಗೊಂದಲ, ಚಡಪಡಿಕೆ, ತಲೆನೋವು, ಅಧಿಕ ರಕ್ತದೊತ್ತಡ, ಸ್ನಾಯು ಸೆಳೆತ, ಅತಿಸಾರ ಹೀಗೆ ಹಲವು ತೊಂದರೆಗಳನ್ನು ಉಂಟುಮಾಡುತ್ತದೆ. ಇದಕ್ಕೆ ಪರಿಹಾರ ? ಪ್ರತಿನಿತ್ಯ ವ್ಯಾಯಾಮಾ ಮಾಡುವುದರ ಜೊತೆಗೆ ಮೊಟ್ಟೆ,ಮೊಳಕೆಕಾಳುಗಳು, ಒಮೆಗಾ 3(omega 3 ) ಇರುವಂತಹ ಪದಾರ್ಥಗಳು,ಡ್ರೈ ಪ್ರೋಟ್ಸ್, ಪ್ರೋಟೀನ್ ಇರುವಂತಹ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ಸಿರೊಟೋನಿನ್ ನ ಸಮತೋಲನ ಕಾಪಾಡಿಕೊಳ್ಳುತ್ತದೆ.

ಸಾಮಾಜಿಕ ಪ್ರತ್ಯೇಕತೆ :
ಸಾಮಾಜಿಕ ಪ್ರತ್ಯೇಕತೆಯು ಖಿನ್ನತೆಗೆ ಮತ್ತೊಂದು ಕಾರಣವಾಗಿದೆ. ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ಕಡಿಮೆ ಲಾಭದಾಯಕ ಮತ್ತು ಹೆಚ್ಚು ಅಸಮರ್ಪಕ ಸಾಮಾಜಿಕ ಸಂಬಂಧಗಳನ್ನು ಹೊಂದಿರುತ್ತಾರೆ.

ಗುರಿಗಳ ಕೊರತೆ: ಗುರಿಗಳಿಲ್ಲದ ದಿನಗಳು ಬೇಗ ಜೀವನವನ್ನು ಸಪ್ಪೆಮಾಡುತ್ತದೆ. ಕ್ರಮೇಣ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ.

ಅತಿಯಾದ ಮಧ್ಯಪಾನ ಹಾಗು ಧೂಮಪಾನ: ಅತಿಯಾದ ಧೂಮಪಾನ ಹಾಗು ಮಧ್ಯಪಾನ ಮೆದುಳು ಮತ್ತು ದೇಹದ ಆರೋಗ್ಯದ ಮೇಲೆ ಕೆಟ್ಟ ಪಾರಿಣಾಮ ಬೀರುವುದರಿಂದ ದೇಹ ಖಾಯಿಲೆಗಳ ಮನೆಯಾಗುತ್ತದೆ. ಮೆದುಳು ಕ್ರಮೇಣ ಉತ್ತಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಇದರ ಪರಿಣಾಮ ಯಾವ ಕ್ಷೇತ್ರದಲ್ಲಿಯು ಅಂದುಕೊಂಡ ಮಟ್ಟಕ್ಕೆ ಸಾಧನೆ ಮಾಡಲು ದೇಹ ಮತ್ತು ಮೆದುಳು ಸಹಾಯ ಮಾಡದಿದಾಗ ಕ್ರಮೇಣ ಮನಸ್ಸು ಖಿನ್ನತೆಗೆ ಒಳಪಡುತ್ತದೆ.

ಅಪೌಷ್ಟಿಕ ಆಹಾರಗಳ ಕೊರತೆ : ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ನಂತಹ ಫಾಸ್ಟ್ ಫುಡ್ ಸರಪಳಿಗಳ ಜನಪ್ರಿಯತೆಯು ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕಾರಣ ತ್ವರಿತ ಆಹಾರವು ನಮ್ಮ ಧೈನಂದಿನ ಜೀವನದ ಭಾಗವಾಗಿದೆ. ಆದರೆ ಇಂತಹ ಪದಾರ್ಥಗಳು ಅಪೌಷ್ಟಿಕ ಆಹಾರಗಳಾಗಿದ್ದು, ಇದರಿಂದ ದೇಹದಲ್ಲಿ ದುಡಿಯುವ ಸಾಮರ್ಥ್ಯವೂ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಹಾಗೂ ಚಿಕ್ಕ ವಯಸ್ಸಿನಲ್ಲಿಯೆ ವಯಸ್ಕರು ಬಿ.ಪಿ, ಸಕ್ಕರೆ ಖಾಯಿಲೆ,ಹೃದಯಸ್ತಂಬನಕ್ಕೆ ಹೊಳಗಾಗಿ ಕ್ರಮೇಣ ಖಿನ್ನತೆಗೆ ಒಳಗಾಗುತ್ತಾರೆ.

ಕೌಶಲ್ಯ ಕೊರತೆ : ಒಬ್ಬ ವ್ಯಕ್ತಿಯ ಕಲಿಕಾ ಸಾಮರ್ಥ್ಯ ನಿಧಾನವಾದಾಗ ಆತ ಬೇರೆಯವರೊಂದಿಗೆ ತನ್ನನ್ನು ಹೋಲಿಕೆ ಮಾಡಿಕೊಂಡು ತನ್ನ ಬಗ್ಗೆ ತಾನೆ ನಿಂದಿಸಿಕೊಳ್ಳುತ್ತಾನೆ ಹಾಗು ತನ್ನ ಕೌಷಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡದೆ ಆತ್ಮಬಲ ಕಳೆದುಕೊಂಡು ಖಿನ್ನತೆಗೆ ಒಳಗಾಗುತ್ತಾನೆ. ಶ್ರೀಮಂತಿಕೆಯ ಬದುಕು ದುಡ್ಡಿಲ್ಲದವರು ದುಡ್ಡುಮಾಡುವುದರಲ್ಲಿ ನಿರತರಾಗುತ್ತಾರೆ. ಈಗಾಗಲೆ ದುಡ್ಡು ಮಾಡಿದವರು, ಜಗತ್ತಿನ ಐಶಾರಾಮಿ ಜೀವನ ನಡೆಸಿ ಕೊನೆಗೆ ಏನು ಮಾಡಬೇಕೆಂದು ತಿಳಿಯದೆ ಭ್ರಷ್ಟಚಾರಿಗಳ ಸಹವಾಸ ಸೇರಿ ದೊಡ್ಡ ಭ್ರಷ್ಟರಾಗಿ ಜಿಗುಪ್ಸೆಗೆ ಒಳಗಾಗುತ್ತಾರೆ ಹಾಗು ಗಂಭೀರ ಖಿನ್ನತೆಗೆ ಒಳಗಾಗುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುಲು ಮುಂದಾಗುತ್ತಾರೆ. ಇಂತಹವರು ಸಮಾಜೋನ್ಮುಖಿ ಕೆಲಸಗಳಲ್ಲಿ ತೊಡಗಿ ಜನರಿಗೆ ಪ್ರೇರಣೆಯಾಗಬಹುದು. ಆದರೆ, ಇಂತಹ ಒಳ್ಳೆಯ ಮನಸ್ಸು ಯಾರು ಮಾಡುತ್ತಿಲ್ಲ.

ಆರ್ಥಿಕ ಸಮಸ್ಯೆಗಳು :ಕನಸುಗಳು ಸಾವಿರವಿರುತ್ತದೆ. ಆದರೆ ಅದಕ್ಕೆ ಪೊರಕವಾಗಿ ಆರ್ಥಿಕ ಬಲವಿರುವುದಿಲ್ಲ. ಈಗಿನ ಯುವಕರು ಖಿನ್ನತೆಗೆ ಒಳಗಾಗುವ ಪ್ರಮುಖ ಕಾರಣಗಳಲ್ಲಿ ಇದು ದೊಡ್ಡದಾಗಿ ಬಿಂಬಿಸುತ್ತದೆ.

ಜೀವನವೆಂದರೆ ದುಡ್ಡು ಮಾಡುವುದೆಂಬ ತಪ್ಪು ಕಲ್ಪನೆ : ಜೀವನವೆಂದರೆ ಹೆಚ್ಚು-ಹೆಚ್ಚು ದುಡ್ಡು ಮಾಡುವುದೆಂಬ ತಪ್ಪು ಕಲ್ಪನೆಯೊಂದಿಗೆ ಬೆಳೆದ ವಾತಾವರಣದವರು ಶೇಕಡ 99.9 ಭಾಗ ಬೇಗ ಖಿನ್ನತೆಗೆ ಒಳಗಾಗುತ್ತಾರೆ ಎಂದು ಮನೊವೈದ್ಯರು ಹೇಳುತ್ತಾರೆ.

ವಿಚ್ಚೇಧನಗಳ ಆವಾಂತರಗಳು : ಈಗಿನ ಆಧುನಿಕ ಪ್ರಪಂಚದಲ್ಲಿ ವಿಚ್ಚೇಧನಗಳ ಸಂಖ್ಯೆ ಏರುತ್ತಲೆ ಇದೆ. ಪ್ರತಿ 3 ಗಂಟೆಗಳಿಗೊಮ್ಮೆ ನೋಂದಾಯಿಸಿಕೊಳ್ಳಲಾಗುತ್ತಿದೆ. ಇದು ಮಾನಸಿಕ ಹಾಗು ಆರ್ಥಿಕವಾಗಿ ಪೋಷಕರು ಹಾಗು ಮಕ್ಕಳ ಮೇಲು ಪರಿಣಾಮ ಬೀರಿ, ಮಕ್ಕಳು ಗಂಭೀರ ಖಿನ್ನತೆಗೆ ಒಳಗಾಗುತಿದ್ದಾರೆ. ಮಾನಸಿಕ ಖಿನ್ನತೆಯಿಂದ ಹೊರಬರುವುದು ಹೇಗೆ ?

ಕೆಟಮಿನ್ ಮೆಡಿಕೇಶನ್ (Ketamine Medication) :


ಇದು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಆಲೊಚನೆಯಿಂದ ಹೊರತರುತ್ತದೆ ಹಾಗು ದೇಹದಲ್ಲಿ ಚೈತನ್ಯ ತುಂಬುತ್ತದೆ.ಇದು ಒಂದು ಬಗೆಯ DRUG ಎನ್ನಲಾಗುತ್ತದೆ. ಹೆಚ್ಚು ಸೇವಿಸಿದರೆ Side Effect ಆಗುವ ಸಾಧ್ಯತೆ ಇದೆ.

ಟೆಲಿ ಆರೋಗ್ಯ ಹೆಲ್ಪ ಲೈನ್ : 080-46901234
ಖಿನ್ನತೆಗೆ ಒಳಗಾದವರಿಗೆ ಅದರಿಂದ ಹೊರಬರಲು ಉಚಿತವಾಗಿ ಸಲಹೆ
ನೀಡಲಾಗುತ್ತದೆ.
• ಆಪ್ತರೊಂದಿಗೆ ತಮ್ಮ ಭಾವನೆಗಳನ್ನು ,ಒತ್ತಡಗಳನ್ನು ಹೇಳಿಕೊಳ್ಳುವುದು.
• ನಿಯಮಿತವಾಗಿ ಯೋಗಾಭ್ಯಾಸ,ಪ್ರಾಣಯಾಮ,ಧ್ಯಾನ ಮಾಡುವುದು ಅಥವಾ ಈ ಮೂರರಲ್ಲಿ ಯಾವುದಾದರು ಒಂದನ್ನು ಬಿಡದೆ ಅಭ್ಯಾಸ ಮಾಡುವುದು.
• ಅಸಹಾಯಕರಿಗೆ ಸಹಾಯ ಮಾಡುವುದು – ಇದರಿಂದ ನಿಮ್ಮಲ್ಲಿ ಚೈತನ್ಯ ಹುಟ್ಟುತ್ತದೆ.
• ಕಾಯಿಸಿ ಹಾರಿಸಿದ ನೀರು ಕುಡಿಯುವುದು ಹಾಗು ಪೌಷ್ಟಿಕ ಆಹಾರ ಸೇವಿಸುವುದು.
• ಕಲಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು.

  • ರಮಿತ ಕಾಮನಾಯಕನಹಳ್ಳಿ

Latest News

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.