New Delhi : ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಪಿಎಫ್ಐ(PFI) ಮತ್ತು ಅದರ ಎಂಟು ಸಹವರ್ತಿ ಸಂಸ್ಥೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದೆ.

ಇತ್ತೀಚೆಗೆ ದೇಶಾದ್ಯಂತ ಅನೇಕ ಕಡೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶ ಪಡೆಸಿಕೊಂಡ ರಾಷ್ಟ್ರೀಯ ತನಿಖಾ ಸಂಸ್ಥೆ, ಪಿಎಫ್ಐ ಮತ್ತು ಅದರ ಎಂಟು ಸಹವರ್ತಿ ಸಂಸ್ಥೆಗಳನ್ನು ನಿಷೇಧಿಸುವಂತೆ ಕೇಂದ್ರ ಗೃಹ ಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸಿನ ನೆರವು ಮತ್ತು ನಿಧಿ ಸಂಗ್ರಹದ ಆರೋಪವನ್ನು ಪಿಎಫ್ಐ ಮೇಲೆ ಹೋರಿಸಲಾಗಿದೆ.
ಇದನ್ನೂ ಓದಿ : https://vijayatimes.com/team-india-faces-south-africa/
ಪಿಎಫ್ಐನ ಸಹವರ್ತಿ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್, ಕೇರಳ ಸಂಸ್ಥೆಗಳನ್ನು ನಿಷೇಧಿಸಲಾಗಿದೆ.

ಈ ಕುರಿತು ಟ್ವೀಟ್(Tweet) ಮಾಡಿರುವ ಬಿಜೆಪಿಯ(BJP) ರಾಷ್ಟ್ರೀಯ ವಕ್ತಾರ(Spokesperson) ಶೆಹಜಾದ್ ಪೂನವಾಲಾ(Shehjad Poonawala) ಅವರು, “ಕೇಂದ್ರ ಸರ್ಕಾರ, ಐದು ವರ್ಷಗಳ ಅವಧಿಗೆ ಪಿಎಫ್ಐ ಅನ್ನು ನಿಷೇಧಿಸಿರುವುದು ದೃಢ ಮತ್ತು ಸಮಯೋಚಿತ ಕ್ರಮ. ಆದರೆ ಈ ಹಿಂದೆ ಕಾಂಗ್ರೆಸ್, ಎಸ್ಪಿ.
ಇದನ್ನೂ ಓದಿ : https://vijayatimes.com/par-act-on-pfi-workers/
ಆರ್ಜೆಡಿ ಪಕ್ಷಗಳು ಮತಬ್ಯಾಂಕ್(Vote Bank) ಹೆಸರಿನಲ್ಲಿ ಭಯೋತ್ಪಾದನೆಗೆ ರಾಜಕೀಯ ಪ್ರೋತ್ಸಾಹವನ್ನು ನೀಡಿವೆ”. ಎಂದಿದ್ದಾರೆ. ಇನು ಸೆಪ್ಟೆಂಬರ್ 22ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಅಸ್ಸಾಂ, ಮಧ್ಯಪ್ರದೇಶದ ರಾಜ್ಯಗಳ 93 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಸುಮಾರು 106 ಪಿಎಫ್ಐ ಸದಸ್ಯರು ಬಂಧಿಸಲಾಗಿತ್ತು.
- ಮಹೇಶ್.ಪಿ.ಎಚ್