Row after row of complaints about Ola Electric Scooties, notice to company from central committee
New Delhi: ಓಲಾ ಎಲೆಕ್ಟ್ರಿಕ್ (Ola Electric) ವಾಹನಗಳ ಮೇಲೆ ಬಹಳ ದಿನಗಳಿಂದ ಬೆಳ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ ಗ್ರಾಹಕರ ಮನವಿಗೆ ಸ್ಪಂದಿಸಿದೆ ಓಲಾ ಎಲೆಕ್ಟ್ರಿಕ್ ಸಂಸ್ಥೆಯು ನುಣಚಿ ಕೊಳ್ಳುತ್ತಿತ್ತು. ಆದರೆ ಈದೀಗ ಓಲಾ ಎಲೆಕ್ಟ್ರಿಕ್ನ ಸೇವಾ ಸಮಸ್ಯೆಗಳಿಗೆ ಸಂಬಂಧಿಸಿದ ಗ್ರಾಹಕರ ದೂರುಗಳನ್ನು ಪರಿಹರಿಸಲು ಕೇಂದ್ರವು ಮಧ್ಯ ಪ್ರವೇಶಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕದ ವಿರುದ್ಧ ಸಾವಿರಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ (October) 3 ರ ದಿನಾಂಕದ ನೋಟೀಸ್, Ola ಎಲೆಕ್ಟ್ರಿಕ್ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಹಲವಾರು ನಿಬಂಧನೆಗಳನ್ನು ಉಲ್ಲಂಘಿಸಿರಬಹುದು ಎಂದು ಸೂಚಿಸುತ್ತದೆ, ಇದರಲ್ಲಿ ಸೇವಾ ಕೊರತೆಗಳು, ದಾರಿತಪ್ಪಿಸುವ ಜಾಹೀರಾತುಗಳು, ಕೆಟ್ಟ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಳು ಸೇರಿವೆ.
15 ದಿನಗಳ ಒಳಗಾಗಿ ಈ ನೋಟಿಸ್ಗೆ (Notice) ಉತ್ತರ ನೀಡಬೇಕು ಎಂದು ತಿಳಿಸಲಾಗಿದೆ. ಇನ್ನು 2023 ಸೆಪ್ಟೆಂಬರ್ 1 ಮತ್ತು 2024 ಆಗಸ್ಟ್ 30ರ ನಡುವೆ, ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು ಓಲಾ ಇ-ಸ್ಕೂಟರ್ಗಳಿಗೆ ಸಂಬಂಧಿಸಿದ 10,644 ದೂರುಗಳನ್ನು ದಾಖಲಿಸಿದೆ. ಇವುಗಳಲ್ಲಿ, 3,389 ಪ್ರಕರಣಗಳು ಸೇವೆಯಲ್ಲಿ ವಿಳಂಬವನ್ನು ಒಳಗೊಂಡಿವೆ, ಆದರೆ 1,899 ವಿತರಣಾ ವಿಳಂಬಕ್ಕೆ ಸಂಬಂಧಿಸಿವೆ ಮತ್ತು 1,459 ಪೂರೈಸದ ಸೇವಾ ಭರವಸೆಗಳನ್ನು ಸುಳ್ಳು ಮಾಡಿವೆ.
ವಾಹನಗಳಲ್ಲಿನ ಉತ್ಪಾದನಾ ದೋಷಗಳು, ಮಾರಾಟವಾಗುತ್ತಿರುವ ಸೆಕೆಂಡ್ ಹ್ಯಾಂಡ್ ಸ್ಕೂಟರ್ಗಳು (Second Hand Scooter), ರದ್ದಾದ ಬುಕಿಂಗ್ಗಳಿಗೆ ಮರುಪಾವತಿಯ ಕೊರತೆ, ಸೇವೆಯ ನಂತರ ಮರುಕಳಿಸುವ ಸಮಸ್ಯೆಗಳು, ಓವರ್ಚಾರ್ಜ್, ಬಿಲ್ಲಿಂಗ್ ವ್ಯತ್ಯಾಸಗಳು ಮತ್ತು ಬ್ಯಾಟರಿಯಲ್ಲಿ (Battery) ಆಗಾಗ್ಗೆ ಸಮಸ್ಯೆಗಳು ಸೇರಿದಂತೆ ಹಲವಾರು ಗ್ರಾಹಕರ ಕುಂದುಕೊರತೆಗಳ ಆಲಿಸಿ ಪರಿಹಾರ ನೀಡಬೇಕಾಗಿ ನೋಟಿಸ್ (Notice) ಹೊರಡಿಸಿವೆ. ಹೆಚ್ಚುವರಿ ದೂರುಗಳು ವೃತ್ತಿಪರವಲ್ಲದ ನಡವಳಿಕೆ ಮತ್ತು ಬಗೆಹರಿಯದ ಸಮಸ್ಯೆಗಳನ್ನು ಸೂಚಿಸುತ್ತಿವೆ .
ಅಲ್ಲದೆ ಓಲಾ ಎಲೆಕ್ಟ್ರಿಕ್ ಗ್ರಾಹಕ ಸಂರಕ್ಷಣಾ ಕಾಯ್ದೆಯ ಬಹು ಅಂಶಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಇನ್ನು ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓಲಾ ಕಂಪನಿಯ ಷೇರುಗಳು ಇಂದು ಸುಮಾರು 9 ಪ್ರತಿಶತದಷ್ಟು ಕುಸಿದು 90.26 ರೂ.ಗೆ ತಲುಪಿದೆ.