New York: ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್(Mixed Martial Arts) ಪಟು ವಿಕ್ಟೋರಿಯಾ ಲೀ (Victoria Lee) ಅವರು ತಮ್ಮ 18ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಆಕೆಯ ಸೋದರಿ ಏಂಜೆಲಾ
ನಿನ್ನೆ ಇನ್ಸ್ಟಾಗ್ರಾಮ್ ನಲ್ಲಿ ಈ ದುಃಖಕರ ಮಾಹಿತಿ ಖಚಿತಪಡಿಸಿದ್ದಾರೆ. ಆದರೆ ಇವರ ಸಾವು ಹೇಗೆ ಸಂಭವಿಸಿದೆ ಎಂಬುದಕ್ಕೆ ನಿಕರವಾದ ಕಾರಣ ಇನ್ನು ಸಿಗಲ್ಲಿಲ್ಲ.

ವಿಕ್ಟೋರಿಯಾ ಲೀ ಅವರ ಸಾಧನೆ :
ಉತ್ತರ ಅಮೆರಿಕಾದ ಹವಾಯಿನಲ್ಲಿ (Hawaii) ಜನಿಸಿದರು. ಇವರ ತಂದೆ ಕೆನ್ ಲೀ (Ken Lee) ಹಾಗೂ ತಾಯಿ ಜುವೆಲ್ಜ್ ಲೀ,
ವಿಕ್ಟೋರಿಯಾ ಗೆ ಇಬ್ಬರೂ ಸಹೋದರಿಯರಿದ್ದಾರೆ. ಇವರ ಕುಟುಂಬವು ಮೂಲತ: ಉತ್ತರ ಅಮೆರಿಕಾ ಆಗಿದ್ದರೂ ಸಹ ತಮ್ಮ ವೃತ್ತಿ ಜೀವನವನ್ನು ಸಿಂಗಾಪುರ್ ನಲ್ಲಿ ಪ್ರಾರಂಭಿಸಿದರು.
ವಿಕ್ಟೋರಿಯಾ ಲೀ ಅವರ ಪೋಷಕರು ತಮ್ಮ ಮಕ್ಕಳಿಗೆ ಮಿಶ್ರ ಸಮರ ಕಲೆಗಳ (Mixed martial arts)
ವಿದ್ಯಾಭ್ಯಾಸವನ್ನು ನೀಡುವುದರ ಜೊತೆ ಜೊತೆಗೆ, ಕ್ರೀಡಾ ವೃತ್ತಿ ಜೀವನವನ್ನು ಅಳವಡಿಸಿಕೊಂಡರು.
ವಿಕ್ಟೋರಿಯಾ 2021ರಲ್ಲಿ ತಮ್ಮ ಕ್ರೀಡಾ ವೃತ್ತಿ ಜೀವನಕ್ಕೆ ಕಾಲಿಟ್ಟರು ತದನಂತರ ಒಂದರ ಮೇಲನಂತೆ ಒಂದು ಗೆಲುವನ್ನು ಸಾಧಿಸುತ್ತ, ಮೂರು ಸರಣಿ ಗೆಲುವನ್ನು ದಾಖಲಿಸಿದ್ದಾರೆ.
ಇದನ್ನೂ ಓದಿ : https://vijayatimes.com/kumaraswamy-against-to-siddaramaiah/
ಇದರಿಂದ ದಿ ಪ್ರಾಡಿಜಿ (The Prodigy) ಎಂಬ ಖ್ಯಾತಿಯನ್ನು ಗಿಟ್ಟಿಸಿಕೊಂಡರು. ಆ ನಂತರದಲ್ಲಿ ಯುವ ಆಟಗಾರ್ತಿ ವಿಕ್ಟೋರಿಯಾ ಅವರಿಗೆ ದಿ ಪ್ರಾಜಿಡಿ ಎಂಬ ಅಡ್ಡ ಹೆಸರು ಬಂದಿದೆ.
ದಿ ಪ್ರಾಜಿಡಿ (ವಿಕ್ಟೋರಿಯಾ ಲೀ) ರವರ ಸಹೋದರಿಯರು ಎಂಎಂಎನಲ್ಲಿ (MMA) ಪದವಿ ಪಡೆಯುವ ಮೊದಲೇ,
ಮಾಡರ್ನ್ ಪಾಂಕ್ರೇಶನ್ (Modern pankration) ನಲ್ಲಿ ಜ್ಯೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆದರು.
ಈಗಾಗಲೇ ಒನ್ ಚಾಂಪಿಯನ್ ಶಿಪ್‌ನಲ್ಲಿ ಈಕೆಯ ಇಬ್ಬರು ಹಿರಿಯ ಸಹೋದರಿಯರು ಆಯ್ಕೆ ಆಗಿದ್ದಾರೆ.
ಈಕೆಯ ತಂದೆ ಕೆನ್ ಲೀ ಪ್ರಸ್ತುತ ಹವಾಯಿಯಲ್ಲಿ ಯುನೈಟೆಡ್ ಎಂಎಂಎ ಜಿಮ್‌ನ ಮಾಲೀಕರಾಗಿ ಹಾಗು ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ
ಅವರ ಮೂರು ಮಕ್ಕಳಿಗೂ ಸಹ ತರಬೇತಿ ನೀಡುತ್ತಾರೆ.
ಬ್ರೆಜಿಲಿಯನ್ ನಲ್ಲಿ ನಡೆದ ಜಿಯು-ಜಿಟ್ಸುನಲ್ಲಿ ವಿಕ್ಟೋರಿಯಾ ಅವರು ಮೊದಲ ಚಾಂಪಿಯನ್ ಆಗಿ ಕಪ್ಪು ಬೆಲ್ಟ್ (Black belt) ಪಡೆದಿದ್ದಾರೆ.

ಅದಲ್ಲದೆ ಮೂರು ವಿಭಿನ್ನ ಸಮರ ಕಲೆಗಳಲ್ಲಿಯು ಕಪ್ಪು ಬೆಲ್ಟ್ ನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಿಶ್ರ ಸಮರ ಕಲೆಯ ಹಿನ್ನೆಲೆ ಈ ಕುಟುಂಬಕಕ್ಕೆ ಇದ್ದುದರಿಂದ ಕಳೆದ 12 ತಿಂಗಳಿಂದ ನಿರಂತರವಾಗಿ ವಿಕ್ಟೋರಿಯಾ ಲೀ ಈ ಮಿಕ್ಸ್‌ಡ್ ಮಾರ್ಷಲ್ ಕಲೆಯಲ್ಲಿ ಕ್ಷಿಪ್ರ ಗತಿಯಲ್ಲಿ ಸಾಧನೆ ಮಾಡಿದ್ದಾರೆ.
ಇವರ ವಿಶೇಷ ಸಾಧನೆ ಎಂತದ್ದು ಅಂದರೆ ವಿಕ್ಟೋರಿಯಾಳ ಇಬ್ಬರು ಸಹೋದರಿಯರಾದ ಏಂಜೆಲಾ (Angela) ಹಾಗೂ ಕ್ರೀಸ್ಟೋಫರ್ (Christopher) ಒನ್ ಚಾಂಪಿಯನ್‌ಶಿಪ್
ಗೆಲುವು ಸಾಧಿಸಿರುದಲ್ಲದೆ ಅವರಂತೆ ಲೀ ಕೂಡ ಒನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ ಬಹಳಷ್ಟು ಸಲ ಗೆಲುವನ್ನು ಮುಡಿಗೇರಿಸಿಕೊಂಡಿರುವ ಹೆಗ್ಗಳಿಕೆ ಈ ಕುಟುಂಬಕ್ಕಿದೆ.
ಇದನ್ನೂ ಓದಿ : https://vijayatimes.com/siddhu-haunted-fear-of-defeat/
ಈ ಅನುಭವವನ್ನು ಏಂಜೆಲಾ ಲೀ 2016 ರಲ್ಲಿ ಫೇಸ್‌ಬುಕ್ ಪೋಸ್ಟ್‌ನಲ್ಲಿ(Facebook post) “ನನ್ನ ಸಿಂಗಾಪುರದ ಬೇರುಗಳು ನನ್ನೊಳಗೆ ಆಳವಾಗಿ ನೆಲೆಸಿದೆ,
ಅದಲ್ಲದೆ ನಾನು ಯಾರೆಂಬುದನ್ನು ಈ ಸಿಂಗಾಪುರವೇ ರೂಪಿಸಿ ಕೊಡುತ್ತದೆ.
ನನ್ನ ಸಂಸ್ಕೃತಿ ಹಾಗೂ ನನ್ನ ಕುಟುಂಬವನ್ನು ಎಲ್ಲೆಡೆ ಪರಿಚಯಿಸುವುದಕ್ಕೆ ನನಗೆ ತುಂಬಾ ಹೆಮ್ಮೆ ಅನ್ನಿಸುತ್ತಿದೆ.
ಈ ಕಾರಣಕ್ಕಾಗಿಯೇ ಸಿಂಗಾಪುರವನ್ನು ಪ್ರತಿನಿಧಿಸಲು ನಾನು ಹೆಮ್ಮೆಪಡುತ್ತೇನೆ!
ಎಂದು ಬರೆದು ಈ ರೀತಿ ಹಂಚಿಕೊಂಡಿದ್ದರು. ಡಿಸೆಂಬರ್ 26 ರಂದು ನಮ್ಮ ಕುಟುಂಬವೂ ಎಂದೂ ಅನುಭವಿಸದ ನೋವನ್ನು ಅನುಭವಿಸಿದೆ.
ಇದನ್ನು ಹೇಳುವುದಕ್ಕೆ , ನಂಬುವುದಕ್ಕೆ ಕಷ್ಟವಾಗುತ್ತಿದೆ. ನಮ್ಮ ವಿಕ್ಟೋರಿಯಾ ಹೊರಟು ಹೋದಳು ಎಂದು ವಿಕ್ಟೋರಿಯಾಳ
ಸಹೋದರಿ ಏಂಜೆಲಾ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ(Instagram) ಬರೆದು ನಿನ್ನೆ ಪೋಸ್ಟ್ ಮಾಡಿದ್ದಾರೆ.
- ಪಂಕಜಾ.ಎಸ್