ಸತ್ತವನು ಮತ್ತೆ ಎದ್ದುಬರುವ ವಿಚಿತ್ರ ಹಬ್ಬವನ್ನು ಚಾಮರಾಜನಗರ(Chamarajnagar) ಜಿಲ್ಲೆ ಕೊಳ್ಳೇಗಾಲ(Kollegal) ತಾಲೂಕಿನ ಪಾಳ್ಯ(Palya) ಗ್ರಾಮದಲ್ಲಿ ಆಚರಿಸಲಾಗುತ್ತದೆ.
ಗ್ರಾಮದ ಸೀಗಮಾರಮ್ಮ ಬಲಿ ಹಬ್ಬದಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ಇನ್ನು ೧೯ ವರ್ಷಗಳ ಬಳಿಕ ನಡೆಯುತ್ತಿರುವ ಸೀಗಮಾರಮ್ಮ ಬಲಿ ಹಬ್ಬದ ಸಂದರ್ಭದಲ್ಲಿ ಒರ್ವ ವ್ಯಕ್ತಿ ಸತ್ತು ಬೀಳುತ್ತಾನೆ. ತದನಂತರ ಆತನ ಶವವನ್ನು ಊರತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತೆ. ಮೆರವಣಿಗೆ ವೇಳೆ ಶವವನ್ನು ಎಸೆದಾಡಲಾಗುತ್ತೆ. ಸತತ ಒಂಭತ್ತು ತಾಸು ಆತನ ಉಸಿರಾಟ ನಿಂತುಹೋಗಿರುತ್ತೆ, ಅರ್ಥಾತ್ ಬಲಿಯಾಗಿರುತ್ತಾನೆ ಎಂಬ ನಂಬಿಕೆ ಗ್ರಾಮದವರದು.
ಬಲಿ ಬೀಳುವ ವ್ಯಕ್ತಿಯ ಎದೆ ಮೇಲೆ ಮಧ್ಯೆ ರಾತ್ರಿ ೧೨ ಗಂಟೆ ವೇಳೆಗೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದ ಅರ್ಚಕ ಕಾಲಿಟ್ಟರೇ ಪ್ರಾಣ ಹೋಗುತ್ತೆ ಎಂಬ ನಂಬಿಕೆಯಿದೆ. ಪ್ರಾಣ ಹೋಗಿ ನಿಷ್ಕ್ರಿಯವಾದ ವ್ಯಕ್ತಿಯನ್ನು ಗ್ರಾಮಸ್ಥರು ಬಲಿಪೀಠಕ್ಕೆ ಕೊಂಡೊಯ್ಯುತ್ತಾರೆ. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಾರೆ. ಆದರೆ ಹೀಗೆ ಬಲಿಬಿದ್ದ ವ್ಯಕ್ತಿಗೆ ಮತ್ತೆ ಮರುಜೀವ ಬರುತ್ತದೆ. ಬೆಳಿಗ್ಗೆ ೯ ಗಂಟೆ ವೇಳೆಗೆ ಒಳಗೆರೆ ಹುಚ್ಚಮ್ಮ ದೇವತೆ ಮೈಮೇಲೆ ಬಂದ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆಯಿಂದ ಮರುಜೀವ ಬರುತ್ತದೆ.
ಇನ್ನು ವಿಚಿತ್ರವೆಂದರೆ ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಜೀವಮಾನದಲ್ಲಿ ಮನೆಬಿಟ್ಟು ಹೊರಗೆ ಊಟ ತಿಂಡಿ ಮಾಡುವಂತಿಲ್ಲ. ಅದೇ ರೀತಿ ೨೪ ದಿನಗಳ ಕಾಲ ನಡೆಯುವ ಸೀಗಮಾರಮ್ಮನ ಈ ಹಬ್ಬ ವೇಳೆಯಲ್ಲಿ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ, ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ೨೪ ದಿನಗಳ ಅವಧಿಯಲ್ಲಿ ಮದುವೆ ಸೇರಿದಂತೆ ಯಾವುದೇ ಶುಭಕಾರ್ಯಗಳನ್ನು ಮಾಡುವುದಿಲ್ಲ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಾಣೆ ಮಾಡಿ ಧಪನ್ ಮಾಡುತ್ತಾರೆ.