VIJAYVADA : ಎನ್. ಚಂದ್ರಬಾಬು ನಾಯ್ಡು (ChandraBabu 2024 last election) ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಹಿಂದುಳಿದ ಸಮುದಾಯಗಳಿಗೆ ಏನನ್ನೂ ಮಾಡಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ಆರೋಪಿಸಿದ್ದಾರೆ.
2024 ರ ಚುನಾವಣೆಯು ಟಿಡಿಪಿ ಮುಖ್ಯಸ್ಥರು ಹೋರಾಡುವ ಕೊನೆಯ ಚುನಾವಣೆ ಇದಾಗಲಿದೆ ಎಂದು ಹೇಳಿದ್ದಾರೆ.

ಬುಧವಾರ ನಡೆದ ಜಯಹೋ ಮಹಾಸಭಾದಲ್ಲಿ ಪಾಲ್ಗೊಳ್ಳಲು ವಿಜಯವಾಡದಲ್ಲಿ (ChandraBabu 2024 last election) ಜಮಾಯಿಸಿದ್ದ 175 ಕ್ಷೇತ್ರಗಳ ಹಿಂದುಳಿದ ವರ್ಗಗಳ ಜನರನ್ನು ಉದ್ದೇಶಿಸಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ,
“2024 ರಲ್ಲಿ, ನಾವು ಹಿಂದುಳಿದ ಸಮುದಾಯಗಳ ಬಗ್ಗೆ ಹಿಂಜರಿಯುವ ದುಷ್ಟಚತುಷ್ಟ್ಯದ ವಿರುದ್ಧ ಹೋರಾಡಲಿದ್ದೇವೆ.
ಇದನ್ನೂ ನೋಡಿ : https://fb.watch/hg6V8u-g2y/
ಮುಂದಿನ ಒಂದುವರೆ ವರ್ಷ ಅಂದ್ರೆ 18 ತಿಂಗಳಲ್ಲಿ ನ್ಯಾಯ, ಕಲ್ಯಾಣ, ಪ್ರಾಮಾಣಿಕತೆ, ಸಮಾಜ ಸುಧಾರಣೆಗಳ ಪರ ನಿಲ್ಲುವವರು ಮತ್ತು ಅನ್ಯಾಯ,
ದುಷ್ಟ ಮತ್ತು ಭ್ರಷ್ಟಾಚಾರದ ಪರ ನಿಂತಿರುವ ಚಂದ್ರಬಾಬು ನಾಯ್ಡು ನಡುವೆ ಚುನಾವಣೆ ನಡೆಯಲಿದೆ ಎಂದು ಆಂಧ್ರ ಸಿಎಂ ಜಗನ್ ರೆಡ್ಡಿ ಹೇಳಿದ್ದಾರೆ.
2014ರಲ್ಲಿ ಚಂದ್ರಬಾಬು ನಾಯ್ಡು ಅವರು ಹಿಂದುಳಿದ ವರ್ಗಗಳಿಗೆ 114 ಭರವಸೆಗಳನ್ನು ನೀಡಿದ್ದರು. ಆದರೆ ಅದರಲ್ಲಿ ಶೇ.10ರಷ್ಟು ಭರವಸೆಗಳನ್ನು ಕೂಡ ಅವರು ಈಡೇರಿಸಿಲ್ಲ.
ಕೃಷಿ ಸಾಲ ಮನ್ನಾ ಯೋಜನೆ, ಡೋಕ್ರಾ ಮಹಿಳೆಯರಿಗೆ ಯೋಜನೆ, ಕೆಜಿಯಿಂದ ಪಿಜಿ ಶುಲ್ಕ ಮರುಪಾವತಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಐಪ್ಯಾಡ್ ನೀಡುವುದಾಗಿ ಭರವಸೆ ನೀಡಿದ್ದರು.

ಅವರ ಸರ್ಕಾರ ಬಿಸಿ ಉಪ ಯೋಜನೆಗೆ 10,000 ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರೂ ಅವರು ಯಾವುದನ್ನು ಮಾಡಲಿಲ್ಲ, ಮಾಡುವಲ್ಲಿ ಯಶಸ್ವಿಯಾಗಿಲ್ಲ!
ವೈಎಸ್ಆರ್ಸಿಪಿ ಸರ್ಕಾರದ ಅಡಿಯಲ್ಲಿ, BC ಎಂದರೆ ಬಾಬು ವರ್ಗ ಅಥವಾ ವ್ಯಾಪಾರ ವರ್ಗ ಎಂದು ಅರ್ಥವಲ್ಲ,
ಅದು ಬೆನ್ನೆಲುಬು ವರ್ಗವನ್ನು ಪ್ರತಿನಿಧಿಸುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ಪ್ರತ್ಯೇಕವಾಗಿ ಒತ್ತಿ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ ವೈಎಸ್ಆರ್ಸಿಪಿ ವರಿಷ್ಠರು,
“ಶಾಲೆಗಳಲ್ಲಿ ವಸತಿ ಯೋಜನೆ ಮತ್ತು ಇಂಗ್ಲಿಷ್ ಮಾಧ್ಯಮಕ್ಕಾಗಿ ಟಿಡಿಪಿ ನ್ಯಾಯಾಲಯದ ಮೊರೆ ಹೋಗಿತ್ತು.
ಇದನ್ನೂ ಓದಿ : https://vijayatimes.com/shiv-sena-smeared-karnataka-buses/
ರಾಜ್ಯದಲ್ಲಿ ಎಲ್ಲ ಪ್ರದೇಶಗಳ ಅಭ್ಯುದಯಕ್ಕಾಗಿ ಮೂರು ರಾಜಧಾನಿಗಳನ್ನು ತಂದಿದ್ದೇವೆ. ಆದರೆ ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನಮ್ಮದು ಸಾಮಾಜಿಕ ನ್ಯಾಯದ ಪಕ್ಷವಾಗಿದ್ದರೂ, ಟಿಡಿಪಿ ಸಾಮಾಜಿಕ ಅನ್ಯಾಯದ ಪರವಾಗಿ ನಿಂತಿದೆ” ಎಂದು ಹೇಳಿದ್ದಾರೆ.