ತುಳುನಾಡಿನ ಕುವರ, ಕಿರಿಕ್ ಪಾರ್ಟಿಯ ಮುದ್ದು ಹುಡುಗ, ಸಿಂಪಲ್ಲಾಗಿ ಕಥೆ ಹೇಳುವ ಸಿಂಪಲ್ ಸ್ಟಾರ್(Simple Star) ನಟ(Actor) ರಕ್ಷಿತ್ ಶೆಟ್ಟಿ(Rakshith Shetty) ಪ್ರಥಮ ಬಾರಿಗೆ ಶ್ವಾನದೊಟ್ಟಿಗೆ ಅಭಿನಯದ ಸಿನಿಮಾ ಚಾರ್ಲಿ 777(Charlie 777). ಇದೊಂದು ಸಿನಿಮಾ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿರುವ ಸಿನಿಮಾವಾಗಿದೆ. ಹೌದು, ಯಾಕೆ ಚಾರ್ಲಿ 777 ಸಿನಿಮಾ ಇಷ್ಟೊಂದು ಕುತೂಹಲ ಕೆರಳಿಸಿದೆ? ಸಿನಿಪ್ರೇಕ್ಷಕರು ಯಾಕೆ ನಿರೀಕ್ಷೆಯಿಟ್ಟುಕೊಂಡಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಈಗಾಗಲೇ ದೊರೆತಿದೆ. ಅದೇನು ಅಂತೀರಾ ಇಲ್ಲಿದೆ ಉತ್ತರ ಮುಂದೆ ಓದಿ.

ಚಾರ್ಲಿ 777 ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ನಾಯಕಿಗಿಂತ ಪ್ರಮುಖ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಚಾರ್ಲಿ ಎಂಬ ನಾಯಿ. ಹೌದು, ಈ ಸಿನಿಮಾದಲ್ಲಿ ಪ್ರೇಕ್ಷಕರ ಗಮನವನ್ನು ಸೆಳೆಯುವುದು ಚಾರ್ಲಿ ಮಾತ್ರ ಎಂಬ ಸುಳಿವು ಪ್ರೇಕ್ಷಕನಿಗೆ ತಿಳಿದ ಸಂಗತಿಯಾಗಿದೆ. ಕನ್ನಡ ಚಾರ್ಲಿ 777 ಸಿನಿಮಾವೂ ರಕ್ಷಿತ್ ಶೆಟ್ಟಿ ಅವರ ಬಹಳ ದಿನಗಳ ಶ್ರಮವಾಗಿದ್ದು, ಕಳೆದ ವರ್ಷವೇ ಚಾರ್ಲಿ 777 ಬಿಡುಗಡೆಯಾಗಬೇಕಿತ್ತು, ಆದ್ರೆ ತಾಂತ್ರಿಕ ದೋಷದಿಂದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು.

ಈ ಕುರಿತು ಪ್ರೇಕ್ಷಕರು ಮತ್ತು ರಕ್ಷಿತ್ ಅವರ ಅಭಿಮಾನಿಗಳು `ಚಾರ್ಲಿ’ಯನ್ನು ಯಾವಾಗ ಕರೆತರುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಸದ್ಯ ಆ ಪ್ರಶ್ನೆಗಳಿಗೆಲ್ಲಾ ಈಗ ಉತ್ತರ ದೊರಕಿದೆ. ನಟ ರಕ್ಷಿತ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಚಾರ್ಲಿ 777 ಸಿನಿಮಾ ಬಿಡುಗಡೆಯ ದಿನಾಂಕವನ್ನು ಇದೇ ಏಪ್ರಿಲ್ 10 ರಂದು ಅನಾವರಣಗೊಳಿಸಲಿದ್ದೇವೆ ಎಂದು ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.