Hassan : ಜೈನರ ತೀರ್ಥಕ್ಷೇತ್ರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ (Charukeerthi Bhattarak) ಶ್ರೀಗಳು ಇಂದು ನಿಧನರಾಗಿದ್ದಾರೆ. 1949ರ ಮೇ 3ರಂದು ಕಾರ್ಕಳದ ವರಂಗ ಗ್ರಾಮದಲ್ಲಿ ಜನಿಸಿದ (Charukeerthi Bhattarak strange facts) ಶ್ರೀಗಳು, 1970ರಲ್ಲಿ ಮಠದ ಪೀಠಾಧಿಪತಿಗಳಾಗಿ ನೇಮಕಗೊಂಡಿದ್ದರು.
ಅವರ ಪೂರ್ವಾಶ್ರಮದ ಹೆಸರು ರತ್ನವರ್ಮ(Rathnavarma). ಚಾರುಕೀರ್ತಿ ಭಟ್ಟಾರಕ ಶ್ರೀಗಳೆಂದು ಪೀಠಾಧ್ಯಕ್ಷರಾದ ಮೇಲೆ ಅವರ ಮಾಡಿದ ಸಾಧನೆ ಅಪಾರವಾದದು.
ನಾಡಿನ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮತ್ತು ಜೈನ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣಿಯವಾದದು. ಶ್ರೀಗಳ ಅಧ್ಯಾತ್ಮಿಕ ಜೀವನದ ಕೆಲ ಅಪರೂಪದ ಸಂಗತಿಗಳ ವಿವರ ಇಲ್ಲಿದೆ ನೋಡಿ.
• ಚಾರುಕೀರ್ತಿ ಭಟ್ಟಾರಕ ಶ್ರೀಗಳು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ (Philosphy) ಸ್ನಾತಕೋತ್ತರ ಪದವಿ ಗಳಿಸಿದ್ದ ಅವರು ಬಳಿಕ
ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.
• ಚಾರುಕೀರ್ತಿ ಭಟ್ಟಾರಕ ಶ್ರೀಗಳು ಪ್ರಾಕೃತ, ಸಂಸ್ಕೃತ , ಕನ್ನಡ ಮತ್ತು ಇಂಗ್ಲೀಷ್ಭಾಷೆಗಳ ಮೇಲೆ ಅಪಾರ (Charukeerthi Bhattarak strange facts) ಪ್ರಭುತ್ವ ಮತ್ತು ಪರಿಣತಿ ಹೊಂದಿದ್ದರು.
• 12 ವರ್ಷ ವಾಹನ ಸಂಚಾರವನ್ನೇ ಮಾಡದೆ ದವಳ ಮತ್ತು ಜಯದವಳ ಆಗಮ ಗ್ರಂಥ ರಚನೆ ಮಾಡಿದ್ದರು.
• ಚಾರುಕೀರ್ತಿ ಭಟ್ಟಾರಕ ಶ್ರೀಗಳು ತಮ್ಮ ಜೀವನಮಾನದಲ್ಲಿ ಎಂದಿಗೂ ಮೊಬೈಲ್ಬಳಕೆ ಮಾಡಲಿಲ್ಲ.
• ಜೈನ (Jain) ಸಾಹಿತ್ಯವು ಪ್ರಾಕೃತ ಭಾಷೆಯಲ್ಲೇ ಹೆಚ್ಚು ರಚನೆಯಾಗಿರುವುದರಿಂದ ಶ್ರೀಗಳು ವಿಶೇಷ ಆಸಕ್ತಿವಹಿಸಿ ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದರು.
• 1981ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಭಿಷೇಕಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರಿಂದ “ಕರ್ಮಯೋಗಿ”(Karmayogi) ಎಂಬ ಬಿರುದು ಪಡೆದಿದ್ದರು.
• 620 ವರ್ಷಗಳ ನಂತರ ಮೊದಲ ಬಾರಿಗೆ ನಾಲ್ಕು ಮಹಾಮಸ್ತಭಿಷೇಕಗಳನ್ನು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ಚಾರುಕೀರ್ತಿ ಭಟ್ಟಾರಕ ಶ್ರೀಗಳಿಗೆ ಸಲ್ಲುತ್ತದೆ.
• ಹೊಯ್ಸಳ (Hoyasala) ವಂಶದ ದೊರೆಗಳು ಜೈನಯತಿಗಳಿಗೆ ನೀಡುತ್ತಿದ್ದ “ಚಾರುಕೀರ್ತಿ” ಎಂಬ ಪಟ್ಟವನ್ನು ಇವರಿಗೂ ನೀಡಲಾಗಿತ್ತು.
• ಚಾರುಕೀರ್ತಿ ಭಟ್ಟಾರಕ ಶ್ರೀಗಳಿಗೆ ಪೀಠಕ್ಕೆ ಬಂದು ಅರ್ಧ ಶತಮಾನವೇ ಕಳೆದರು, ಅವರು ಯಾವುದೇ ಚರ್ಚೆ ಟೀಕೆಗೆ ಗುರಿಯಾದವರಲ್ಲ. ಟಿವಿ ಡಿಬೆಟ್ಗಳಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಇವರು ಕಾಣಿಸುತ್ತಿದ್ದಿದ್ದು ಟಿವಿಯಲ್ಲಿ ಕೇವಲ ಮಹಾಮಸ್ತಾಕಾಭಿಷೇಕದಿಂದ ಮಾತ್ರ ಎಂಬುದು ವಿಶೇಷ.
• ಪ್ರಾಕೃತದ ಜ್ಞಾನ ಭಂಡಾರ ಶ್ರೀಸಾಮಾನ್ಯನ ಕೈಗೆ ಸಿಗುವಂತೆ ಮಾಡಲು ಶ್ರೀಗಳು ಬೆಂಗಳೂರಿನಲ್ಲಿ ‘ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್’ ಸ್ಥಾಪಿಸಿದ್ದರು.