ನವ ದೆಹಲಿ,ಫೆ.19 : ತಾಯ್ನಾಡಿಗಾಗಿ ಹೋರಾಡಿದ ಶೂರ, ದೇಶಭಕ್ತ ಛತ್ರಪತಿ ಶಿವಾಜಿ ಅವರ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನೊಳಗೊಂಡು ಹಲವು ಪ್ರಮುಖ ನಾಯಕರು ಶುಭ ಹಾರೈಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ಶಿವಾಜಿ ಜಯಂತಿಯ ಶುಭಾಶಯವನ್ನು ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.
ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಹುಟ್ಟಿ ತಾಯ್ನಾಡಿಗಾಗಿ ಹೋರಾಡಿ ಮಡಿದ ಅನೇಕ ವೀರಾಧಿವೀರರಿದ್ದಾರೆ. ಅಂತಹ ವೀರರಲ್ಲಿ ಇಂದು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯವರು ಸೇರಿಕೊಂಡಿದ್ದಾರೆ. ಭಾರತ ದೇಶ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಇಂದು ಶಿವಾಜಿ ಅವರ 391ನೇ ಜನ್ಮ ದಿನಾಚರಣೆ. ತಾಯಿ ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸನ್ನು ಕಂಡವರು.
ಶಿವಾಜಿ, ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆ ಎನ್ನುವ ದೃಷ್ಟಿಯಲ್ಲಿ ಭಾರತದ ಸಹಸ್ರ ಸಹಸ್ರ ಮಂದಿ ಶಿವಾಜಿಯನ್ನು ಅನುಸರಿಸುವವರಿದ್ದಾರೆ.
ಇಡೀ ದೇಶದಾದ್ಯಂತ ಇಂದು ಶಿವಾಜಿ ಮಹಾರಾಜ್ ಅವರ 391ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಇನ್ನು, ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಶಿವಾಜಿಯವರಿಗೆ ಸಲ್ಲಿಸುವ ಗೌರವಾರ್ಥವಾಗಿ ಸರ್ಕಾರಿ ರಜಾ ದಿನವೆಂದು ಘೋಷಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನಿತಿನ್ ಗಡ್ಕರಿ ಸೇರಿ ದೇಶದ ಪ್ರಮುಖ ರಾಜಕೀಯ ನಾಯಕರು, ಕ್ರಿಕೆಟಿಗರು ಈ ಶುಭ ಸಂದರ್ಭದಲ್ಲಿ ಶುಭಾಶಯ ತಿಳಿಸಿದ್ದಾರೆ.
.ಛತ್ರಪತಿ ಶಿವಾಜಿಯವರಿಗೆ ಪ್ರಣಾಮಗಳು. ಜೈ ಮಾ ಭವಾನಿ” ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬರೆದುಕೊಂಡಿದ್ದಾರೆ. ಶಿವಾಜಿ ಮಹಾರಾಜ್ ಅವರಿಗೆ ಗೌರಾವರ್ಪಣೆ. ಅವರ ಧೈರ್ಯ ಮತ್ತು ತ್ಯಾಗ ಮುಂದಿನ ತಲೆಮಾರಿಗೆ ಪ್ರಭಾವಬೀರಲಿ ಎಂದು ಕ್ರಿಕೆಟಿಗ ಅಜಿಂಕ್ಯಾ ರಹಾನೆ ಟ್ವೀಟ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.ಶಿವಾಜಿಯವರು ತನ್ನ ಸಾಮ್ಯಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದಾರೆ.