ಯುವ ನಿರ್ದೇಶಕ ಮನು ಶೆಟ್ಟಿಹಳ್ಳಿ ನಿರ್ದೇಶನದ ಕುರ್ಚಿ `ಚಿತ್ರ’ದ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಸಮಾರಂಭ ಕಲಾವಿದರ ಸಂಘದ ರಾಜ್ ಕುಮಾರ್ ಭವನದಲ್ಲಿ ನೆರವೇರಿತು. ಹಿರಿಯ ನಟ ದೊಡ್ಡಣ್ಣ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಗೊಳಿಸಿ ಶುಭ ಕೋರಿದರು.
“ಒಂದಷ್ಟು ವಿಭಿನ್ನವಾದ ಪಾತ್ರಗಳ ಜೊತೆಗೆ ವಾಸ್ತವದ ತಳಹದಿಯಲ್ಲಿರುವ ಚಿತ್ರ ಇದು” ಎಂದು ನಿರ್ದೇಶಕರು ಹೇಳಿದರು. ಚಿತ್ರವನ್ನು ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಿದ್ದು, ಮುಂಬೈ, ಚೆನ್ನೈ ಮತ್ತು ಕರ್ನಾಟಕದಲ್ಲಿ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ರಾಜಕೀಯ, ರೌಡಿಸಂ, ಕಾನೂನು ವ್ಯವಸ್ಥೆ ಎಲ್ಲವೂ ಇದೆ. ಆದರೆ ಇದು ನಾಯಕ ಪ್ರಧಾನ ಚಿತ್ರವಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ಪಾತ್ರವೇ ನಾಯಕ ಎಂದುಕೊಂಡರಾಯಿತು. ಯಾಕೆಂದರೆ ಪ್ರತಿಯೊಂದು ಪಾತ್ರಗಳಿಗೂ ಇಲ್ಲಿ ಪ್ರಾಮುಖ್ಯತೆ ಇದೆ” ಎಂದು ನಿರ್ದೇಶಕ ಮನು ಶೆಟ್ಟಿಹಳ್ಳಿ ತಿಳಿಸಿದರು.
ಚಿತ್ರದಲ್ಲೊಂದು ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ದಿನೇಶ್ ಮಂಗಳೂರು ಮಾತನಾಡಿ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ದಾಸರು ಹಾಡಿದ್ದರು. ಚಿತ್ರದಲ್ಲಿ ಎಲ್ಲರೂ ಕುರ್ಚಿಗಾಗಿಯೇ ಏನನ್ನಾದರೂ ಮಾಡುತ್ತಿರುತ್ತಾರೆ’ ಎಂದರು. ತಾವು ಅಭಿನಯಿಸಿದಡೇಸ್ ಆಫ್ ಬೋರಾಪುರ’ ಚಿತ್ರದ ಮೂಲಕ ನಿರ್ದೇಶಕರ ಪರಿಚಯವಾಗಿತ್ತು. ತುಂಬ ಚೆನ್ನಾಗಿ ಚಿತ್ರ ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ನಿರ್ಮಾಪಕ ಮತ್ತು ಸಂಕಲನಕಾರರಾಗಿರುವ ಅನಿಲ್ ಅವರು “ಇದು ನಮ್ಮ ಬ್ಯಾನರ್‌ನಲ್ಲಿ ಎರಡನೇ ಚಿತ್ರ. ಈ ಹಿಂದೆ ತಮಿಳು ಮಾಡಿದ್ದೆ. ಕುರ್ಚಿ’ ಚಿತ್ರದ ಕೇಳಿದ ಆತ್ಮೀಯರೆಲ್ಲ ಇಂದು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಬಹುದೆನ್ನುವ ಭರವಸೆ ತೋರಿದ್ದಾರೆ. ಹಾಗಾಗಿಯೇ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ” ಎಂದು ಭರವಸೆಯ ಮಾತುಗಳನ್ನಾಡಿದರು. ಚಿತ್ರದಲ್ಲಿ ಅಚ್ಯುತ್ ಕುಮಾರ್, ಶಫಿ, ದೊಡ್ಡಣ್ಣ, ನಾಗೇಂದ್ರ ಅರಸ್ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. “ನಾನು ನಿರ್ದೇಶಕರ ಮೊದಲ ಚಿತ್ರರಣಹೇಡಿ’ಗೆ ಸಂಕಲನಕಾರರಾಗಿದ್ದೆ. ಈ ಚಿತ್ರದಲ್ಲಿ ಪಾತ್ರ ನೀಡಿದ್ದಾರೆ ಎಂದರು ನಟ ನಿರ್ದೇಶಕ ನಾಗೇಂದ್ರ ಅರಸ್. ವೇದಿಕೆಯಲ್ಲಿ ಯುವ ನಟ ಸಹನಿರ್ಮಾಪಕ ವಾಸುಕಿ, ನಿರ್ದೇಶಕ ಮನು ಶೆಟ್ಟಿಹಳ್ಳಿಯವರ ಗುರು ಸ್ಥಾನೀಯ ಚಂದ್ರಶೇಖರ ಬಂಡಿಯಪ್ಪ, ಚಿತ್ರಲೋಕ.ಕಾಮ್ ನ ವೀರೇಶ್ ಮೊದಲಾದವರು ಉಪಸ್ಥಿತರಿದ್ದರು.