Karnataka:ಕರ್ನಾಟಕ ರಾಜ್ಯ ದಂತ ಮಂಡಳಿ ಚುನಾವಣೆಯ ವ್ಯಾಪಕ ಅಕ್ರಮ ನಡೆದಿದೆ. ಈ ಚುನಾವಣೆಯು ಪಾರದರ್ಶಕವಾಗಿ ನಡೆದಿಲ್ಲ. ಅಕ್ರಮವಾಗಿ ಮತ ಪತ್ರಗಳನ್ನು ಸಂಗ್ರಹಿಸಲಾಗಿದೆ. ಮಂಡಳಿಯ ಚುನಾವಣಾ ನೀತಿ ನಿಯಮಗಳನ್ನು ಗಾಳಿಗೆ ತೂರಿ (cheating in dental election) ಚುನಾವಣೆ ಮಾಡಲಾಗಿದೆ ಎಂದು ಆರೋಪಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿರುವ ಮಾನ್ಯ
ಉಚ್ಚನ್ಯಾಯಾಲಯ(Supreme Court) ಕರ್ನಾಟಕ ರಾಜ್ಯ ದಂತ ಮಂಡಳಿಯ ಚುನಾವಣೆಯ ಮತ ಎಣಿಕೆ ಹಾಗೂ ಫಲಿತಾಂಶವನ್ನು ಘೋಷಿಸುವ ಪ್ರಕ್ರಿಯೆಗೆ ತಡೆ ನೀಡಿದೆ.
ನ್ಯಾಯಾಧೀಶರಾದ ಎಂ. ನಾಗಪ್ರಸನ್ನ (M.Nagaprasanna)ಅವರು ಈ ಆದೇಶವನ್ನು ಗುರುವಾರ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ದಂತ ಮಂಡಳಿ ಚುನಾವಣಾ ಪ್ರಕ್ರಿಯೆಯು ಜನವರಿ 2 ರಿಂದ ಜನವರಿ 23 2023ರ ವರೆಗೆ ನಡೆದಿದೆ. ಮಂಡಳಿಯಲ್ಲಿ ೫೫೦೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಆದ್ರೆ ಮತಪಟ್ಟಿಯಲ್ಲಿರುವುದು ಕೇವಲ ೧೪೬೨೩ ಸದಸ್ಯರ ಹೆಸರುಗಳು. ಇನ್ನು ಮಂಡಳಿಯ ಸದಸ್ಯರಿಗೆ ಮತಪತ್ರಗಳು ತಲುಪಬೇಕು ಮತ್ತು ಅವರು ಮತಹಾಕಿ ಅದನ್ನು ಅಂಚೆಯ ಮೂಲಕ ಕಳುಹಿಸಿಕೊಡಬೇಕು.
ಆದ್ರೆ ಅರ್ಜಿದಾರರು ಸಲ್ಲಿಸಿರುವ ದೂರಿನ ಪ್ರಕಾರ ೫೫೦೦೦ ಸದಸ್ಯರ ಪೈಕಿ ೧೪೬೨೩ ಜನರ ಹೆಸರುಗಳು ಮತದಾರರ ಪಟ್ಟಿಯಲ್ಲಿವೆ. ಉಳಿದವರ ಹೆಸರುಗಳು ಕಾಣೆಯಾಗಿವೆ.
ಮತದಾರರ ಪರಿಷ್ಕೃತ ಪಟ್ಟಿ ತಯಾರಿಸಲಾಗಿದೆ ಅಂತ ಚುನಾವಣಾಧಿಕಾರಿಗಳು ಹೇಳುತ್ತಿದ್ದಾರೆ. ಅರ್ಜಿದಾರರ ಹೆಸರೂ ಕೂಡ ಮತದಾರರ ಪಟ್ಟಿಯಲ್ಲಿ ಇಲ್ಲ.
ಅರ್ಜಿದಾರರು ಸೇರಿದಂತೆ ಮಂಡಳಿಯಲ್ಲಿ ಹಲವಾರು ವರ್ಷಗಳಿಂದ ಸದಸ್ಯರಾಗಿರುವ ಹಿರಿಯ (cheating in dental election) ಸದಸ್ಯರ ಹೆಸರುಗಳನ್ನು ಕೈಬಿಡಲಾಗಿದೆ.
ಇನ್ನು ಅನೇಕರಿಗೆ ಮತಪತ್ರಗಳನ್ನು ಕಳುಹಿಸಲಾಗಿದೆ ಆದ್ರೆ ಅವು ಮತದಾರರಿಗೆ ತಲುಪಿಲ್ಲ. ಕೆಲವರ ಮತಪತ್ರಗಳು ತಪ್ಪು ವಿಳಾಸಕ್ಕೆ ಬಂದು ತಲುಪಿವೆ.
ಮತಪಟ್ಟಿಯಲ್ಲಿ ಮತದಾರರ ದೂರವಾಣಿ ಸಂಖ್ಯೆಗಳನ್ನೂ ನಮೂದಿಸಿಲ್ಲ ಎಂದು ಅರ್ಜಿದಾರರಾದ ಡಾ. ರೂಹಿ ರೆಹೀನಾ ಮಲ್ಲಿಕ್(Dr.Ruhi Reheema Mallick) ತಮ್ಮ ಮನವಿಯ ಲ್ಲಿ ಸ್ಪಷ್ಟವಾಗಿ ಸಾಕ್ಷಿ ಸಮೇತವಾಗಿ ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಕರ್ನಾಟಕ ರಾಜ್ಯ ದಂತ ಮಂಡಳಿ ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುತ್ತಿಲ್ಲ. ಚುನಾವಣಾ ಅಧಿಕಾರಿಗಳು ಅಕ್ರಮ ತಡೆಯಲು ವಿಫಲರಾಗಿದ್ದಾರೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿದೆ ಎಂದು ದೂರು ಕೊಟ್ರೂ ಆ ಬಗ್ಗೆ ಕ್ಯಾರೆ ಎನ್ನದೆ ಅಕ್ರಮದಾರರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ ಅನ್ನೋ ದೂರುಗಳು ನಿರಂತರವಾಗಿ ಕೇಳಿಬರುತ್ತಿದ್ದವು.
ಆದ್ರೆ ಅಧಿಕಾರಿ ಅಕ್ರಮ ತಡೆಯುವಲ್ಲಿ ವಿಫಲರಾದ ಕಾರಣ ಮಾರ್ಚ್ ೩ ರವರೆಗೆ ಚುನಾವಣೆ ಪ್ರಕ್ರಿಯೆಗೆ ನ್ಯಾಯಾಲಯ ಬ್ರೇಕ್ ಹಾಕಿದೆ.
ಈಗ ಸರ್ಕಾರ ಎಚ್ಚೆತ್ತುಕೊಂಡು ಮತದಾನವನ್ನು ಪಾರದರ್ಶಕವಾಗಿ ನಡೆಸಿಕೊಡಬೇಕು ಎಂಬುದು ಮಂಡಳಿಯ ಸದಸ್ಯರ ಆಗ್ರಹವಾಗಿದೆ.