ಸ್ವಲ್ಪ ಆರೋಗ್ಯ ಸರಿಯಿಲ್ಲ ಎಂದು ವೈದ್ಯರ ಬಳಿ ಹೋದರೂ ಅವರು ಮೊದಲು ಪರೀಕ್ಷಿಸುವುದು ನಿಮ್ಮ ನಾಲಿಗೆಯನ್ನು.
ನಾಲಿಗೆ (Tongue) ಹಾಗೂ ಕಿರುನಾಲಿಗೆಯನ್ನು ನೋಡಿ ಅರ್ಧ ನಿಮಿಷದಲ್ಲಿ ನಿಮ್ಮ ಪೂರ್ತಿ ಆರೋಗ್ಯವನ್ನು ಅಳೆಯುತ್ತಾರೆ ವೈದ್ಯರು.

ಏಕೆಂದರೆ ನಾಲಿಗೆ ನಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರವನ್ನು ಹೇಳುತ್ತದೆ. ಆರೋಗ್ಯದ ವಿಷಯಕ್ಕೆ ಬಂದರೆ ನಾವು ನಾಲಿಗೆಯನ್ನು ಪರೀಕ್ಷೆ ಮಾಡಿಕೊಳ್ಳುವುದು ಒಳಿತು.
ಬ್ರಶ್ ಮಾಡುವಾಗ ಹೊರತುಪಡಿಸಿದರೆ ಅದನ್ನು ನಾವು ನೋಡುವುದೂ ಇಲ್ಲ. ಆದರೆ, ನಮ್ಮ ಜೈವಿಕ ಕ್ರಿಯೆಗಳಿಗೆ ನಾಲಿಗೆ ಬೇಕೇ ಬೇಕು. ಅದಿಲ್ಲದೆ ನಾವು ತಿನ್ನಲಾಗುವುದಿಲ್ಲ, ಕುಡಿಯಲಾಗುವುದಿಲ್ಲ, ರುಚಿ ನೋಡಲು, ಜಗಿಯಲು, ಮಾತನಾಡಲು ಯಾವುದಕ್ಕೂ ಆಗುವುದಿಲ್ಲ. ನಮ್ಮ ನಾಲಿಗೆಗೆ ಚರ್ಮವಿಲ್ಲ. ಬದಲಿಗೆ ಅದು ಪಿಂಕ್ ಆದ ಒದ್ದೆ ಟಿಶ್ಯೂ, ಮ್ಯುಕೋಸಾದಿಂದ ಕವರ್ ಆಗಿದೆ.
ಅಲ್ಲದೆ ರಕ್ತವು ಇಲ್ಲಿಗೆ ಹೆಚ್ಚಾಗಿ ಹರಿದು ಇದನ್ನು ನಿಭಾಯಿಸುತ್ತದೆ. ಈ ಕೆಂಪು ರಕ್ತ ಹಾಗೂ ಪಿಂಕ್ ಮ್ಯುಕೋಸಾ ಸೇರಿ ನಾಲಿಗೆ ತನ್ನ ಬಣ್ಣ ಪಡೆದುಕೊಂಡಿದೆ. ಆರೋಗ್ಯಯುತ ನಾಲಿಗೆ ಯಾವಾಗಲೂ ಈ ಪಿಂಕ್-ಕೆಂಪು ಮಿಕ್ಸ್ ಬಣ್ಣವನ್ನೇ ಹೊಂದಿರುತ್ತದೆ.
ಹಾಗಾಗಿ, ಬಣ್ಣ ಸ್ವಲ್ಪ ಬದಲಾದರೂ ಅದನ್ನು ಅನಾರೋಗ್ಯಕಾರಿ ಎಂದೇ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನಾಲಿಗೆ ಕಪ್ಪು, ನೀಲಿ, ಕೋರೈಸುವ ಕೆಂಪು, ನೇರಳೆ, ಬಿಳಿ ಹಾಗೂ ಹಳದಿ ಬಣ್ಣಕ್ಕೆ ತಿರುಗಬಹುದು. ಹಾಗಾದರೆ ಈ ಬಣ್ಣಗಳು ಯಾವ ಅನಾರೋಗ್ಯವನ್ನು ಸೂಚಿಸುತ್ತವೆ ನೋಡೋಣ.

ನಾಲಿಗೆ ಬಿಳಿಯಾಗುವುದು ಬಹಳ ಸಾಮಾನ್ಯವಾಗಿ ಕಂಡುಬರುವಂಥದ್ದು. ಇದು ಸಾಮಾನ್ಯವಾಗಿ ಬಾಯಿಯನ್ನು ಸರಿಯಾಗಿ ಸ್ವಚ್ಛವಾಗಿಟ್ಟುಕೊಳ್ಳುತ್ತಿಲ್ಲ ಎಂದು ತೋರಿಸುತ್ತದೆ. ಬಿಳಿ ನಾಲಿಗೆ ಉಂಟಾಗಲು ಇನ್ನೂ ಕೆಲವು ಕಾರಣಗಳಿವೆ. https://vijayatimes.com/sourav-ganguly-appreciates-virat-kohli/
ಕ್ಯಾಂಕರ್ ಸೋರ್ : ನಾಲಿಗೆ ಮಧ್ಯದಲ್ಲಿ ಬಿಳಿ ಅಥವಾ ಹಳದಿ ಬಣ್ಣ ಕಂಡುಬರುತ್ತಿದ್ದು, ಅದು ನೋಯುತ್ತಿದ್ದರೆ ಕ್ಯಾಂಕರ್ ಸೋರ್ ಎನ್ನಲಾಗುತ್ತದೆ. ನೋವಿರುತ್ತದೆ ಎನ್ನುವುದನ್ನು ಬಿಟ್ಟರೆ ಇದು ಅಪಾಯಕಾರಿಯೇನಲ್ಲ. ಆದರೆ, ಪದೇ ಪದೆ ಈ ರೀತಿ ಆಗುತ್ತಿದ್ದರೆ ಮಾತ್ರ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
https://vijayatimes.com/simple-health-tips-for-mental-health/

ಲುಕೋಪ್ಲೇಕಿಯಾ : ತಂಬಾಕು ಅಗಿದು ಅಗಿದು ಕಾಣಿಸಿಕೊಳ್ಳುವ ಸಮಸ್ಯೆ ಇದು. ನಾಲಿಗೆಯಲ್ಲಿ ಕಿರಿಕಿರಿ ಉಂಟಾಗುವುದರ ಜೊತೆಗೆ, ನಾಲಿಗೆ ಹಾಗೂ ಕೆನ್ನೆಯ ಒಳಭಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಓರಲ್ ತ್ರಶ್ : ಕ್ಯಾಂಡಿಡಾ ಅಲ್ಬಿಕಾನ್ಸ್ ಎಂಬ ಯೀಸ್ಟ್ ನಾಲಿಗೆಯ ಮೇಲೆ ಬಿಳಿ ಪ್ಯಾಚ್ ಬರಲು ಕಾರಣವಾಗುತ್ತದೆ. ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಹಾಗೂ ವೃದ್ಧರಲ್ಲಿ ಇದು ಜಾಸ್ತಿ ಕಂಡು ಬರುತ್ತದೆ.

ಕಪ್ಪು ನಾಲಿಗೆ : ಕಪ್ಪು ನಾಲಿಗೆಯು ಆ್ಯಂಟಿಬಯೋಟಿಕ್ಸ್ ರೀತಿಯ ಒಟಿಸಿ ಮೆಡಿಕೇಶನ್ ತೆಗೆದುಕೊಳ್ಳುವುದರಿಂದ, ಮೌತ್‌ವಾಶ್ ಉತ್ಪನ್ನಗಳ ಬಳಕೆಯಿಂದ, ಬಾಯಿ ಸ್ವಚ್ಛತೆ ಕೊರತೆಯಿಂದ ಹಾಗೂ ತಂಬಾಕಿನ ಬಳಕೆಯಿಂದಲೂ ಆಗಬಹುದು. ಇದೇನು ಅನಾರೋಗ್ಯ ಸುಚಿಸುವ ಸ್ಥಿತಿಯಲ್ಲ. ಇನ್ನು, ನಾಲಿಗೆ ನೀಲಿಯಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. https://vijayatimes.com/simple-beauty-tips-are-here/
ದೇಹದ ಇತರ ಭಾಗಗಳಲ್ಲಿ ತೋರುವಂತೆ ನೀಲಿ ನಾಲಿಗೆ ಕೂಡಾ ರಕ್ತ ಸಂಚಾರ ಇಲ್ಲದಿರುವುದನ್ನು ಸೂಚಿಸುತ್ತದೆ. ನೀಲಿ ನಾಲಿಗೆಯು ಆಕ್ಸಿಜನ್ ಪೂರೈಕೆ ಕಳೆದುಕೊಂಡದ್ದನ್ನು ಕೂಡಾ ಸೂಚಿಸುತ್ತಿರಬಹುದು. ಇದನ್ನು ಸೈಯನೋಸಿಸ್ ಎನ್ನಲಾಗುತ್ತದೆ. ಇದು ರಕ್ತ ಸಂಬಂಧಿ ಕಾಯಿಲೆಗಳು, ರಕ್ತನಾಳ ರೋಗಗಳು ಹಾಗೂ ಕಾರ್ಡಿಯಾಕ್ ಸಮಸ್ಯೆಯಿದ್ದಾಗ ಆಗಬಹುದು.

ಹಳದಿ : ನೇರಳೆಯಂತೆ ಹಳದಿ ಬಣ್ಣ ಕೂಡಾ ಅಪರೂಪವೇ. ಕಪ್ಪಿಗೆ ತಿರುಗುವ ಮುನ್ನ ಹಳದಿಯಾಗಬಹುದು. ಇದು ಜಾಂಡೀಸ್ ಖಾಯಿಲೆಯನ್ನು ಕೂಡ ಸೂಚಿಸಬಹುದು. ಬ್ರೈಟ್ ರೆಡ್ ನಾಲಿಗೆಗೆ ಗ್ಲಾಸಿಟಿಸ್- ನಾಲಿಗೆಯ ಉರಿ ಸಾಮಾನ್ಯ ಕಾರಣ. ಆದರೆ, ಇದು ಪೋಷಕಾಂಶಗಳ ಕೊರತೆಯನ್ನೂ ಸೂಚಿಸುತ್ತಿರಬಹುದು. ಫೋಲಿಕ್ ಆ್ಯಸಿಡ್ ಹಾಗೂ ವಿಟಮಿನ್ ಬಿ 12 ಕೊರತೆಯಾದಾಗ ಅದರಿಂದ ಈ ರೀತಿ ಕಣ್ಣು ಕುಕ್ಕುವ ಕೆಂಪು ಬಣ್ಣಕ್ಕೆ ನಾಲಿಗೆ ತಿರುಗಬಹುದು.